ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುರಸಗ್ರಂಥಮಾಲಾ, ಬಕುಳೆಯು ಮಹಾಸಾಹಸಿಯಾದ ಸ್ತ್ರೀಯು ಸಂತಾಜಿಯು ತನ್ನನ್ನು ಹಲವು ಸಾರೆ ಅವಮಾನಗೊಳಿಸಿದ ಸೇಡನ್ನು ತೀರಿಸಿಕೊಳ್ಳುವದಕ್ಕಾಗಿ ಆತನ ಪ್ರಾಣಹರಣ ಮಾಡಲು ಆ ದುಷ್ಟಳು ಹೊಂಚುಹಾಕಿದ್ದಳು. ಆ ಸ್ವತಂತ್ರಳಾದ ಸ್ತ್ರೀಯು ಕೆಲವು ರಾವುತರೊಡನೆ ಸುತಾಜಿಯ ಬೆನ್ನ ಬಿಡದೆ ಒಂದೇಸವನೆ ಸಾಗಿದ್ದಳು, ಬೇಸಿಗೆಯ ಕಾಲವು, ಮಧ್ಯಾಹ್ನದ ಬಿಸಿಲು ರಣಗುಟ್ಟಿ ಸುರಿಯಹತ್ತಿದೆ, ಮಾರ್ಗಾಯಾಸದಿಂದ ಸಂತಾದೆಯೂ ಅವನ ಸಂಗಡಿಗರೂ ಬಹಳವಾಗಿ ಬಳಲಿದ್ದಾರೆ. ಅಷ್ಟರಲ್ಲಿ ಒಂದು ಪ್ರಶಸ್ತವಾದ ಬಾವಿಯು ಅವರ ಕಣ್ಣಿಗೆ ಬಿದ್ದಿತು, ಸಂತಾಜಿಯು ಆ ಬಾವಿಯ ದಂಡೆ ಯಲ್ಲಿ ತನ್ನ ಕುದುರೆಯನ್ನು ಇಳಿದು “ವಿಶ್ರಮಿಸತೊಡಗಿದನು. ಆಗ ಆತನ ಸಂಗಡಿ ಗರಿಗೆ ಬಹಳ ಸಂತೋಷವಾಯಿತು. ಸ್ವಲ್ಪಕಾಲದ ಮೇಲೆ ಅವರೆಲ್ಲರೂ ಬಾವಿಯಲ್ಲಿ ದುಮುಕಿ ಯಥೇಚ್ಛವಾಗಿ ಈಸಾಡಹತ್ತಿದರು. ಕಮಲೆಯು ಮಾರ್ಗಯಾಸದಿಂದ ಸಮೀಪದ ಒಂದು ಗಿಡದ ಬುಡದಲ್ಲಿ ಒರಗಿರಲು, ಆಕೆಗೆ ನಿದ್ದೆಯು ಹತ್ತಿತು, ಸಂತಾ ಜಿಯು ಮನದಣಿಯಾಗಿ ಈಸಿ ಬಾವಿಯ ದಂಡೆಯ ಮೇಲೆ ಬಂದು ಮೈ ಒರಸಿಕೊಳ್ಳ ಹತ್ತಿದನು. ಆತನು ತಲೆಯ ಮೇಲೆ ಪಂಜೆಯನ್ನು ಹಾಕಿ ಕಣ್ಣು ಒರಿಸಿಕೊಳ್ಳುತ್ತಿರಲು, ನಾಲ್ಕಾರು ಜನ ಕೊಲೆಗಡಕರು ಶಸ್ತ್ರಪಾಣಿಗಳಾಗಿ ಒಮ್ಮೆಲೆ ಸಂತಾಜಿಯ ಮೇಲೆ ದುಮುಕಿ ಸಿಕ್ಕಲ್ಲಿ ಶಸ್ತ್ರಗಳಿಂದ ಸಿಕ್ಕಹಾಗೆ ಆತನನ್ನು ಇರಿಯಹತ್ತಿದರು. ಸಂತಾಜಿಯ ಸಂಗಡಿಗರು ಇನ್ನೂ , ಬಾವಿಯಲ್ಲಿ ಈಸುತ್ತಲೇ ಇದ್ದರು, ಕಮಲೆಗೆ ಗಾಢವಾದ ನಿದ್ರೆಯು ಹತ್ತಿತ್ತು. ಇತ್ತ ನಿಶ್ಯಸ್ತನಾದ ಸಂತಾಜಿಯು ಶಸ್ತ್ರಗಳ ಇರತ ಹೊಡತಗ ಳಿಂದ ಜರ್ಜರನಾಗಿ- * ಹಾಯ್, ಹಾಯ್, ಕಮಲೇ ಸತ್ತನು ಸತ್ತೆನು” ಎಂದು ಒದರುತ್ತ ನೆಲಕ್ಕೆ ಬಿದ್ದನು, ದುಷ್ಟ ರಾಧಾಬಾಯಿಯು ಅಲ್ಲಿಯೇ ಗಿಡದ ಮರೆಯಲ್ಲಿ ನಿಂತು ಸಂತಾಜಿಯ ಈ ಕೊಲೆಯನ್ನು ನೋಡುತ್ತಲಿದ್ದಳು. ಸಂತಾಜೆಯು ಇನ್ನು ಬದುಕಲಾರನೆಂಬ ನಂಬಿಗೆಯಾದ ಕೂಡಲೆ ಆಕೆಯು ಸನ್ನೆ ಮಾಡಲು, ಕೊಲೆಗಡ ಕರು ಸತಾಜಿಯನ್ನು ಬಿಟ್ಟು ನಡೆದರು, ಅವರೊಡನೆ ರಾಧಾಬಾಯಿಯೂ ಎತ್ತೋ ಅದೃಶ್ಯವಾಗಿ ಹೋದಳು. ತನ್ನ ಪತಿಯ ಆರ್ತಸ್ವರವನ್ನು ಕೇಳಿ, ಪುರುಷವೇಷಧಾರಿಯಾದ ಕಮಲೆಯು ಗಡ ಬಡಿಸಿ ಎಚ್ಚತ್ತು ದುಃಖದಿಂದ ಆಕ್ರೋಶ ಮಾಡುತ್ತ ಪತಿಯ ಬಳಿಗೆ ಬಂದಳು. ಆಗ ಸತಾಜೆಯ ದೇಹದೊಳಗಿಂದ ರಕ್ತವು ಒಂದೇಸವನೆ ಹರಿಯುತ್ತಲಿತ್ತು. ಅದನ್ನು ನೋಡಿ ಕಮಲೆಯ ಪಂಚಪ್ರಾಣಗಳು ಹಾರಹತ್ತಿದವು. ಆಕೆಯು ಬಹು ಕಷ್ಟದಿಂದ ತನ್ನ ದುಃಖವನ್ನು ನುಂಗಿಕೊಂಡು ಪತಿಯ ಬಳಿಯಲ್ಲಿ ಕುಳಿತು ಆತನ ತಲೆಯನ್ನು ತನ್ನ ತೊಡೆಯ ಮೇಲೆ ಇಟ್ಟುಕೊಂಡಳು, ದುಃಖಾತಿಶಯದಿಂದ ಆಕೆಯ ಮುಖದಿಂದ ಶಬ್ದಗಳು ಹೊರಡದಾದವ, ಆಕೆಯು ಒಂದೇ ಸವನೆ ಪತಿಯ ಮುಖವನ್ನು ನೋಡು