ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನವುಣ್ಯ 994 ಬಕುಲಾಬಾಯಿ ಅವ್ವಯ್ಯಾ! ಹೀಗೇಕೆ ಆಯಿತು? ಪ್ರಿಯಕರಾ, ಯಾಕೆ ಚಿಂತ ಮಾಡುವೆ? ತೇಜೋಹೀನನಾದ ದ್ವಿತೀಯೆಯ ಚಂದ್ರಮನಂತೆಯಿದ್ದ ನೀನು ರೋಹಿಣಿ ಯಂತೆ ಇದ್ದ ನನಗೆ ಅತ್ಯಂತ ಮನೋಹರನಾಗಿ ಕಾಣುತ್ತೀ, ಪ್ರಿಯಕರಾ, ಸಂತಾಜಿ ರಾವ, ನಾಗೋಜಿ ಮನೆಯ ಸಂಪೂರ್ಣವಾದ ವೈಭವಕ್ಕೆ ನೀನು ಸ್ವಾಮಿಯಾಗು, ಅವು ವೃಕ್ಷವನ್ನು ಮಲ್ಲಿಗೆಯ ಬಳ್ಳಿಯು ಆಲಿಂಗಿಸಿ ಒವಂತೆ ನಾನು ನಿನ್ನನ್ನು ಈಗ ಬಿಗಿ ಯಾಗಿ ಆಲಿಂಗಿಸಿ ಒಪ್ಪವೆನು, ಸಂತಾಜಿ-- ಥ ಚಾಂಡಾಲಸ್ತೀಯ, ಈಗಲೆ ನೀನು ಇಲ್ಲಿಂದ ಹೊರಟು ಹೋಗು, ನಿನ್ನ ಆ ಪಾಪಮಯವಾದ ವೈಭವಕ್ಕೆ ಬೆಂಕೆಹಚ್ಚು. ನನ್ನಂಥ ಸತ್ವಶಾಲಿ ಗಳು ಹೆಚ್ಚಿದ ಮಾನದಿಂದ ರಾಷ್ಟ್ರದ ಉದ್ಧಾರವಾಗುವದು, ಸತ್ವಭಂಗ ಮಾಡುವ ನಿನ್ನಂಥ ನೀಚರಿಂದ ರಾಷ್ಟ್ರವು ರಸಾತಲಕ್ಕೆ ಹೋಗುವದೇ ಸರಿ.” ನೀನು ಇಲ್ಲಿಂದ ಹೊರಟು ಹೋಗುವೆಯೋ ಇಲ್ಲವೋ? ಸೀಹತ್ಯೆಯ ದೋಷವು ಬಂದರೂ ಬರಲಿ. ನಿನ್ನ ರುಂಡವನ್ನು ತುಂಡರಿಸುವೆನು : ಹೀಗೆಂದು ಸಂತಾಜಿಯು ತನ್ನ ಖಡ್ಗವನ್ನು ಒರೆಯಿಂದ ಹಿರಿಯನ್ನು ಬಕುಲಾಬಿ, ಯಿಯು- ಛೇ ದುಷ್ಟಾ, ದಯಾಶೂನ್ಯಾ, ನಿನ್ನನ್ನು ಪ್ರಾರ್ಥಿಸುವಲ್ಲಿ ನನ್ನ ಆಯುಷ್ಯವು ವ್ಯರ್ಥವಾಗಿ ಹೋಯಿತು. ನಾನು ಸ್ತ್ರೀ ಕುಲದಲ್ಲಿ ಹುಟ್ಟಿದ್ದೇ ನಿಜವಾಗಿದ್ದರೆ, ಯುಕ್ತಿ ಪ್ರಯುಕ್ತಿಯಿಂದ ಬಾದಶಹನಿಗೆ ನಿನ್ನ ರುಂಡವನ್ನು ಒಪ್ಪಿಸುವೆನು, ಎಂದು ಹೇಳಿ ಕ್ಷಣ ಮಾತ್ರದಲ್ಲಿ ಆಕೆಯು ಗಿಡಗಳ ಗುಂಪಿನಲ್ಲಿ ಮರೆಯಾದಳು. ಆ ಕರ್ಕಶ ಸ್ತ್ರೀಯ ಸಂತಾ ಪದ ಮಾತುಗಳನ್ನು, ಅಲ್ಲಿಯೇ ಮರೆಗೆ ನಿಂತು ಕೇಳಿದ ಕವಿಯು ಚಿಂತೆಗೊಳಗಾ ದಳು. ತನ್ನ ಪತಿಯ ನಿರ್ಮಲಾಚರಣೆಗಾಗಿ ಸಮಾಧಾನಪಟ್ಟಿದ್ದ ಕಮಲೆಯು, ದುಷ್ಟ ಬಕುಲಾಬಾಯಿಯು ಮಾತ್ಸರ್ಯದಿಂದ ತನ್ನ ಪತಿಯ ಪ್ರಾಣಹರಣಕ್ಕಾಗಿ ಏನು ಉಪ ಯವನ್ನು ಯೋಚಿಸುವಳೋ ಎಂದು ಚಿಂತೆಗೊಳಗಾದಳು. ಸಂತಾಜಿಯು ಆ ಅರಣ್ಯ ದಲ್ಲಿ ಒಂದು ಕ್ಷಣವಾದರೂ ನಿಂತುಕೊಳ್ಳದೆ ಪುವಾರದೊಡನೆ ಅಲ್ಲಿಂದ ಹೊರಟನು. ಮನುಷ್ಯನಿಗೆ ಕಷ್ಟಗಳು ಒದಗಹತ್ತಿದರೆ ಅವು ಒಂದರ ಹಿಂದೆ ಒಂದು ಒದಗುತ್ತವೆಂಬ ಮಾತು ಸುಳ್ಳಲ್ಲ. ಸಂತಾಜಿಯು ಕರ್ನಾಟಕದಿಂದ ಹೊರಟು ವಿಜಾಪುರದ ಸನಿಯಕ್ಕೆ ಬಂದನು. ಅಲ್ಲಿ ಆತನಿಗೆ ಪುನಃ ಧನಾಜಿಯ ಭೆಟ್ಟಿಯಾಯಿತು, ಆಗ ಸಂತಾಜಿಯ ಉಳಿದ ಸೈನಿಕರು ಆತನ ಸಂಗಡ ತಿರುಗಲಿಕ್ಕೆ ಬೇಸತ್ತು ಧನಾಜೆಯನ್ನು ಕೂಡಿಕೊಂ ಡರು, ಅದರಿಂದ ಸಂತಾಜಿಯು ತೀರ ನಿರಾಶ್ರಿತನಾಗಿ ಶಂಭುಮಹಾದೇವನ ಗುಡ್ಡದಲ್ಲಿ ಆಶ್ರಯಸ್ಥಾನವನ್ನು ಕಲ್ಪಿಸಿಕೊಳ್ಳಬೇಕೆಂದು ಹೊರಟನು. ಕಮಲೆಯೂ, ನಾಲ್ಕಾರು ಜನ ಅನುಯಾಯಿಗಳೂ ಮಾತ್ರ ಆತನನ್ನು ಹಿಂಬಾಲಿಸಿದ್ದರು.