ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನಮ್ರಣ್ಯ, . ಯಿತು. ಅದರಲ್ಲಿ ರಾಮಚಂದ್ರಪಂತರಿಂದ ಚಿಂತಾಜನಕ ಪತ್ರಗಳು ಬರಹತ್ತಿದವು, ಸಂತಾಜಿಯು ಔರಂಗಜೇಬನ ಪಕ್ಷವನ್ನು ವಹಿಸಿರುವನೆಂಬ ಸಂಶಯವು ರಾಮಚಂದ್ರ ಸಂತರಲ್ಲಿ ದಿನದಿನಕ್ಕೆ ಹೆಚ್ಚುತ್ತ ನಡೆದಿತ್ತು. ಆಮಾತಿಗೆ ಧನಾಜಿಯೂ, ತಾರಾಬಾ ಯಿಯೂ ಪುಷ್ಟಿಯನ್ನುಂಟು ಮಾಡಿದರು. ಇದರಿಂದ ೭೦ಡೋಜಿ ಅಂತಃಕರಣವು ಬಹು ವ್ಯಥಿತವಾಯಿತು. ಹಾಗಾದರೂ ಮಾಡಿ ಮಹಾರಾಜರನ್ನು ಜಿಂಜಿಯಿಂದ ಹೊರ ಡಿಸಿ ಮಹಾರಾಷ್ಟ್ರಕ್ಕೆ ಕರಕೊಂಡು ಹೋಗಿ ಹಿಂದಿನಿಂದ ಕರ್ನಾಟಕವನ್ನು ವಶಮಾಡಿಕೊ ಳ್ಳಬೇಕೆಂದು ಆತನು ಯೋಚಿಸಿದನು. ತನ್ನ ಯೋಚನೆಯು ಸಫಲವಾಗುವದಕ್ಕಾಗಿ ಯುಕ್ತಿಯನ್ನು ಯೋಚಿಸುವಲ್ಲಿ ಆ ಸ್ವಾಮಿನಿಷ್ಠ ಖಂಡೋಬನು ಮಗ್ನನಾಗಿ ಹೋಗಿ ದ್ದನು. ಆತನು ಹಾದಿಯನ್ನು ಹಿಡಿದು ಹೋಗುತ್ತಿರುವಾಗ ಅಂತಃಪುರದ ಕಿಡಕಿಯಲ್ಲಿ ರಾಜಕುವರಳು ಚಿಂತಾಮಗ್ನಳಾಗಿ ಕುಳಿತುಕೊಂಡದ್ದು ಆತನ ಕಣ್ಣಿಗೆಬಿದ್ದಿತು. ಕೂಡಲೆ ಖಂಡೋಜಿಗೆ ಒಂದು ಯುಕ್ತಿಯು ತೋಚಿ, ಆತನು ರಾಜಕುವರಳ ಬಳಿಗೆ ಹೋದನ್ನು ಈಗ ರಾಜಕುವರಳು ತೀರ ನಿಸ್ತೇಜಳಾಗಿದ್ದಳು. ರಾಯಗಡದ ಮುತ್ತಿಗೆಯ ಕಾಲ ದಲ್ಲಿ ತನ್ನ ಪತಿಯಾದ ಗಣೋಜಿರಾವ ಶಿರ್ಕೆಯನ್ನು ಸೆರೆಹಿಡಿಯುವಾಗ ಇದ್ದ ತೇಜ ಸ್ಥಿತೆಯೂ, ಚಾಪಲ್ಯವೂ, ಉತ್ಸಾಹವೂ ಈಗ ಆಕೆಯಲ್ಲಿ ಇದ್ದಿಲ್ಲ. ಅದನ್ನು ನೋಡಿ ಖಂಡೋಬನಿಗೆ ಬಹಳ ವ್ಯಸನವಾಯಿತು, ರಾಜಕುವರಳು, ತನ್ನ ಬಂಧುವಿನಂತೆಯಿದ್ದ ಖಂಡೋಬನನ್ನು ಆದರದಿಂದ ಬರಮಾಡಿಕೊಳ್ಳುತ್ತಿರಲು, ಖಂಡೋಬನು ಉತ್ಕಂಠ ಯಿಂದ ರಾಜಕುವರಳನ್ನು ಕುರಿತು ಖಂಡೋಜಿ-ತಾಯಿಸಾಹೇಬ, ನನ್ನ ಸಂಗಡ ನಡೆಯಬೇಕು, ಬರುತ್ತೀ ರೇನು? ರಾಯಗಡದ ಮುತ್ತಿಗೆಯ ಕಾಲಕ್ಕೆ ನಿಮಗೆ ಪ್ರಾಪ್ತವಾಗದೆ ಇದ್ದ ಯಶಸ್ಸನ್ನು ಈಗ ಸಂಪಾದಿಸೋಣ, ರಾಜಕುವರ- ಅಣ್ಣಾ, ಈಗ ಎಲ್ಲಿಗೆ ಹೋಗಬೇಕು? ನನ್ನಿಂದೇನು ಉಪಯೋ ಗವಾದೀತು? ನಾನು ಜೀವನ್ಮತಳಂತೆ ಕೆಲಸಕ್ಕೆ ಬಾರದವಳಾಗಿ ಜೀವಿಸುತ್ತಿರುವೆನು. ನನ್ನನ್ನು ಮೃತಮನುಷ್ಯರಲ್ಲಿ ಎಣಿಸಿದರೂ ತಪ್ಪಾಗಲಿಕ್ಕಿಲ್ಲ. ಖಂಡೋಜಿ- ತಾಲೂಸಾಹೇಬ, ನಾವು ಈಗ ನೆಟ್ಟಗೆ ಶಿರ್ಕೆಮಾನೆಯವರ ಛಾವಣಿಯನ್ನು ಸೇರಲೇಬೇಕು. ಈ ಮರಾಠಾ ಸರದಾರರನ್ನು ನನ್ನ ಕಡೆಗೆ ಮಾಡಿ ಕೊಳ್ಳದಿದ್ದರೆ ಜಿಂಜೆಯಿಂದ ಮಹಾರಾಜರ ಬಿಡುಗಡೆಯಾಗುವಂತೆಯಿಲ್ಲ. ನಡೆಯಿರಿ, ಚಿರಂಜೀವನನ್ನು ಸಂಗಡ ಕರಕೊಳ್ಳಿರಿ. ನಾವು ಗಣೋಜಿರಾಯರ ಸಿಟ್ಟಿಗೆ ಬಲಿಯಾ ದರೂ ಆಗೋಣ, ಇಲ್ಲದಿದ್ದರೆ ಅವರನ್ನು ನಮ್ಮ ಪಕ್ಷಕ್ಕೆ ಒಲಿಸಿಕೊಂಡಾದರೂ ಬಿಡೋಣ. ಇದು ಕಟ್ಟಕಡೆಯ ಯತ್ನವು