ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುರಸಗ್ರಂಥಮಾಲಾ, ಸಂತಾನವನ್ನು ಈಗ ಮತ್ತೆ ಯಾಕೆ ಹೆಚ್ಚಿಸುವೆ? ಯಾರಿರುವಿರಲ್ಲಿ? ನನ್ನ ಖಡ್ಗವನ್ನು ಕೊಡಿರಿ; ಈಗಲೇ ಈ ದುಷ್ಟನ ಶಿರಚ್ಛೇದವನ್ನು ಮಾಡಿಬಿಡುವೆನು! ಖಂಡೋಜಿ (ನಿರ್ಭಯದಿಂದ)- ಗಣೋಜಿರಾವ, ನಿಮ್ಮ ಖಡ್ಡವೇತಕ್ಕೆ ಬೇಕು? ನನ್ನ ಖಡ್ಗ ವನ್ನು ತಕೊಳ್ಳಿರಿ. ಇನ್ನು ಕಣವಾದರೂ ವಿಲಂಬ ಮಾಡದೆ ನನ್ನ ಶಿರ ಸ್ಪನ್ನು ತುಂಡರಿಸಿ; ಆದರೆ ಶಿರ್ಕೆವೀರಾ, ನನ್ನನ್ನು ತುಂಡರಿಸುವ ಮೊದಲು, ನಾನು ಸ್ಪಷ್ಟವಾಗಿ ಆಡುವ ಮಾತುಗಳನ್ನು ಕೇಳಿಕೊಳ್ಳು, ತರುಣ-ತರುಣಿಯದ ಯಾವಾ ಗಲೂ ನಿಕಟಸಂಬಂಧವನ್ನು ತಾಳುವದರಿಂದ, ಪ್ರಸಂಗದಲ್ಲಿ ಅವರ ಮನಸ್ಸುಗಳು ಕರಗ ಬಹುದೆಂಬ ನಿಮ್ಮ ವ್ಯಾವಹಾರಿಕ ಸಿದ್ಧಾಂತವು ೧೦೦ರಲ್ಲಿ ೯೯ ಅಂಶ ನಿಜವಾಗಿರಬಹುದು, ಆದರೆ ಒಂದು ಅಂಶದಲ್ಲಿಯದರೂ, ತರುಣ-ತರುಣಿಯರು ನೀಚ ವೈಷಯಿಕವಲ್ಲದ ಉದಾತ್ತ ಭಾವನೆಯಿಂದ ಪ್ರೇರಿತರಾಗಿ, ಶುದ್ಧಾಂತಃಕರಣವುಳ್ಳವರಾಗಿರುವ ಸಂಭವವು ಇರುವದೆಂಬ ಕಲ್ಪನೆಯು ಕೂಡ ನಿಮ್ಮ ವಿಚಾರವನ್ನು ಸ್ಪರ್ಶಿಸದೆಯಿದ್ದದ್ದು, ನಿಮ್ಮ ಅನು ಭವಕ್ಕೂ, ವಯಸ್ಸಿಗೂ, ಯೋಗ್ಯತೆಗೂ ಲಾಂಛನವೇ ಸರಿ. ಗಣೋಜೀರಾವ, ಮೂರು ವರೆ ಮೊಳ ಶರೀರದ ಸೌಂದರ್ಯಕ್ಕೆ ಮರುಳಾಗುವ ಅಧಮರೇ ಜಗತ್ತಿನಲ್ಲಿ ತುಂಬಿ ರುತ್ತಾರೆಂಬ ದುರ್ವಿಚಾರವನ್ನು ನೀವು ಬಿಟ್ಟು ಬಿಡಿರಿ, ನಿಮ್ಮ ಸಹವಾಸದಲ್ಲಿ ಒಂದು ತಪಸ್ಸನ್ನು ಕಳೆದಿರುವ ನಮ್ಮ ಈ ಪೂಜ್ಯ ರಾಜಕುವರಳ ಶುದ್ಧಾಂತಃಕರಣವನ್ನು ಆರಿ ಯದಿರುವ ನಿಮ್ಮ ಸದಸದ್ವಿವೇಕಕ್ಕೆ ಬೆಂಕಿಯಹಚ್ಚಲಿ! ನಿಮ್ಮ ಧರ್ಮಪತ್ನಿಯಲ್ಲಿ ಒಂದು ಸಂತಾನವಾಗಿದ್ದು, ಆಕೆಯ ನಿರ್ಮಲಾಂತಃಕರಣದ ಮೇಲೆ ನಿಮ್ಮ ಶೀಲದ, ನಿನ್ನ ಸದಾಚರಣೆಯ, ನಿಮ್ಮ ಪ್ರೇಮದ, ನಿಮ್ಮ ವಿಶ್ವಾಸದ ಪರಿಣಾಮವು ಏನೂ ಆಗಿ ರಲಿಕ್ಕಿಲ್ಲವೆ? ನಿಮ್ಮ ಧರ್ಮಪತ್ನಿಯ ಮೇಲೆಯೂ, ಶಿವಪುತ್ರಿಯ ಮೇಲೆಯೂ, ನನ್ನ ಆದರಕ್ಕೆ ಪಾತ್ರಳಾದ ಈ ರಾಜಕುವರಳ ಮೇಲೆಯೂ ವ್ಯಭಿಚಾರದ ಆರೋಪವೇ? ಇವೇ ಕೈಗಳಿಂದ ನಾನು ರಾಜಕುವರಳನ್ನು ಎತ್ತಿ ಆಡಿಸಿದ್ದೇನೆ. ಇನ್ನು ಬಹಳ ಮಾತುಗ ಆಕೆ? ಇಗೋ ತುಂಡರಿಸಿರಿ ಈ ರುಂಡವನ್ನು ! ಇಂದಿಗೆ ನನ್ನ ಸ್ವಾಮಿಕಾರ್ಯದ ಪರಿಸಮಾಪ್ತಿಯು ಆಗಿ ಹೋಗಲಿ !! ಈ ಮೇರೆಗೆ ನುಡಿದು ಖಂಡೋಜಿಯು ಖಡ್ಗವನ್ನು ಮುಂದೆ ಮಾಡಿ ತನ್ನ ಶಿರ ಸ್ಪನ್ನು ಬಗ್ಗಿಸಿ ನಿಂತುಕೊಳ್ಳಲು, ಅತ್ತ ರಾಜಕುವರಳು ಗಂಭೀರ ಧ್ವನಿಯಿಂದ ತನ್ನ ಮೈದುನನಾದ ರಾಣೋಜಿ ಶಿರ್ಕೆಯನ್ನು ಕುರಿತು- 'ಪೂಜ್ಯ ಮೈದುನರೇ, ನನ್ನ .ಈ ಅಣ್ಣನ ದೇಹದ ಅಂತವು ನಮ್ಮ ಪೂಜ್ಯ ಶಿರ್ಕೆಕುಲಭೂಷಣರಿಂದ ಆಗುವದರೊಳ ಗಾಗಿ ನನ್ನ ರುಂಡವನ್ನೂ, ನನ್ನ ಕೂಸಾದ ಈ ಪಿಲಾಜಿ ಶಿರ್ಕೆಯ ರುಂಡವನ್ನೂ ನೀವು ತುಂಡರಿಸಿರಿ, ಶಿವಪ್ರಭುವಿನ ಪುಣ್ಯವು ಇಲ್ಲಿಗೆ ನಷ್ಟವಾಗಿ ಹೋದದ್ದರಿಂದ, ಆತನ ಮಕ್ಕಳು ವ್ಯಭಿಚಾರದಂಥ ನೀಚಕಾರ್ಯಕ್ಕೆ ಮನಸ್ಸು ಮಾಡಹತ್ತಿರುವರು; ಹಾಯ್!