ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನಹಳ್ಳಿ, ಜನರು ಬೀಡುಬಿಟ್ಟುಕೊಂಡಿರುತ್ತಿದ್ದ ಸೊಂಡೂರ ಅಡವಿಯನ್ನು ಸೇರಿದನು. ಆಗ ಕಮಲೆಯು ಅಡಿಗೆ-ಊಟಗಳ ವ್ಯವಸ್ಥೆಯಲ್ಲಿ ತೊಡಗಿದಳು. ಸಂತಾಜಿಯು ಏಕಾಂತ ದಲ್ಲಿ ವಿಚಾರಮಾಡಲಿಚ್ಚಿಸಿ, ಛಾವಣಿಯಿಂದ ಸ್ವಲ್ಪ ದೂರವಾಗಿದ್ದ ಒಂದು ವಿಶಾಲವಾದ ವಟವೃಕ್ಷದ ಬುಡದಲ್ಲಿ ಕುಳಿತುಕೊಂಡನು. ಅಷ್ಟರಲ್ಲಿ ವಸ್ತ್ರಾಲಂಕಾರಗಳಿಂದ ಅಲಂಕ ತಳಾದ ಬಕುಳೆಯು ಅಲ್ಲಿಗೆ ಬಂದಳು ಬಕುಳೆಯು ವೃದ್ದ ನಾಗೋಜಿರಾವ ಮಾನೆ ಯೆಂಬ ಪ್ರಬಲ ಸರದಾರನ ಪ್ರೀತಿಯ ಹೆಂಡತಿಯೆಂಬದನ್ನು ವಾಚಕರು ಬಲ್ಲರು. ಆಕೆಯು ವನಪು ಮಾಡುತ್ತ ಸಂತಾದೆಯನ್ನು ಕುರಿತು ಬಕುಳೆ-ಸಂತಾಜಿರಾವ, ನಾನು ನಿಮ್ಮ ಕೆಲಸವನ್ನು ಮಾಡಿದ್ದೇನೆ. ನನ್ನ ಪತಿಯು ಮರಾಟರ ಪಕ್ಷವನ್ನು ವಹಿಸುವನು. ಈಗ ನಿಮ್ಮ ಮನಸ್ಸಿನಂತೆ ಆಯಿತಷ್ಟೇ? ಸಂತಾಜಿ - ಬಕುಳಾಬಾಯಿ, ಬಹಳ ಒಳ್ಳೆಯ ಕೆಲಸಮೂಡಿದೆ. ಸ್ವದೇಶದ ಸ್ವಾತಂತ್ರರಕ್ಷಣದ ಶ್ರೇಯಸ್ಸಿಗೆ ನೀನೊಬ್ಬಳು ಪಾಲುಗಾರಳಾದೆ. ನೀನು ಇನ್ನು ಹೋಗಬಹುದು, ನಿನ್ನ ಕಾರ್ಯವಾದಂತಾಯಿತು, ಬಕುಳೆ-ಪ್ರಿಯಕರಾ, ಹೀಗೇಕೆ ಹೊರಕೈಯಿಂದ ಹೊಡೆಯುವೆ? ನಿನ್ನ ಪ್ರತಿಜ್ಞೆ ಯನ್ನು ಮರೆತೆಯೋ ಏನು? ಇನ್ನು ಮೇಲೆ ಈ ದಾಸಿಯನ್ನು ಸುಖಪಡಿಸಬೇಕಲ್ಲವೆ? ಸಂತಾಜಿ-ಬಕುಳೇ, ಹೋಗು, ನೀನು ಪುಣ್ಯದ ಕೆಲಸವನ್ನು ಮಾಡಿರುತ್ತೀ. ಆ ಪುಣ್ಯದ ಬೆಲೆಯೆಂದು ನನ್ನ ಶೀಲವನ್ನು ಕೆಡಿಸಹೋಗಿ ಮೋಸಗೊಳ್ಳಬೇಡ, ಸಂತಾ ಜೆಯ ಏಕಪತ್ನಿ ವ್ರತವು ಅಭಂಗವಾದದ್ದೆಂಬದನ್ನು ಮರೆಯದಿರು, ಸ್ವಾಮಿಕಾರ್ಯವು ಸಾಧಿಸುವವರೆಗೆ ಸ್ವಪತ್ನಿಗಮನವನ್ನು ಕೂಡ ನಿಷೇಧಿಸಿ ಕೇವಲ ವ್ರತಸ್ಥನಾಗಿ ನಡೆಯುವ ಸಂತಾಜೆಯು, ಪರಸ್ತ್ರೀಯನ್ನು ದುರ್ಭಾವನೆಯಿಂದ ಕಣ್ಣೆತ್ತಿಯಾದರೂ ನೋಡಬಹುದೆಯೆ? ಹೋಗು, ಬಕುಳಾಬಾಯಿ ಹೋಗು; ನೀನು ನನ್ನ ಹಡೆದ ತಾಯಿಗೆ ಸಮಾನಳು. ಈ ಮೂರೂವರೆ ಮೊಳದ ಮಣ್ಣಿನ ಶರೀರಕ್ಕೆ ಲುಬ್ಧಳಾಗುವದ ಕ್ಕಿಂತ, ಜಗತ್ತನ್ನೆಲ್ಲ ವ್ಯಾಪಿಸಿ ಹತ್ತು ಬೆರಳು ಉಳಿದಿರುವ ಪರಮಾತ್ಮನ ಗುಣಗಳಿಗಾಗಿ ಲುಬ್ಧಳಾಗು. ಆತನಲ್ಲಿ ಭಯಭಕ್ತಿಯನ್ನು ತಾಳಿ ಸದ್ಗುಣಗಳುಳ್ಳವಳಾಗು, ಆ ಪರಮಾ ನ ಮೂರ್ತಿಯನ್ನು ಹೃದಯದಲ್ಲಿ ನೆಲೆಗೊಳಿಸು, ಜಗತ್ತು ಪರಮಾತ್ಮನ ಸಂತತಿ ಯಾಗಿರುವದು. ಸಂತತಿಯನ್ನು ಪ್ರೀತಿಸುವದರಿಂದ ಅದರ ಜನಕನು ಸಂತುಷ್ಟನಾಗು ವಂತ, ಜಗತ್ತನ್ನು ಪ್ರೀತಿಸಿ ಅದರ ಹಿತವನ್ನು ಸಾಧಿಸುವದರಿಂದ ಪರಮಾತ್ಮನ ಸ್ತ್ರೀ ತಿಯು ನಿನ್ನ ಮೇಲೆ ಆಗುವದು. ಬಕುಳಾ- ಹೀಗೋ? ಹೀಗೆ ಧರ್ಮೋಪದೇಶದಿಂದ ನನ್ನ ಮನಸ್ಸನ್ನು ಸಮ ಧಾನಗೊಳಿಸುವಿರಾ? ಹಾಗಾದರೆ ನಾನು ಹೋಗುತ್ತೇನೆ. ಸಂತಾಜಿರಾವ, ಹೀಗೆ ನನ್ನ ಮೇಲೆ ನಿರ್ದಯರಾಗಬೇಡಿರಿ.