ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

29 ಶಿವಪ್ರಭುವಿನಪುಣ್ಯ ೨೨೫ ರಾಜರ ದಂಡಿನಲ್ಲಿ ಶಿಸ್ತೇಯಿಲ್ಲೆಂತಲೂ, ಮಹಾರಾಜರು ನಿರ್ಧಾರದ ಸ್ವಭಾವದವರಲ್ಲವೆಂ ತಲೂ ನಿರಾಕರಿಸಿದನಂತ, ಸಂತಾದೆಯ ದಂಡಾಳುಗಳು ಅವನ ತ್ರಾಸದ ಕಾಲಲ್ಲಿ ಬೇಸತ್ತು ಹೋಗಿರುವರು. ಅವರು ಈಗ ನನ್ನನ್ನು ಕೊಡುವ ಹಾಗಿದ್ದಾರೆ. ನಾನು ಈಗಲೆ ಸೈನ್ಯ ದೊಡನೆ ಸಂತಾಜೆಯ ಮೇಲೆ ಸುಳ್ಳ ಸಾಗಿಹೋದಂತೆ ಮಾಡಿ, ಆತನ ದಂಡಾಳುಗಳ ನೆಲ್ಲ ನನ್ನ ಕಡೆಗೆ ತಿರುಗಿಸಿಕೊಳ್ಳುವೆನು; ಅಂದರೆ ಸಂತಾಜಿಯ ಕಣ್ಣುಗಳು ತೆರೆಯುವವು. ತಾರಾಬಾಯಿ-ಬೇಡಿರಿ, ಧನಾಜಿರಾವ, ಹಾಗೆ ಮಾಡಬೇಡಿರಿ. ಈ ಪ್ರಸಂಗ ದಲ್ಲಿ ನಮ್ಮೊಳಗೆ ಒಡಕು ಹುಟ್ಟುವದು ಹಿತಕರವಲ್ಲ. ನೋಡಿರಿ, ನಮ್ಮೊಳಗೆ ವೈಮ ನಸ್ಸು ಹುಟ್ಟುವದನ್ನು ನೋಡಿ ಮಹಾರಾಜರು ಎಷ್ಟು ವ್ಯಾಕುಲವಾಗಿದ್ದಾರೆ, ಅವರ ಮೋರೆಯು ಬಾಡಿ ಹೋಯಿತು ! ಧನಾಜಿ- ಅದರ ವಿಷಯವಾಗಿ ಮಹಾರಾಜರು ನಿಶ್ಚಿಂತರಾಗಿರಬೇಕು. ಸಂತಾ ಜಿಯು ಹಣ ಕೊಡದೆ ಮಹಾರಾಜರ ದಂಡಾಳುಗಳೊಡನೆ ಜಗಳಾಡಿ ಮಹಾರಾಜರನ್ನು ನಿರಾಕರಿಸಿದ್ದಕ್ಕಾಗಿ, ಮಹಾರಾಜರು ದೋಷವಿಡುವರೆಂದು ನಾನು ಸಂತಾಜಿಯ ಮುಂದೆ ಹೋಗಿ ನಿಂತುಕೊಳ್ಳುವೆನು, ಅದನ್ನು ನೋಡಿ ಸಂತಾಜಿಯ ದಂಡಾಳುಗಳು ನನ್ನನ್ನು ಕೂಡಿಕೊಂಡರೆ ಸಂತಾಜಿಯ ಮೈಮೇಲೆ ಎಚ್ಚರ ಹುಟ್ಟುವದು, ತಾರಾಬಾಯಿ-ಧನಾಜೀರಾವ, ಇದಕ್ಕೂ ಹೆಚ್ಚಿನ ಪ್ರಸಂಗವನ್ನು ತಂದುಕೊ ಳ್ಳಬಾರದು ಕಂಡಿರಾ! ಯಾಕಂದರೆ ನಮ್ಮೊಳಗಿನ ಒಡಕಿನಿಂದ ಮಹಾರಾಷ್ಟ್ರ ರಾಜ್ಯಕ್ಕೆ ಅಪಾಯ ಒದಗೀತು, ತಾರಾಬಾಯಿಯ ಈ ಮಾತಿಗೆ ಒಪ್ಪಿಕೊಂಡು ಮಹಾರಾಜರನ್ನು ನಂದಿಸಿ (ಧನಾ ಜೆಯು ಹೊರಟು ಹೋದನು, ಮೊದಲೇ ತಂತ್ರದಿಂದ ಆತನು ಸಂತಾಜಿಯ ದಂಡಿನವರ ಮನಸ್ಸನ್ನು ಒಡಕೊಂಡಿದ್ದನು. ಆತನು ಸುಳ್ಳೇ ಸಂತಾಜೆಯ ಮೇಲೆ ಸೈನ್ಯದೊಡನೆ ಬೀಳಲು, ಸಂತಾಜಿಯ ಯಾವತ್ತು ದಂಡಿನವರು ಸಂಕೇತದಂತೆ ಧನಾಜಿಯನ್ನು ಕೂಡಿ ದರು. ಇದನ್ನು ನೋಡಿ ಸಂತಾಜಿಯು ಸಂತಾಪಗೊಂಡನು. ಆತನ ಮೈಮೇಲಿನ ಎಚ್ಚ ರವು ತಪ್ಪಿತು. ಒಂದು ಕ್ಷಣವಾದರೂ ಅಲ್ಲಿಯಿರುವದು ಆತನ ಅಭಿಮಾನದ ಸ್ವಭಾವಕ್ಕೆ ಸೇರಲಿಲ್ಲ. ಆತನು ತನ್ನ ಶಿಷ್ಯನನ್ನು (ಹೆಂಡತಿಯಾದ ಪುರಷವೇಷಧಾರೀ ಕಮಲೆಯನ್ನು) ಕುರಿತು-ಕಮಲಾಕಾಂತ, ನಡೆ, ಇನ್ನು ಕರ್ನಾಟಕವನ್ನು ಬಿಟ್ಟು ಮಹಾರಾಷ್ಟ್ರಕ್ಕೆ ತೆರಳೋಣನಡೆ, ಅಥವಾ ಅರಣ್ಯವನ್ನು ಸೇರೋಣನಡೆ! ಪ್ರಾಮಾಣಿಕತನಕ್ಕೆ ನಿಸ್ಸಹತೆಯ ಸ್ವಾಮಿನಿಷ್ಠೆಗೂ ವ್ಯಾವಹಾರಿಕ ಜಗತ್ತಿನಲ್ಲಿ ಮಾನವಿಲ್ಲನಡೆ, ರಾಷ್ಟ್ರದ ಸಂಸಾರವನ್ನು ನಡೆಸುತ್ತ ಕೂಡ್ರುವ ಅಟ್ಟಹಾಸಕ್ಕಿಂತ, ಅರಣ್ಯವನ್ನು ಸೇರಿ ದೇಹಸಾ ರ್ಥಕ ಮಾಡಿಕೊಳ್ಳುವದು ನೆಟ್ಟಗೆ ನಡೆ! ಮಾತಾಡುವ ದೇವರ ಸೇವೆಮಾಡುವದಕ್ಕಿಂತ ಕಲ್ಲಿನ ದೇವರಿಗೆ ಮರೆಹೋಗೋಣನಡೆ