ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

513 ಸುರಸಗ್ರಂಥಮಾಲಾ, ರಾಜಕುವರ ಆಣ್ಣಾ, ನಡೆ, ನೀನು ನನ್ನನ್ನು ನಿನ್ನ ಒಡಹುಟ್ಟಿದ ತಂಗಿಯಾದ ಸಂತೂಬಾಯಿಯೆಂತಲೇ ತಿಳಿದುಕೊ, ಪ್ರಸಂಗ ಒದಗಿದರೆ, ನನ್ನನ್ನೂ, ನನ್ನ ಈ ಕೂಸನ್ನೂ ತುಂಡರಿಸಿ ಚಲ್ಲಲು ಹಿಂದೆಮುಂದೆ ನೋಡಬೇಡ ! ಹೆಂಡತಿಯನ್ನು ಗಂಡನ ಮನೆಗೆ ಕಳಿಸುವ ಪ್ರಸಂಗವು ಇದೇ ಆಗಿರುವದು, ನಿನ್ನ ಹಂಚಿಕೆಯು ನನ್ನ ಮನಸ್ಸಿಗೆ ಬಂದಿತು. ನಡೆ, ಶತ್ರುಗಳ ಪಾಳಯವನ್ನು ಭೇದಿಸಿ ಹೋಗೋಣ, ಖಂಡೋಜಿ-ತಂಗೀ, ಪಾಳಯವನ್ನು ಭೇದಿಸಲು ಒಂದು ಯುಕ್ತಿಯನ್ನು ಯೋ ಚಿಸಿರುತ್ತೇನೆ, ವಾಯವ್ಯ ದಿಕ್ಕಿನ ಕಾವಲು ಗಣೋಜಿರಾವ ಶಿರ್ಕೆಯವರದಾಗಿರುವದು, ನಾವು ಆ ಮಗ್ಗಲಿನಲ್ಲಿ ಮಧ್ಯರಾತ್ರಿಯಲ್ಲಿ ತೊಟ್ಟಿಲೊಳಗೆ ಕುಳಿತು ದುರ್ಗದ ಮೇಲಿಂದ ಕೆಳಗೆ ಇಳಿಯೋಣ, ನಮ್ಮ ಕೆಲಸವು ಏನೂ ಗದ್ದಲವಿಲ್ಲದೆ ಸಾಧಿಸಿದರಂತೂ ಸರಿಯೆ. ಸಾಧಿಸದೆ ಏನಾದರೂ ಅನರ್ಥವು ಒದಗಿದರೆ, ನಮ್ಮ ನಾಶವಾದೀತು. ಆಗಲೊಲ್ಲದೇಕೆ? ಸ್ವಾಮಿಕಾರ್ಯದಲ್ಲಿ ಮಡಿಯುವ ನಮ್ಮ ದೇಹದ ಸಾರ್ಥಕತೆಯಾದರೂ ಆದೀತು! ಇದು ಕಡೆಯ ಯತ್ನವು. ಸುಮ್ಮನೆ ನಲವತ್ತು ಸಾವಿರ ಸೈನ್ಯದ ಸಂಗಡ ಕಾದಿ ರಾಜಾ ರಾಮ ಪ್ರಭುವನ್ನು ಈ ಜಿಂಜೀ ಕೋಟೆಯಿಂದ ಪಾರಮಾಡಿ ಮಹಾರಾಷ್ಟ್ರಕ್ಕೆ ಕಳಿಸುವ ದಕ್ಕೆ ಆಯಾಸಪಡುವದು, ನಮ್ಮ ಈ ಸಾಹಸದಿಂದ ತಪ್ಪಿದರೆ ತಪ್ಪುವಹಾಗಿದೆ! ರಾಜಕುವರ- ಸರಿ ಸರಿ! ನಿನ್ನ ಮಾತನ್ನು ನಾನು ಒಪ್ಪಿಕೊಂಡೆನು. ಇಂದು ಮಧ್ಯರಾತ್ರಿಯಾದ ಕೂಡಲೆ ಈ ಪಿಲಾಜಿಯನ್ನು ಕರಕೊಂಡು ನಿನ್ನ ಸಂಗಡ ಬರುತ್ತೇನೆ, ಮಧ್ಯರಾತ್ರಿಯ ಸಮಯವು ಒದಗಿತು. ಅಲ್ಲಿಯವರೆಗೆ ರಾಜಕುವರಳು ಈಶ್ವರಾ ರಾಧನೆಯಲ್ಲಿ ತೊಡಗಿದ್ದಳು. ಅದುಸಾಕ್ಷಾತ್ ಪರಮೇಶ್ವರನ ಪ್ರಾಪ್ತಿಗಾಗಿ ಪಾರ್ವತಿಯು ತಪಸ್ಸನ್ನಾಚರಿಸುವಂತೆಯೂ, ನವವಧುವು ಗೌರೀಹರನನ್ನು ಪೂಜಿಸುವಂತೆಯೂ ತೋ ರಿತು, ಖಂಡೋಬನು ತೊಟ್ಟಿಲಗಳು ಸಿದ್ಧವಾದ ಸುದ್ದಿಯನ್ನು ಹೇಳಲು, ರಾಜಕುವ ರಳು ಕೂಡಲೆ ಮಗನನ್ನು ಕರಕೊಂಡು ಖಂಡೋಬನನ್ನು ಹಿಂಬಾಲಿಸಿದಳು. ತೀರ ಚಿಕ್ಕವನಾದ ಪಿಲಾಜೆಯು ಕೂಡ ಸದ್ದಿಲ್ಲದೆ ಆನಂದದಿಂದ ತೊಟ್ಟಿಲೊಳಗಿಂದ ತಾಯಿಯ ಸಂಗಡ ದುರ್ಗವನ್ನು ಇಳಿಯಹತ್ತಿದನು. ಎಲ್ಲರೂ ಸುರಕ್ಷಿತವಾಗಿ ದುರ್ಗವನ್ನು ಇಳಿ' ದರು. ಅವರೆಲ್ಲರು ಗಣೋಜಿಶಿರ್ಕಯ ದಂಡಿನ ಅಧಿಕಾರಿಗಳಂತೆ ಪೋಷಾಕು ಹಾಕಿಕೊಂಡದ್ದರಿಂದ, ಕಾವಲುಗಾರರಿಗೆ ಅವರ ಸಂಶಯವು ಬರಲಿಲ್ಲ. ಇವರು ದುರ್ಗದ ಬುಡವನ್ನು ನಿರೀಕ್ಷಿಸಲು ಹೋಗಿರಬಹುದೆಂದು ತಿಳಿದು, ಕಾವಲುಗಾರರು ಬಾಗಿ ರಾಮರಾಮ ಮಾಡತೊಡಗಿದರು. ಹೀಗೆಯುಕ್ತಿಯಿಂದ ಖಂಡೋಬನು ರಾಜಕುವರಳೊ ಡನೆ ಶಿರ್ಕೆಯ ಡೇರೆಯ ಬಾಗಿಲಿಗೆ ಬಂದನು. ಆಗ ಆತನು ತನ್ನ ಸೇವಕರಿಗೆ ಆಯುಧಗ ಳನ್ನು ಮುಚ್ಚಿಕೊಂಡು ಒತ್ತಟ್ಟಿಗೆ ಅಡಗಿಕೊಂಡಿರುವಂತೆ ಸೂಚಿಸಿ, ಡೇರೆಯ ಬಿಚ್ಚು ಗತಿಯ ಕಾವಲುಗಾರರನ್ನು ಕುರಿತು ದಿಟ್ಟತನದಿಂದ ಹೋಗಿರೋ ಯಾರಾದರೂ,