ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುರಸಗ್ರಂಥಮೂಲ. ಕೇಳದವರಾಗಿದ್ದರೂ, ಸಂತಾಜಿಯ ದುರ್ದೈವದಿಂದ ಅವರು ರಾಮಚಂದ್ರಪಂತನ ಪತ್ರಕ್ಕೂ, ಹೆಂಡತಿಯ ಮಾತಿಗೂ ಕಿವಿಜೋತರು. ಅವರು ತಮ್ಮ ಅಂಗರಕ್ಷ ಕರಾದ ಭಾಜಿ, ಬಹಿರೋಜಿ ಎಂಬವರನ್ನು ಸಂತಾಜಿಯ ಬಳಿಗೆ ಕಳಿಸಿ, ಸೇನಾಪತಿ ಪದವಿಯ ಮುದ್ರೆ ಕಠಾರಿಗಳನ್ನು ತರಿಸಿಕೊಂಡರು. ಆಗ 'ಸಂತಾಜಿಗೆ ಓಹಳ ಅಸಮಾಧಾನವಾಯಿತು. ಆ ಸಾಮಿನಿಷ ನು ಪುರುಷವೇಷಧಾರಿಯಾದ ತನ್ನ ಹೆಂಡತಿಯನ್ನು ಕುರಿತು- “ ಕಮಲೇ, ನಿನ್ನ ಸಂಸಾರಸೌಖ್ಯದ ಪ್ರಾಪ್ತಿಯ ಕಾಲವು ಮತ್ತಿಷ್ಟು ದೂರವಾಯಿತು. ನಾನೇನು ಮಾಡಲಿ? ದೈವಕೊಟ್ಟದ್ದನ್ನು ಕರ್ಮವು ಕಚ್ಚಿ ಕೊಂಡು ಹೋಯಿತೆನ್ನುವಂತೆ ನನ್ನ ಸ್ಥಿತಿಯಾಯಿತು; ಆದರೂ ನೀನು ಉದಾಸೀನೆಯಾ ಗಬಾರದು. ನಮ್ಮ ಉದ್ಯೋಗವು ಸೇನಾಧಿಪತಿಯ ಅಧಿಕಾರ ಪ್ರಾಪ್ತಿಗಾಗಿ, ಅಥವಾ ರಾಜ್ಯ ಪ್ರಾಪ್ತಿಗಾಗಿ ನಡೆದಿರದೆ, ಸ್ವಾಕಾರ್ಯ ಸಾಧನೆಗಾಗಿ ನಡೆದಿರುತ್ತದೆಂಬದನ್ನು ನೀನು ಮರೆಯಲಾಗದು. ನನ್ನ ಅತ್ಯುತ್ಕಟಕಾರ್ಯಾಸಕ್ತಿಯಿಂದ ಜನರಲ್ಲಿ ತಪ್ಪು ತಿಳು ವಳಿಕೆಯಾಗುವ ಸಂಭವವಿರುತ್ತದೆ. ಅದರಂತೆ ಮಹಾರಾಜರ ಮನನ್ನಾದರೂ ತಿರುಗಿರ ಬಹುದು. ಆಗಲಿ, ಸ್ವಾಮಿಕಾರ್ಯವನ್ನು ಎಂದಿನಂತೆ ನಾವು ಮಾಡೋಣ; ಪರಮೇ ಶ್ವರನು ಸರ್ವಸಾಕಿ ಯಾಗಿರುತ್ತಾನೆ; ಸ್ವರ್ಗಸ್ಥ ಶಿವಪ್ರಭುವು ನನ್ನ ಹೃದಯವನ್ನು ಬಗಿದು ನೋಡಲು ಸಮರ್ಥನಾಗಿರುವನು. ಕಮಲೇ, ಬಹಳ ಹೇಳುವದರಿಂದೇನು? ಇದು ನನ್ನ ಸತ್ವ ಪರೀಕ್ಷೆಯ ಕಾಲವಾಗಿರುವದು, ಎಂಥ ವಿಪರೀತಪ್ರಸಂಗ ಒದಗಿದರೂ ನಾವು ಕರ್ತವ್ಯಭ್ರಷ್ಟರಾಗತಕ್ಕದ್ದಲ್ಲ ಎಂದು ನುಡಿಯಲು, ಸತ್ವ ಸ್ವಳಾದಕಮಲೆಯು“ಮಹಾರಾಜ, ತಮ್ಮ ಹೆಜ್ಜೆಗಳಮೇಲೆ ಹೆಜ್ಜೆಗಳನ್ನಿಡುವದು ನನ್ನ ಕೆಲಸವು, ಹೆಚ್ಚಿನ ದೇನು ನನಗೆ ತಿಳಿಯುತ್ತದೆ? ಇನ್ನು ಮೇಲೆ ಸರ್ವಥಾ ನನ್ನನ್ನು ಬಿಟ್ಟು ತಾವು ಒಬ್ಬರೇ ಮಾತ್ರ ಇರಬಾರದು. ತನ್ನ ಸುಖದುಃಖಗಳ ಪಾಲುಗಾರತಿಯಾದ ನಾನು ತಮ್ಮನ್ನು ಅನುಸರಿಸುವೆನು” ಎಂದು ಹೇಳಿದಳು. ಸುತಾಜೆಯು ಸರಳ ಹೃದಯದವನು. ಆತನು ಸ್ವಾಮಿಕಾರ್ಯಕ್ಕಾಗಿ ಸರ್ವಸೌಖ್ಯಗಳನ್ನಷ್ಟೇ ಅಲ್ಲ, ದೇಹವನ್ನೂ ಅರ್ಪಿಸಿದ್ದನೆಂಬ ದನ್ನು ವಾಚಕರು ಬಲ್ಲರು. ಆತನು ಗುತ್ತಿಯದುರ್ಗವನ್ನು ಸ್ವಾಧೀನಪಡಿಸಿಕೊಳ್ಳುವ ಭರದಲ್ಲಿ ಪ್ರಮಾದದಿಂದ ರಾಮಚಂದ್ರಪಂತರ ಅಪ್ಪಣೆಯನ್ನು ಮೀರಿದ್ದನಲ್ಲದೆ ದುರ್ಭಾ ವನೆಯಿಂದಾಗಲಿ, ಮೈ ಉಳಿಸಿಕೊಳ್ಳುವನೆವದಿಂದಾಗಲಿ ಸಲ್ಲಾಳಗಡಕ್ಕೆ ಹೋಗುವದನ್ನು ಬಿಟ್ಟಿದ್ದಿಲ್ಲ. ಆತನು ಸೊಂಡೂರು-ಗುಗಳ ಅರಣ್ಯಗಳೊಳಗಿಂದ ತುಂಗಭದ್ರೆಯವರೆಗೆ ಮಹಾರಾಷ್ಟ್ರರ ದರ್ಪವನ್ನು ಚೆನ್ನಾಗಿ ಕೂಡಿಸಿ, ಮೊಗಲರನ್ನು ಮೆತ್ತಗೆ ಮಾಡಿದ್ದನು. ಸ್ವಾಮಿನಿಷ್ಠ ಸುತಾಚೆಯು ತನ್ನ ಮನೋವ್ಯಥೆಯನ್ನು ಸಮಾಧಾನದೂಡಿಕೊಂಡು, ಮಹಾಕಾರ್ಯವನ್ನು ನಿಧಿಸಿ ಸ್ವಾಮಿಯ ಮನಸ್ಸನ್ನು ಮತ್ತೆ ಸಂತೋಷಪಡಿಸಬೇಕೆಂದು ಹೊರಟನು. ಪುರುಷವೇಷದಿಂದ ಶಿಷ್ಯವೃತ್ತಿಯನ್ನು ವಹಿಸಿ ಹಿಂಬಾಲಿಸಿದ್ದ ಕಮ ಲೆಯ ಪತಿಯನ್ನು ಅನುಸರಿಸಿ ನಡೆದಳು, ಸಂತಾಜಿಯು ತನ್ನ ಶಿಷ್ಯನೊಡನೆ, ತನ್ನ