ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನಪುಣ್ಯ ೨೫ ರಾಜಿ ನಾರಾಯಣನು ಸಂತಾಜೆಯ ಕಾರ್ಯವನ್ನು ನಡಿಸಿ ಬಾದಶಹನನ್ನು ಬಹಳ ಹಣ್ಣು ಮಾಡಿದನು. ವೃದ್ಧನಾದ ಔರಂಗಜೇಬ ಬಾದಶಹನು ಮಹಾರಾಷ್ಟ್ರದಲ್ಲಿ ಮರಾ ಟರ ಉಪದ್ರವವನ್ನು ತಾಳಲಾರದೆ, ತನ್ನ ಸೈನ್ಯದ ಪ್ರವಾಹವನ್ನು ಜಿಂಜೆಯ ಕಡೆಗೆ ಸಾಗಿಸಿದನು, ಬಾದಶಹನ ಸೈನ್ಯವು ಜಿಂಜಿಯಕಡೆಗೆ ಹೊರಳಿದ ಕೂಡಲೆ, ಅದು ಅತ್ತ ಹೋಗ ದಂತ ಧನಾಜಿ ಸುತಾದೆ ಇವರು ಪ್ರತಿಬಂಧಿಸಹತ್ತಿದರು ನೋಡಿದ್ದಕ್ಕೆಲ್ಲ ಮರಾಟಾ ಸರ ದಾರರು ಮೊಗಲರ ಮೇಲೆ ಮುಗಿಬಿದ್ದು ಹಳೆಯ ಹತ್ತಿದರು. ಪರಶುರಾಮ ತ್ರ್ಯಂಬ ಕನು ಸಂಗಮನೇರದಲ್ಲಿದ್ದು ಕೊಂಕಣದಲ್ಲಿ, ಶಂಕರಾಜಿನಾರಾಯಣನು ಮಾಳವದಲ್ಲಿ, ರಾಮಚಂದ್ರ ಪಂತನು ಸಾತಾರೆಯೊಳಗಿದ್ದು ದೇಶದಲ್ಲಿ, ಸರಸೋಜಿ ಭೋಸಲೆಯು ಗೊಂಡವಣ, ವರ್ಹಾಡ, ಗುಜರಾಥ, ಗಂಗಾತೀರ, ಬಾಗಲಣ ಮೊದಲಾದ ಉತ್ತರದ ಕಡೆಯ ಪ್ರದೇಶಗಳಲ್ಲಿ ಮೊಗಲರೊಡನೆ ಕಾದಿ ಅವರನ್ನು ಹಣ್ಣು ಮೂಡಹತ್ತಿದ್ದರು. ಬಾದಶಹನ ಪ್ರಚಂಡ ಸೈನ್ಯವು ಮರಾಟರ ಸೈನ್ಯದ ಹರತದಿಂದ ತತ್ತರಿಸಹತ್ತಿತು. ಮರಾ ಟಾಸರದಾರರು ನಾಲ್ಕೂ ಕಡೆಯಲ್ಲಿ ಬಾದಶಹನ ಅಧಿಕಾರವನ್ನು ಕಿತ್ತಿ ಒಗೆದು ಮರಾಟರ ಅಧಿಕಾರವನ್ನು ಪ್ರಸ್ಥಾಪಿಸಿದರು. ದಕ್ಷಿಣದಲ್ಲಿ ಧನಾಜಿ ಸಂತಾಜಿಯಿವರ ಉಪಟಳ ವನ್ನಂತು ಬಣ್ಣಿಸಲಾಸಲ್ಲ. ಇವರ ಅಂಜಿಕೆಯು ಸರ್ವತದಲ್ಲಿ ವ್ಯಾಪಿಸಿತು. ಜಿಂಜಿ ಯನ್ನು ಮುತ್ತಿದ್ದ ಮೊಗಲರು ನಿದ್ದೆ ಹತ್ತಿ ಮಲಗಿದಾಗ ಒಮ್ಮಿಂದೊಮ್ಮೆ “ಧನಾಜಿಆಯಾ ಸಂತಾಜಿಆಯಾ ” ಎಂದು ಕನಕರಿಸುತ್ತ ಏಳುತ್ತಿದ್ದರು, ಧನಾಜಿಯ ಹೆಸರನ್ನು ಕೇಳಿ ದರೆ ಮೊಗಲರ ಕುದುರೆಗಳು ನೀರು ಕುಡಿಯುತ್ತಿದ್ದಿಲ್ಲವಂತೆ! ತನ್ನ ಸೈನಿಕರ ಈ ದೈನ್ಯ ವನ್ನು ನೋಡಿ ಬಾದಶಹನು ಜಿಂಜಿಯನ್ನು ಮುತ್ತಿದ್ದ ಝುಪಲಿಕಾರಖಾನನ ಸಹಾಯಕ್ಕೆ ಬುಂದೇಲಾಸರದಾರನಾದ ದಲಪತರಾಯನನ್ನೂ, ವಿಜಾಪುರದ ಕೊತವಾಲನಾದ ಕಾಸ ಮಖಾನನನ್ನೂ, ಕಳಿಸಿದನು. ಈ ಸುದ್ದಿಯು ಸಂತಾಜಿಗೆ ಹತ್ತಿದೊಂದೇ ತಡ, ಆತನು ರಚಾಜಿಯೊಡನೆ ಕಾಸಮಖಾನನಿಗೆ ಗಂಟು ಬಿದ ನು, ಅವರ ಅಬ ರದ ಮುತಿಕರ ಖಾನನ ಎದೆಯೊಡೆದು ನೀರಾಯಿತು. ಆತನು ಅಂಜಿ ತರಿಸಿ ದುಂಡೇರಿಯ ಕಂದರ ದಲ್ಲಿ ಅಡಗಿಕೊಂಡನು. ಆಗ ಸುತಾಜಿಯು ಈ ಕಂದರವನ್ನು ಮುತ್ತಿ ಎಲ್ಲ ಮೊಗಲ ಸರದಾರರನ್ನು ಸೆರೆಹಿಡಿದನು. ಆಗ ಯಾವತ್ತು ಸರದಾರರು ತಮ್ಮ ಸಲುವಾಗಿ ದೊಡ್ಡ ದೊಡ್ಡ ರಕಮುಗಳನ್ನು ಸಂತಾಚಿಗೆ ಕೊಟ್ಟು, ತಮ್ಮ ಬಿಡುಗಡೆ ಮಾಡಿಸಿಕೊಂಡರು. ಈ ಪ್ರಸಂಗದಲ್ಲಿ ಸಂತಾಜಿಗೆ ೫ -೬೦ ಲಕ್ಷ ರೂಪಾಯಿಗಳು ದೊರೆತವು. r