ವಿಷಯಕ್ಕೆ ಹೋಗು

ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನಪುಣ್ಯ ೨೫ ಕಾಗಲಕರನ ಶೌರ್ಯಕ್ಕೆ ಮೊಗಲರು ತತ್ತರಿಸಿದರು, ಕಾಗಲಕರನು ಅಕಸ್ಮಾತ್ತಾಗಿ ದುರ್ಗದಿಂದ ಹೊರಬಿದ್ದು ಬಂದು ಮೊಗಲರ ರುಂಡಗಳನ್ನು ಚಂಡಾಡಿ ಅವನ್ನು ರಾಶಿ ಯಾಗಿ ಒಟ್ಟ ಅದರ ಮೇಲೆ ತೋಪುಗಳನ್ನಿಟ್ಟು ಶತ್ರುಗಳನ್ನು ಹಣಿಯಹತ್ತಿದನು. ಸರ್ಜಿಖಾನನು ಕಾಗಲಕರನ ಈ ಪರಾಕ್ರಮವನ್ನು ನೋಡಿ ಬೆದರಿದನು. ಆತನು ಮಹಾರಾಷ್ಟರ ಸಾಹಸ-ಪರಾಕ್ರಮಗಳನ್ನು ವಿವರಿಸಿ ಬಾದಶಹನಿಗೆ ಪತ್ರ ಬರೆದು, ತನ್ನ ಸಹಾಯಕ್ಕಾಗಿ ಹೊಸ ಸೈನ್ಯವನ್ನು ಕಳಿಸಬೇಕೆಂದು ಬೇಡಿಕೊಂಡನು. ಆಗ ಬಾದಶಹ ನು ಕಾಲು ಅಪ್ಪಳಿಸುತ್ತ ಸ್ವತಃ ಸೈನ್ಯದೊಡನೆ ಸಲ್ಲಾಳಗಡಕ್ಕೆ ಬಂದನು. ಹೀಗೆ ಮೊಗ ಲರು ಪಲ್ಲಾಳಗಡವನ್ನು ಬಿಗಿಯಾಗಿ ಮುತ್ತಲು, ಕಾಗಲಕರನು ತನ್ನ ಸಹಾಯಕ್ಕಾಗಿ ಹೊಸ ಸೈನ್ಯವನ್ನು ಕಳಿಸಬೇಕೆಂದು ರಾಮಚಂದ್ರಪಂತನಿಗೆ ಪತ್ರ ಬರೆದನು. ಆಗ ರಾವ ಚಂದ್ರವಂತನು, ಈ ಪ್ರಸಂಗದಲ್ಲಿ ಪಲ್ಲಾಳಗಡಕ್ಕೆ ಹೋಗಬೇಕೆಂದು ಸಂತಾಜಿಗೆ ಪತ್ರ ವನ್ನು ಬರೆದನು; ಆದರೆ 'ಕಾಸಿಮಖಾನನ ಸಮಾಚಾರವನ್ನು ತಕ್ಕೊಳ್ಳುವದರಲ್ಲಿ ತೊಡ ಗಿದ್ದ ಸಂತಾಜಿಯು, ಪಲ್ಲಾಳಗಡಕ್ಕೆ ಹೋಗಲಿಲ್ಲ. ಮರಾಟರ ದುರ್ದೈವದಿಂದಲೇ ಈ ದುರ್ಬುದ್ದಿಯು ಸಂತಾಜಿಗೆ ಉತ್ಪನ್ನವಾಯಿತೆಂದು ಹೇಳಬಹುದು. ಸಂತಾಜೆಯ ಅತ್ಯಂ ತವಾದ ಕಾರ್ಯಾಸಕ್ತಿಯೇ ರಾಮಚಂದ್ರನಂತನ ವಿಕಲ್ಪಕ್ಕೆ ಕಾರಣವಾಯಿತು, ಸಂತಾ ಜಿಯು ಮಿಗಿಮಿರಿದನೋ, ಎಂಬ ಸಂಶಯವು ರಾಮಚಂದ್ರಪಂತನ ಮನಸ್ಸಿನಲ್ಲಿ ಉತ್ಪ ನ್ಯವಾಯಿತು. ತನ್ನ ಅಪ್ಪಣೆಯಂತೆ ಸಂತಾಜಿಯು ಕಾಗಲಕರನ ಸಹಾಯಕ್ಕೆ ಹೋಗ ದ್ದನ್ನು ನೋಡಿ ರಾಮಚಂದ್ರ ಸಂತನು ಕಾಗಲಕರನಿಗೆ ಸದ್ಯಕ್ಕೆ ನೀವು ದುರ್ಗವನ್ನು ಮೊಗಲರಿಗೆ ಬಿಟ್ಟು ಕೊಟ್ಟು ಬಾದಶಹನೊಡನೆ ಒಡಂಬಡಿಕೆ ಮಾಡಿಕೊಳ್ಳಿರಿ, ಮುಂದ ನೋಡೋಣ ” ಎಂದು ಪತ್ರವನ್ನು ಬರೆದನು, - ಹೀಗೆ ಪಲ್ಲಾಳಗಡವು ಬಾದಶಹನ ಕೈಸೇರಿತು. ಇನ್ನು ವಿಶಾಲಗಡವನು ಮೊಗಲರು ಮುತ್ತತಕ್ಕವರು. ವಿಶಾಲಗಡದಲ್ಲಿ ತಾರಾಬಾಯಿಯೇ ಮೊದಲಾದ ರಾಜ ರಾಮನ ಹೆಂಡಿರೂ, ಬೇರೆ ರಾಜಪರಿವಾರವೂ, ರಾಮಚಂದ್ರನಂತನೂ ಇರುತ್ತಿದ್ದರು ತಾರಾಬಾಯಿಯು ತುಂಬಿದ ಬಸಿರುಹೆಂಗಸಾಗಿದ್ದಳೆಂಒದನ್ನು ವಾಚಕರು ಬಲ್ಲರು. ರಾಜಪರಿವಾರವನ್ನು ಬಾದಶಹನಿಗೆ ಒಪ್ಪಿಸುವದು ಅತ್ಯಂತ ದೋಹವೆಂದು ಸ್ವಾಮಿನಿಷ್ಠ ಮರಾಟರು ತಿಳಿದುಕೊಂಡು, ಅದರ ಸಂರಕ್ಷಣಕ್ಕಾಗಿ ತನ್ನ ದೇಹವನ್ನ ರ್ಪಿಸಲಿಕ್ಕೆ ಅವರು ಸಿದ್ಧರಾಗಿದ್ದರು, ಈ ಪ್ರಸಂಗದಲ್ಲಿ ರಾಮಚಂದ್ರಪಂತನು ಬಹು ಚಿಂತಾಕ್ರಾಂತ ನಾದನು. ಸುತಾಜಿಯು ತನ್ನ ಆಜ್ಞೆಯನ್ನು ಉಲ್ಲಂಘಿಸಿದ್ದು ಸುಲಕ್ಷಣವಲ್ಲವೆಂದು ಆತನು ತಿಳಿದನು. ಈಗಿನ ಕಾಲವು ಮರಾಟರಿಗೆ ತೀರ ಪ್ರತಿಕೂಲವಾಗಿತ್ತು, ಪ್ರಬಲನೂ ವೈಭವಶಾಲಿಯೂ ಆದ ಔರಂಗಜೇಬನ ವಿರುದ್ದ ವಾಗಿ ಮರಾಟರಿಗೆ ಸಹಾಯಮಾಡು Eವರು ತೀರ ವಿರಲವಾಗಿದ್ದರು. ಜಗತ್ತು ಗೆದ್ದ ಎತ್ತಿನ ಬಾಲಹಿಡಿಯುವ ಸ್ವಾರ್ಥಕ ಬಗಣpಂದಲೇ ತುಂಬಿರುತ್ತದೆಂದು ಹೇಳಬಹುದು. ಸತ್ಯಪಕ್ಷಪಾತಿಗಳು ಜಗತ್ತು