ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುರಸಗ್ರಂಥಮಾಲಾ, ಕರಕೊಂಡು ಹೋಗಿ ಅಲ್ಲಿ ಪಟ್ಟಾಭಿಷೇಕವನ್ನು ಮಾಡಿದರು. ಖಂಡೋಬನ ಸ್ವಾರ್ಥತ್ಯಾಗದಿಂದ ಇಂಥ ಸುದಿನವು ಒದಗಿರಲು, ಖಂಡೋಬನು ಜಿಂಜಿಗೆ ಮುಟ್ಟಿದ ಕೂಡಲೆ ಆತನ ಹೆಂಡತಿಯು ಮರಣಹೊಂದಿದಳು ! ಹರಹರ ! ಸಸ್ಯಶಾಲಿಗಳಿಗೆ ಸುಖ ವೆಲ್ಲಿಂದ ದೊರೆಯಬೇಕು ? ೨೩ನೆಯ ಪ್ರಕರಣ – ಮರಾಟರ ಶಾರ್ಯ -- - -- ಈಮೇರೆಗೆ ರಾಜಾರಾಮ ಮಹಾರಾಜರು ಜಿಂಜಿಗೆ ಬಂದದ್ದರಿಂದ ಮರಾಟರಿಗೆ ಬಹಳ ಸಂತೋಷವಾಯಿತು, ಬಾದಶಹನನ್ನು ಹಣಿದು ಆತನಿಂದ ತಮ್ಮ ರಾಜ್ಯವನ್ನು ಮತ್ತೆ ಕಸಿದುಕೊಳ್ಳಲಿಕ್ಕೆ ಅವರಲ್ಲಿ ಹೊಸ ಉತ್ಸಾಹವು ಹುಟ್ಟಿತು. ಮೊಗಲರ ವಿಸ್ತಾರ ಪಾದ ಸೈನ್ಯದ ಮೇಲೆ ಅಕಸ್ಮಾತ್ತಾಗಿ ತಮ್ಮ ಕುದುರೆಗಳನ್ನು ನೂಕಿ ಬರ್ಚಿಗಳಿಂದ ಆ ಸೈನ್ಯವನ್ನು ದಿಕ್ಕುಪಾಲಾಗುವಂತೆ ಓಡಿಸುವ ಸಾಹಸದ ಕಾರ್ಯಕ್ಕೆ ಭಾಲೆರಾಯಿ ಅನ್ನು ವರು, ಇಂಥ ಭಾಲೆರಾಯಿಯಲ್ಲಿ ಪ್ರವೀಣರಾಗಿದ್ದ ಶರವೀರರಿಂದ ಕೂಡಿ ಸಂತಾಜಿ ಯು ಸ್ವರಾಜ್ಯವನ್ನು ತಿರುಗಿ ಸಂಪಾದಿಸುವದಕ್ಕಾಗಿ ಆತುರಪಟ್ಟನು, ರಾಜಾರಾಮನನ್ನು ಜಿಂಜೆಯಲ್ಲಿ ಸುರಕಿತವಾಗಿ ಇರಿಸಿದ ಮೇಲೆ ಧನಾಜಿ, ಸಂತಾಜೆಯೆಂಬ ವೀರರ ಜೋಡು ಹದ್ದಿನಂತೆ ಎರಗಿ ಮೊಗಲರ ದೂಳಹಾರಿಸಹತ್ತಿತು ಅಲ್ಲಲ್ಲಿ ಶತ್ರುಸೈನ್ಯಗಳು ಹಣ್ಣಾಗ ಹತ್ತಿದವು. ಸಂತಾಜಿಯು ಶೇಖನಿಜಾಮ, ಸರ್ಜಿಖಾನ, ರಣಮಸ್ತಖಾನ, ಜಾನಸ ಖಾನರಂಥ ಶೂರ ವಜೀರರನ್ನು ಮೊದಲೇ ಮಣ್ಣು ಗೂಡಿಸಿದ್ದರಿಂದ ಆತನ ಅಂಜಿ ಕೆಯು ಔರಂಗಜೇಬನ ಹೃದಯದಲ್ಲಿ ದಿನದಿನಕ್ಕೆ ಹೆಚ್ಚು ಬಾಧಿಸಹತ್ತಿತು, ಸಂತಾಜೆಯು ಮತ್ತೊಮ್ಮೆ ಮಿರಜಿಯ ಕಡೆಗೆ ಮುಗಿಬಿದ್ದು, ಪ್ರಬಲವಾಗಿದ್ದ ' ಇಪ್ಪತ್ತು ಇಪ್ಪತ್ತೈದು ಜನ ದೇಶಮುಖರನ್ನು ನಿರ್ಮೂಲವಾಡಿದನು, ಸಂತಾಜೆಯ ಈ ಹಾವಳಿಯಿಂದ ಮೊ ಗಲ ಸರದಾರರು ಬಹಳ ಹಣ್ಣಾದರು. ಸರ್ಜೆಖಾನನು ಸಿಟ್ಟಿಗೆದ್ದು ಪಲ್ಲಾಳಗಡ, ಪಾವನಗಡಗಳನ್ನು ಬಲವಾಗಿ ಮುತ್ತಿ ದುರ್ಗಗಳನ್ನು ಬೇಗನೆ ವಶಮಾಡಿಕೊಳ್ಳಲಿಕ್ಕೆ ಆತುರಪಟ್ಟನು. ಬಾದಶಹನು ಮೊದಲು ಸಂಪೂರ್ಣ ಮಹಾರಾಷ್ಟ್ರವನ್ನು ಗೆದ್ದು, ಆಮೇಲೆ ಕರ್ನಾಟಕದಲ್ಲಿ ಕಾಲಿಡಬೇಕೆಂದು ನಿಶ್ಚಯಿಸಿದನು. ಈ ಕಾಲದಲ್ಲಿ ಮಹಾರಾಷ್ಟ್ರ ಸರದಾರರಲ್ಲಿ ಒಡಕು ಹುಟ್ಟದೆ ಅವರು ಒಕ್ಕಟ್ಟಿನಿಂದ ನಡೆದಿದ್ದರೆ, ಸ್ವರಾಜ್ಯಸಂಪಾದನದ ಕಾರ್ಯವು ಬಹು ಸುಲಭವಾಗುತ್ತಿತ್ತು, ಆದರೆ ದುರ್ದೈವದಿಂದ ಹಾಗಾಗಲಿಲ್ಲ. ಸಂತಾಜಿಯು ಅತ್ಯಂತ ಕಾರ್ಯಾಸಕ್ತನಾಗಿ ಏಕನಿಷೆ ಯಿಂದ ಸ್ವಾಮಿಯ ಹಿತಕ್ಕಾಗಿ ದೇಹವನ್ನು ಸವಿಸಹತ್ತಿದ್ದ ಪ್ರಸಂಗದಲ್ಲಿ ಆತನಿಗೆ ಮುಳುವು ಆಯಿತು. ಮೇಲೆ ಹೇಳಿದಂತೆ ಸರ್ಜೇಖಾನನು ಪಲ್ಲಾಳಗಡವನ್ನು ಎಷ್ಟು ಬಲ ವಾಗಿ ಮುತ್ತಿದರೂ, ದುರ್ಗದೊಳಗಿದ್ಧ ಕಾಗಲಕರನು ಆತನಿಗೆ ಸೊಪ್ಪಹಾಕಲಿಲ್ಲ.