ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀny ಸುರಸಗ್ರಂಥಮಾಲಾ, ನಲ್ಲಿ ಅತಿ ವಿರಲ. ರಾಜಾರಾಮನು ನಿಂತಲ್ಲಿ ನಿಲ್ಲಲಾರದೆ ದುರ್ಗದಿಂದ ದುರ್ಗಕ್ಕೆ ಓಡಿ ಹೋಗುತ್ತಿರುವಾಗ ಆತನ ಪಕ್ಷವನ್ನು ಯಾರು ವಹಿಸಬೇಕು? ಆದರೆ ಕೇವಲ ಸ್ವಾಮಿ ನಿಷ್ಠೆಯಿಂದ ಪ್ರೇರಿತರಾದ ಕೆಲವು ಜನ ಬ್ರಾಹ್ಮಣ ಮುತ್ಸದ್ದಿಗಳೂ, ಮರಾಠಾಸರದಾ ರರೂ ನಿಸ್ಪೃಹರಾಗಿ ಜೀವದ ಹಂಗುದೊರೆದು ತಮ್ಮ ಸ್ವಾಮಿಯ ಸಹಾಯಕ್ಕಾಗಿ ನಿಂತದ್ದರಿಂದ ಶಿವಪ್ರಭುವಿನ ವಂಶದ ಹೆಸರು ಹೇಳಲಿಕ್ಕಾದರೂ ಉಳಿದಿತ್ತು. ಇಂಥ ಸ್ವಾಮಿನಿಷ್ಠರಲ್ಲಿ ಸಂತಾಜಿಯು ಅಗ್ರಗಣ್ಯನೆಂದು ಎಲ್ಲರಂತೆ ರಾಮಚಂದ್ರಪಂತನೂ ತಿಳ ಕೊಂಡಿದ್ದನು; ಆದರೆ ಅಂಥ ಸಂತಾಜಿಯು ಈಗ ತಲೆಭಾರವಾಗಿ ತನ್ನ ಆಜ್ಞೆಯನ್ನು ಪಾಲಿಸದೆ ಹೋದದ್ದರಿಂದ, ರಾಮಚಂದ್ರಪಂತನಿಗೆ ಎಷ್ಟು ವ್ಯಸನವಾಗಿರಬಹುದೆಂಬ ದನ್ನು ವಾಚಕರೇ ತರ್ಕಿಸತಕ್ಕದ್ದು. ಸಂತಾಜಿಯು ಅಂತರಂಗದಿಂದ ಬಾದಶಹನಿಗೆ ಅನುಕೂಲವಾದರೆ, ತಮ್ಮ ಸರ್ವಸ್ವದ ನಾಶವಾಗುವದೆಂದು ರಾಮಚಂದ್ರಪಂತನು ಭಾವಿಸಿದನು. ಸಂತಾಜಿಯು ತಾನು ಸಂಪಾದಿಸಿದ ಸುಲಿಗೆಯನ್ನು ತನ್ನ ಬಳಿಯಲ್ಲಿಯೇ ಸಂಗ್ರಹಿಸುತ್ತ ಬಂದದೊಂದು ರಾಮಚಂದ್ರಪಂತನ ಸಂಶಯಕ್ಕೆ ಉತ್ತೇಜಕವಾಯಿತು' ತಮ್ಮ ಪಕ್ಷದ ಒಬ್ಬ ಅತ್ಯಂತ ಬಲಾಡ್ಯ ಸರದಾರನು ಬಾದಶಹನನ್ನು ಕೂಡಿದರೆ, ಸ್ವಾಮಿ ಕಾರ್ಯಕ್ಕೆ ಎಷ್ಟು ಘಾತಕವಾಗುವದೋ ಎಂದು ರಾಮಚಂದ್ರ ಪಂತನು ಬಗೆ ಬಗೆ ಯಾಗಿ ಚಿಂತಿಸತೊಡಗಿದನು. ಈ ಮೇರೆಗೆ ಒಬ್ಬ ಪ್ರಸಿದ್ದ ಮಹಾರಾಷ್ಟ್ರ ಮುತ್ಸದ್ಧಿಯು ಚಿಂತಾಕ್ರಾಂತನಾಗಿ ಕುಳಿತಿರುವಾಗ, ತಾರಾಬಾಯಿಗೆ ಪತ್ರೋತ್ಸವವಾದ ವರ್ತಮನವು ಅಂತಃಪುರದಿಂದ ಬಂದಿತು. ಅದನ್ನು ಕೇಳಿದ ಕೂಡಲೆ ಸ್ವಾಮಿನಿಷ್ಠ ರಾಮಚಂದ್ರಪಂತನ ಚಿಂತೆಯಿಲ್ಲ ಅಳಿದು ಹೋಗಿ, ಆತನು ಆನಂದಾಬಿಯಲ್ಲಿ ಮುಳುಗಿದನು. ಪುಣ್ಯಪ್ರತಾಪಿಯಾದ ಶಿವಪ್ರಭುವಿನ ವಂಶವೃದ್ಧಿಯಿಂದ ಯಾವಸ್ವಾಮಿನಿಷ್ಠನಿಗೆ ಆನಂದವಾಗಲಿಕ್ಕಿಲ್ಲ. ಕೆಲವು ದಿನಗಳಹಿಂದೆ ರಾಜಪತ್ನಿಯನ್ನು ಬೇಗನೆ ಜಿಂಜಿಗೆ ಕಳಿಸಿಕೊಡಬೇಕೆಂದು ಪ್ರಲ್ಲಾದರಂತ ರಿಂದ ಬರೆದು ಬಂದಿತ್ತು; ಆದರೆ ಪ್ರಸೂತಿಯಿ ಕಾಲವು ಸಮೀಪಿಸಿದ್ದರಿಂದ ಹಾಗೆ ಮೂಡ ಲಿಕ್ಕೆ ರಾಮಚಂದ್ರಪಂತನಿಗೆ ಧೈರ್ಯವಾಗಲಿಲ್ಲ. ಅಷ್ಟರಲ್ಲಿ ತಾರಾಬಾಯಿಯವರಿಗೆ 'ಪತ್ರೋತ್ಸವವಾಯಿತು. ಅತ್ತ ಪಲ್ಲಾಳಗಡವನ್ನು ವಶಮೂಡಿಕೊಂಡಿದ್ದ ಮೊಗಲರು ವಿಶಾಲಗಡದಕಡೆಗೆ ತಿರುಗಿದರು. ಆದ್ದರಿಂದ, ಇನ್ನು ಬೇಗನೆ ವಿಶಾಲಗಡವನ್ನು ಬೇಡಬೇಕಾಗುವದು”ಬದನ್ನು ತಿಳಿಸುವದಕ್ಕಾಗಿ ಅಮಚಂದ್ರಪಂತನು ರಾಜಪತ್ನಿಯ ಬಳಿಗೆ ಹೋದನು. ತಾರಾಬಾಯಿಯು ರಾಮಚಂದ್ರಪಂತರ ವಿಜ್ಞಾಪನೆಯನ್ನು ಕೇಳಿ ಅವರನ್ನು ಕುರಿತು-ಸಂತ, ನಿಮ್ಮ ಸೂಚನೆಯು ಯೋಗ್ಯವಾದದ್ದು, ಇನ್ನು ಯಾವತ್ತು ರಾಜಪರಿವಾರವು ಜಿಜಿಗೆ ಹೋಗತಕ್ಕದ್ದೇ ಯೋಗ್ಯವು, ಮೊಗಲರ ಹಾವ ಆಯು ದಿನದಿನಕ್ಕೆ ಹೆಚ್ಚುತ್ತ ನಡೆದಿರುವದರಿಂದ ಈ ಕಾರ್ಯದಲ್ಲಿ ವಿಲಂಬವು ಕೆಲಸ ಇಲ್ಲ. ನಮ್ಮ ಸುತಕ್ಷಣಕ್ಕಾಗಿ ಧನಾಜೆಯನ್ನಾಗಲಿ,' ಸೇತಾಜಿಯಾಗಲಿ ಕಳಸ