ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವನವು, 934 ರಾಜಾರಾಮ-ಇದ್ದೀತು! ಆತನ ಪದುನಲ್ಲಿ ಭಾರಾಯಿಯ ದೊಡ್ಡ ಸೈನ್ಯವಿ ರುತ್ತದೆ. ಅದರ ದಾಣಿ ಮೇವಿನ, ಹಾಗು ಸೈನಿಕರ ಹೊಟ್ಟೆಯ ವೆಚ್ಚವನ್ನು ಆತನು ನಮ್ಮಲ್ಲಿ ಬೇಡುತ್ತಿರುವದಿಲ್ಲ. ತಾರಾಬಾಯಿ-ಸಂತಾಜಿಯ ಸೈನ್ಯದವರು ಆತನ ತ್ರಾಸಕ್ಕಾಗಿ ಬೇಸತ್ತಿರುವರು, ಆತನ ರೀತಿಯು ಸರಿಯಾದದ್ದಲ್ಲ. ಸೈನಿಕರು ಆತನ ಅಪ್ಪಣೆಯಂತೆ ನಿಂತಲ್ಲಿ ನಿಲ್ಲದೆ ತಿರುಗಿ ತಿರುಗಿ ಕಷ್ಟಪಡಬೇಕು, ಸುಲಿಗೆಯ ಹಣವನ್ನೆಲ್ಲ ಸುತಾಜಿಯು ಅಪಹರಿಸಬೇಕು, ಆ ಆಶೆಬುರುಕನು ಕೋಟಿಗಟ್ಟಲೆ ಹೊನ್ನು ಗಳಿಸಿರುವನೆಂದು ಆತನ ಜನರೇ ಹೇಳು ವರು. ಸುತಾಜಿಯು ಹೀಗೆ ಲಾಭಮಾಡಿಕೊಳ್ಳುವದನ್ನು ನೋಡಿಯೇ ಸೂರ್ಯಾಜಿಯ ಬಾಯಲ್ಲಿ ನೀರು ಒಡೆದು, ಆತನು ನಾಯಿಯ ದೇಶಮುಖಿಯ ಆಶೆಯಿಂದ ರಾಯಗಡ ವನ್ನು ಬಾದಶಹನಿಗೆ ಒಪ್ಪಿಸಿದನು, ಯಾಕೆ ಧನಾಜೀ, ನಾನಾಡುವಮಾತು ಸುಳ್ಳೇನು? ರಾಯಗಡವು ಮೊಗಲರ ವಶವಾಗುವಾಗ ಅದನ್ನು ಉಳಿಸಿಕೊಳ್ಳುವದನ್ನು ಬಿಟ್ಟು ಸಂತಾಜಿಯು ಕೊಲೆಸುಲಿಗೆಗಳನ್ನು ಮಾದು, ದುಡ್ಡಿನ ಆಸೆಯಿಂದ ಅತ್ತಿತ್ತ ಅಲೆದಾಡಬಹುದೋ! ಧನಾಜಿ-ಅದೊತ್ತಟ್ಟಿಗಿರಲಿ. ಸದ್ಯಕ್ಕೆ ಸಂತಾಜಿಯು ಝುಪಲಿಕಾರಖಾನನ ಸಂಗಡ ಏನೋ ಸಂಧಾನ ನಡಿಸಿದಹಾಗೆ ತೋರುತ್ತದೆ. ಹಾಗಲ್ಲದಿದ್ದರೆ ಖಾನನು ಜಿಂಜಿಯ ಮುತ್ತಿಗೆ ಸಡಿಲುಮಾಡಿ, ವಾಂಡಿವಾಸದಲ್ಲಿ ಹೋಗಿ ಕುಳಿತುಕೊಳ್ಳುತ್ತಿದ್ದನೆ? ಖಾನನಿಗೆ ಕರ್ನಾಟಕದ ನಬಾಬಗಿರಿಯು ಬೇಕಾಗಿದೆ. ಬಾದಶಹನು ಮುಪ್ಪಿನಿಂದ ತೀರ ಹಣ್ಣಾಗಿರುವದರಿಂದ ಬೇಗನೆ ಒಂದುದಿನ ಆತನು ಉದುರಿ ಹೋಗತಕ್ಕವನು, ಬಾದಶಹನು ಇರುವವರೆಗೆ ಮರಾಟರ ಕಾಟವನ್ನು ತೋರಿಕೆಗಾಗಿ ಇಟ್ಟು, ಬಾದ ಶಹನು ಸತ್ತಮೇಲೆ ಮರಾಟರನ್ನು ನಾಶಗೊಳಿಸಿ, ತಾನು ಕರ್ನಾಟಕದ ಸುಬೇ ದಾರನಾಗಬೇಕೆಂಬದು ಖಾನನ ಹವಣಿಕೆಯು, ಅದಕ್ಕೆ ಸಂತಾಜಿಯ ಸಹಾಯವು ಹಾಗಲ್ಲದಿದ್ದರೆ, ಮುತ್ತಿಗೆಯು ಇಷ್ಟು ಸಾವಕಾಶವಾಗಿ ನಡೆಯಬಹುದೇ? ಹೀಗೆಯೇ ದಿನಹಾಕಿ ಸೂರ್ಯಾಚೆಯು ಬಾಲವರಾಯನನ್ನು ಬಾದಶಹನಿಗೆ ಒಪ್ಪಿಸಿದನು. ಈಗ ಸಂತಾಜಿಯು ಅದರಂತೆ ದಿನಹಾಕಿ ಈ ಸಬೇಕೆಂದು ಮೂಡಿರುತ್ತಾನೆ, ಅಂದರೆ ಆಬಾಹೇಬರ ವಂಶವು ನಷ್ಟವಾ ದಂತಾಗುವದು. ರಾಜಾರಾಮಏನುಮೂಡಲಿ ? ಎಂಥ ಹೊತ್ತಿನಲ್ಲಿ ಪ್ರಹ್ಲಾದಪಂತರು ತೀರಿಕೊಂ ಇರಲ್ಲ! ಇಂಥ ಅನರ್ಥವು ಯಾಕೆ ಒದಗಿರಬಹುದು ? ಧನಾಜೀ, ಇದೊಂದು ಅಪಶಕು ಸವಾಗಿರಬಹುದೇನು ? ಧನಾಜಿ - ಮಹಾರಾಜರು ಹೀಗೆ ಅವಸಾನಗೆಡುವದು ಸರಿಯಲ್ಲ. ಶಿವಪ್ರಭುವಿನ ಹಣವು ಬಲವತ್ತರವಾಗಿರುವವರೆಗೆ ಯಾವ ಪಶಕುನಗಳು ಏನುಭೂಡುವವು ? ಆದರೆ