ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫ ಸುರಸಗ್ರಂಥಮಾಲಾ, ರಾಜದ್ರೋಹದ ಪ್ರಸಂಗಗಳ ಮೇಲೆ ಸೂಕ್ಷ್ಮದೃಷ್ಟಿಯನ್ನಿಟ್ಟು ಅವನ್ನು ಆಗಾಗ್ಗೆ ನಿವಾ ರಣವೂಡಲೇಬೇಕು. ಸಂತಾಜಿಯು ಈಗ ಮೊದಲಿನಹಾಗೆ ಇದ್ದಂತೆ ತೋರುವದಿಲ್ಲ, ರಾಜಾರಾಮ-ರಾಮಚಂದ್ರ ಸಂತರಾದರೂ ಹೀಗೆಯೇ ಪತ್ರ ಬರೆದಿರುತ್ತಾರೆ. ಸಂತಾಜಿಯಮೇಲೆ ವಿಶ್ವಾಸವಿಟ್ಟು ಇನ್ನು ಜಿಂಜೀಕೋಟೆಯಲ್ಲಿರದೆ, ಆದಷ್ಟು ಬೇಗನೆ ಇತ್ತಕಡೆಗೆ ಹೊರಟುಬರಬೇಕೆಂದು ಸ್ಪಷ್ಟವಾಗಿ ಅವರು ಬರೆದಿದ್ದಾರೆ. ಸಂತಾಜಿಯು ಬಾದಶಹನಿಗೆ ಅಂತರಂಗದಿಂದ ಅನುಕೂಲವಾಗಿರುವನಂತೆ, ಆತನ ಸೈನ್ಯವು ಆತನ ತ್ರಾಸಕ್ಕಾಗಿ ಬೇಸತ್ತಿರುವದಂತೆ. ಖಂಡೋಜಿಜಿಟಸ-ಧನಾಜೀರಾವ, ನಾವು ಜಿಂಬೆಯನ್ನು ಬಿಡಬೇಕೆಂದು ರಾಮಚುದ್ರಸಂತರ ಆಗ್ರಹದಸೂಚನೆಯಿರುತ್ತದೆ. ಅದಕ್ಕೆ ಉಪಾಯವೇನುಗೂಡಬೇಕು? ಧನಾಜಿ-ಮುಂದೆ ಏನುಮೂಡಬೇಕೆಂಬದನ್ನು ನೀವೇ ಆಲೋಚಿಸತಕ್ಕದ್ದು. ಉಪಾಯಕೋವಿದರಾದ ಪ್ರಹ್ಲಾದಪಂಕದ ತೀರಿಕೊಂಡಿರುವದರಿಂದ ಅವರ ಸ್ಥಳದಲ್ಲಿ ನೀವು ಇರುವಿರಿ. ನಾವೇನು? ಕಠಾರಿಯ ಒಕ್ಕಲು, ಅಪ್ಪಣೆಯನ್ನು ಅಮಲಿನಲ್ಲಿ ತರುವ ದಷ್ಟು ನನ್ನ ಕೆಲಸವು.

  • ಖಂಡೋಜಿ-ಧನಾಜೀ, ಈ ಕಾರ್ಯದಲ್ಲಿ ನಮಗೆ ಗಣೋಜಿಶಿರ್ಕೆಯು ಅನು ಕೂಲವಾಗಲೇಬೇಕು. ಆತನನೂರ್ಗದಿಂದ ಈ ಕಾರ್ಯವು ಸುಸೂತ್ರವಾಗಿ ಆಗು ವದು. * ಆತನನ್ನು ಒಲಿಸಿಕೊಳ್ಳುವ ಯತ್ನ ಮಡತಕ್ಕದ್ದು. ಅದಕ್ಕಾಗಿಯೇ ನಾನು ಈಗ ಹೋಗುವೆನು

ಖಂಡೋಬನು ಹೊರಟು ಹೋಗಲು, ಮಹಾರಾಜರು ಚಿಂತಾಕ್ರಾಂತರಾಗಿ ಕುಳಿತುಕೊಂಡರು. ಅವರು ಮತ್ತೆ ಧನಾಜಿಯನ್ನು ಕುರಿತು ರಾಜಾರಾಮ-ರಾಮಚಂದ್ರಸಂತರಾದರೂ ಸಂತಾಜಿಯವಿರುದ್ಧವಾಗಿಯೇ ನನ ಗೆ ಪತ್ರವನ್ನು ಬರೆದಿದ್ದಾರೆ. ಸಂತಾಜಿಯು ಬಾದಶಹನ ಡೇರೆಯ ಬಂಗಾರದ ಕಳಸವ ನ್ನು ತಂದನೆಂಬ ಮೋಹಕ್ಕೆ ನೀವು ಬೀಳಬಾರದೆಂದು ಅವರು ನನಗೆ ತಿಳಿಸಿರುವರು. ಬಾದಶಹನು ಕೈಯಲ್ಲಿ ಸಿಕ್ಕು ಹೋಗಿದ್ದನಾದ್ದರಿಂದ ಆತನನ್ನು ಸಂತಾಜಿಯು ಕೊಲ್ಲಬ ಹುದಾಗಿತ್ತೆಂದು ಸಂತರು ಅಭಿಪ್ರಾಯಪಡುವರು. ಸಂತಾಜೆಯಮೇಲೆ ವಿಶ್ವಾಸವಿಡದೆ ಆದಷ್ಟು ಬೇಗನೆ ಮಹಾರಾಷ್ಟ್ರದಲ್ಲಿ ಹೊರಟುಬರಬೇಕೆಂದು ಅವರು ನನಗೆ ಸ್ಪಷ್ಟವಾಗಿ ತಿಳಿಸಿರುವರು, ಧನಾಜಿ- ನನಗಾದರೂ ಹಾಗೆಯೇ ತೋರುತ್ತದೆ. ಸಂತಾಜೆಯ ಮೇಲೆ ಸಂಪೂರ್ಣ ವಿಶ್ವಾಸವಿಡುವದು ಸರಿಯಲ್ಲ. ಮೊನ್ನೆ ನಾನು ಮಹಾರಾಜರ ಕೆಲವು ದಂಡಾ ಳುಗಳನ್ನು ದುಂಢರಿಯ ಕಂದರದ ಸುಲಿಗೆಯ ಹಣದ ವಸೂಲಿಗಾಗಿ ಸಂತಾಜಿಯ ಬಳಿಗೆ ಕಳಿಸಿದ್ದೆನು. ಆಗ ಸಂತಾಜು ಹಣವನ್ನು ಕೊಡದೆ ಜಗಳವಾಡಿದನಂತೆ! ಮಹಾ