ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

93 ಸುರಸಗ್ರಂಥಮಾಲಾ, ಸಂತಾಜಿ ಸಾಕುಮಾಡು! ಚಾಂಡಾಲಿನೀ, ಬಾಯಿಮುಚ್ಚು! ಯಾರಿರುವಿರಲ್ಲಿ? ಈಕೆಯ ತಂದೆಯನ್ನು ಆನೆಯಕಾಲಿಗೆ ಕಟ್ಟಿಸಿ ಎಳಿಸಿ ಪ್ರಾಣಹರಣಮಾಡಿದಂತೆ, ಈಕೆಯ ಪ್ರಾಣಹರಣಮಾಡಿರಿ. ಬಕುಳಾ- ಎಲಾ ದುಷ್ಟಾ, ಯಾರು ಯಾರ ಪ್ರಾಣಹರಣಮಾಡುತ್ತಾರೆ ನೋಡೋಣ! ಈ ಮೇರೆಗೆ ನುಡಿದು ಬಕುಳೆಯು ಸಿಟ್ಟಿನಿಂದ ಮುಸುಗುಟ್ಟುತ್ತ ಹೊರಟು ಹೋದಳು. ಇತ್ತ ಸಂತಾಜಿಯು ಕ್ಷಣವಾದರೂ ತಡಮಾಡದೆ ತನ್ನ ಜನರೊಡನೆ ಧನಾಜೆಯ ಬಳಿಗೆ ಹೋದನು. ಈ ಕಾಲದಲ್ಲಿ ಎಲ್ಲ ಮರಾಠಾವೀರರು ಮನಃಪೂರ್ವ ಕವಾಗಿ ತಮ್ಮ ಶಕ್ತಿಮೀರಿ ಮೊಗಲರನ್ನು ಹಣ್ಣು ಮಾಡುವದರಲ್ಲಿ ತೊಡಗಿದ್ದರು. ವಿಶಾಳ ಗಡವನ್ನು ವಶಮಾಡಿಕೊಳ್ಳುವಾಗ ಬಾದಶಹನಿಗೆ ಬಹಳ ಶ್ರಮವಾಯಿತು, ಒಳಗಿನ ಜನರು ಬಹು ಶೌರ್ಯದಿಂದ ಕಾದಿದರು. ದುರ್ಗವು ವಶವಾದಾಗ ೭೦೦ ಜನ ಮರಾಠಾಸ್ತ್ರೀಯರು ಅಗ್ನಿಪ್ರವೇಶಮಾಡಿದರು. ಈ ಅನರ್ಥವನ್ನು ನೋಡಿ ರಾಮ ಚಂದ್ರವಂತನ ದ್ವೇಷವು ಬಾದಶಹನ ಮೇಲೆ ಹೆಚ್ಚಿತೋ, ಸಂತಾದೆಯ ಮೇಲೆ ಹೆಚ್ಚಿ ತೋ ತಿಳಿಯದು, ಬಾದಶಹನು ರೊಚ್ಚಿಗೆದ್ದು ಮರಾಟರನ್ನು ಎಷ್ಟು ಹಣಿದರೂ ಅವರು ಮಳೆಯಲಿಲ್ಲ. ಅವರು ಹೊತ್ತು ಸಾಧಿಸಿ ಆಯಕಟ್ಟಿನ ಸ್ಥಳ ನೋಡಿ ಬಾದಶ ಹನ ಸೈನ್ಯವನ್ನು ತುಂಡರಿಸುತ್ತಿದ್ದರು, ಬಾದಶಹನಿಗೆ ಅನ್ನ ಸಾಮಗ್ರಿಯು ಸಿಗದಂತ ಮಾಡಿದರು. ಬಾದಶಹನು ಪ್ರವೇಶಿಸುವ ಸ್ಥಳವನ್ನು ಹಾಳುಗೆಡವಹತ್ತಿದರು. ಬಾದಶ ಹನು ಮರಾಟರ ಒಂದೊಂದೇ ದುರ್ಗವನ್ನು ವಶಮಾಡಿಕೊಳ್ಳುತ್ತ ಮುಂದಕ್ಕೆ ಸಾಗಿ ದಂತೆ, ಮರಾಟರು ಹಿಂದಿನಿಂದ ಅವನ್ನು ಮತ್ತೆ ವಶಮಾಡಿಕೊಳ್ಳಹತ್ತಿದರು. ಶಂಕ ರಾಜಿ ನಾರಾಯಣನ ಸಾಹಸವು ಅತರ್ಕೃವಾದದ್ದು. ಆತನು ರಾತ್ರಿಯಲ್ಲಿ ಉಡದ ಸಹಾಯದಿಂದ ರಾಯಗಡವನ್ನು ಏರಿಹೋಗಿ ಬಾದಶಹನ ನಿಶಾನೆಯನ್ನು ಕಿತ್ತಿ ಒಗೆದು,ಅಲ್ಲಿ ಮರಾಟರ ನಿಶಾನೆಯನ್ನು ಊರಿದನು. ಶಂಕರಾಜಿಯ ಈ ಪರಾಕ್ರ ಮವನ್ನು ನೋಡಿ ಆತನ ಮಾವಳರು ಸ್ಫೂರ್ತಿಗೊಂಡು, ಕೂಡಲೆ ತೋರಣ, ರೋಹಿಡಾ ಮೊದಲಾದ ದುರ್ಗಗಳನ್ನು ಸ್ವಾಧೀನಪಡಿಸಿಕೊಂಡರು. ಘಟ್ಟದ ಮೇಲಿನ ಪ್ರದೇಶವೆಲ್ಲ ಮರಾಟರ ವಶವಾಯಿತು. ವಿಶಾಲಗಡವು ಮೊಗಲರ ಕೈಸೇರಿದ್ದರಿಂದ ರಾಮಚಂದ್ರ ಪಂತನು ಸಾತಾರೆಯಲ್ಲಿ ನಿಂತು ಮಹಾರಾಷ್ಟ್ರ ರಾಜ್ಯದ ಸೂತ್ರಗಳನ್ನು ಅಲ್ಲಾಡಿಸುತ್ತಿದ್ದನು. ಇದನ್ನರಿತು ಬಾದಶಹನು ನಿಗ್ಗರದಿಂದ ಸಾತಾರ ಯನ್ನು ಮುತ್ತಿದನು. ಅಲ್ಲಿ ಪ್ರಯಾಗಜಿಅನಂತನೆಂಬವನು ಬಾದಶಹನ ಆಟವನ್ನು ನಡೆ ಯಗೊಡಲಿಲ್ಲ. ಬಾದಶಹನು ಪರಳಿಯನ್ನು ಮುತ್ತಿದನು. ಅಲ್ಲಿ ಪರಶುರಾಮ ತ್ರಂಬಕ ನೆಂಬವನು ಶೌರ್ಯದಿಂದ ಕಾದಿ ಮರಾಟರ ಕೀರ್ತಿಯನ್ನು ಕಾಯು ಕೊಂಡನು. ಶಂಕ