ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ನೆಯ ಪ್ರಕರಣ – ಸಂತಾಜಿಯ ಮರಣ! 4Xe+ ಈ ಮೇರೆಗೆ ಮರಾಟರ ವೈಭವವು ಪುನಃ ಜಿಂಜಿಯಲ್ಲಿ ಪ್ರಸ್ತಾಪಿತವಾಯಿತು, ಕಸಿಮಾಡಿದ ಗಿಡವು ಅಕ್ಕಲೊಡೆದು ಪ್ರಫುಲ್ಲಿತವಾಗಿ ಬೆಳೆಯುವಂತ, ನಾಶವಾದ ಹಾಗೆ ತೋರುತ್ತಿದ್ದ ಮರಾಟರ ರಾಜ್ಯವು ದೇಶಾಭಿಮಾನಿಗಳಾದ ಮರಾಟರ ಸತ್ವ ಸಾರದಿಂದ ನಾಲ್ಕೂ ಕಡೆಗೆ ಹಬ್ಬಿ ಪ್ರಕಾಶಿಸಹತ್ತಿತು. ರಾಜಾರಾಮ ಮಹಾರಾಜರು ಜಿಂಜಿಯಲ್ಲಿದ್ದು ಅಷ್ಟ ಪ್ರಧಾನರನ್ನು ನಿಯಮಿಸಿ ರಾಜ್ಯ ಸೂತ್ರಗಳನ್ನು ನಡೆಸುತ್ತ, ಕರ್ತೃತ್ವಶಾಲಿಗಳಿಗೆ ಜಹಾಗೀರುಗಳನ್ನೂ, ಬಿರುದುಗಳನ್ನೂ ಕೊಡಹತ್ತಿದರು. ಇದನ್ನು ಕೇಳಿ ಔರಂಗಜೇ ಬನ ಹೊಟ್ಟೆಯಲ್ಲಿ ಸಾಸಿವೆ ಅರಿದು ಹಾಕಿದಹಾಗಾಯಿತು. ಆತನ ಸೈನ್ಯಕ್ಕೆ ಅನ್ನ ಸಾವು ಗ್ರಿಯು ವಟ್ಟದಹಾಗಾಗಿ, ಆತನಿಗೆ ಬೇರೆ ಕಡೆಯ ಸುದ್ದಿಗಳು ತಿಳಿಯದಾದವು. ಅದ್ದ ರಿಂದ ಆತನಿಗೆ ಬಹಳ ತಾಪವಾಗಿತ್ತು. ಆತನು ಜಿಂಜೆಯ ಕೋಟೆಯನ್ನು ಬಿಗಿಯಾಗಿ ಮುತ್ತುವದಕ್ಕಾಗಿ ಝುಪಲಿಕಾರಖಾನನಿಗೆ ಆಗ್ರಹದಿಂದ ಆಜ್ಞೆಯನ್ನಿತ್ತನು; ಅದರೂ ಸಂತಾಜೆಯ ಹಾವಳಿಯ ಮುಂದೆ ಖಾನನ ಆಟವು ನಡೆಯದಾಯಿತು, ಮರಾಟರು ಸ್ವಲ್ಪ ದಿವಸಗಳಲ್ಲಿ ತಮ್ಮನ್ನು ಗೊತ್ತಿಗೆ ಹಚ್ಚುವರೆಂದು ಝುಪಲಿಕಾರಖಾನನ್ನೂ, ಆತನ ಸಹಾಯಕ ಸರದಾರರೂ ತಿಳಿದುಕೊಂಡಿದ್ದರು. ಅಷ್ಟರಲ್ಲಿ ಬ್ರಹ್ಮ ಪುರದೊಳಗೆ ಔರಂಗ ಜೇಬನು ಮರಣಹೊಂದಿದನೆಂಬ ಸುದ್ದಿಯು ಹುಟ್ಟಿ ಮೊಗಲರ ಸೈನ್ಯದಲ್ಲಿ ಅವ್ಯವಸ್ಥೆಯುಂ ಟಾಯಿತು, ಈ ಎಲ್ಲ ಅನುಕೂಲ ಕಾರಣಗಳನ್ನು ನೋಡಿ, ಇನ್ನು ತಮ್ಮ ಅರಿಷ ಕಾ ಲವು ಹಿಂಗಿತೆಂದು ರಾಜಾರಾಮ ಮಹಾರಾಜರು ಸಂತೋಷಪಡುತ್ತಿರುವಷ್ಟರಲ್ಲಿ ಪ್ರಸಿದ ಮುತ್ಸದ್ದಿಯೂ, ಮಹಾರಾಷ್ಟ್ರ ರಾಜ್ಯದ ಪ್ರಾಣಪ್ರತಿಷ್ಠಾಪಕನೂ, ಸೂತ್ರಧಾರನೂ ಅದ ಪ್ರಹಾದಪಂತನು ಮರಣ ಹೊಂದಿದನು. ಆಗ ರಾಜಾರಾಮ ಮಹಾರಾಜರು ನೆಲಕ್ಕೆ ಬಿದ್ದರು. ಅವರ ದುಃಖವು ಪರಮಾವಧಿಯಾಯಿತು. ಹೀಗಿರುವಾಗ ಒಂದು ದಿನ ತಾಣ ಬಾಯಿಯೂ, ಧನಾಜೆಯೂ ಮಹಾರಾಜರನ್ನು ಸಮಾಧಾನಗೊಳಿಸುವದಕ್ಕಾಗಿ ಬಂದರು. ಆಗ ಆ ಮಾತು ಈ ಮಾತು ಹೊರಟು ಕಡೆಗೆ ಧನಾಜಿಯು ಮಹಾರಾಜರನ್ನು ಕುರಿತು-“ ಮಹಾರಾಜ, ದಂಡಿನ ವೆಚ್ಚಕ್ಕಾಗಿ ಹಣದ ತೊಂದರೆಯಾಗಿರುವದು ಎಂt ಮಾಡಿಕೊಂಡನು. ಆಗ ಮಹಾರಾಜರು ಪರಮಾವಧಿ ವಸನದಿಂದ ಅಸಹ್ಯ ಪಟ್ಟುಕೊಂಡು ಧನಾಜಿಯನ್ನು ಕುರಿತು-ನಾನೆಮಮಾಡಲಿ? ಪ್ರಹ್ಲಾದನಂತರ ತೀರಿಕೊಂಡರು. ಯಾವತ್ತು ವ್ಯವಸ್ಥೆಯನ್ನು ಅವರೇ ಮಾಡುತ್ತಿದ್ದರು, ಧನಾಜಿ-ಮಹಾರಾಜ, ಮೊನ್ನೆ ಸಂತಾಜಿಯು ದುಂಧೇರಿಯ ಕಂದರದಲ್ಲಿ ಆರ ವತ್ತು ಎಪ್ಪತ್ತುಲಕ್ಷ ರೂಪಾಯಿಗಳನ್ನು ಸಂಪಾದಿಸಿರುವನಲ್ಲ, ಅದನ್ನೇನು ಅವನಿಗೆ ಉಚಿತವಾಗಿ ಕೊಟ್ಟಿರುವಿರೆ ಏನು? ಮಹಾರಾಷ್ಟ್ರದಲ್ಲಿಯಾದರೂ ಆತನು ಬಹಳ ಸಂಪತ್ತನ್ನು ಗಳಿಸಿ ಇಟ್ಟಿರುತ್ತಾನೆಂದು ಈ ಜಗದಳೆಯು ಹೇಳುತ್ತಾನೆ,