ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನಪುಣ್ಯ. 43 ಹಾಯ್! ಮಹಾರಾಷ್ಟ್ರದ ದುರ್ದೈವವೇ, ಇನ್ನೂ ಏನೇನು ಅನರ್ಥಗಳನ್ನು ಒಟ್ಟು ಮಾಡುವೆ? ಶಿವಪ್ರಭುವಿನ ಸಂತತಿಯ ದುರ್ದೆಸೆಯನ್ನೂ, ದುರ್ಲ್‌ಕಿಕವನ್ನೂ ಎಲ್ಲಿಯ ವರೆಗೆ ಮಾಡುವ? ಹ! ಶಿರ್ಕೆ ಕುಲಭೂಷಣಾ, ಇನ್ನು ನನ್ನ ನೀಚಬಾಳಿನ ಪರಿಸಮಾ ಸ್ತಿಯನ್ನು ಇಂದು ಮಾಡಿಬಿಡಿರಿ,” ಎಂದು ನುಡಿದು ತನ್ನ ಖಡ್ಗವನ್ನು ರಾಜ್ಯ ಮುಂದೆ ಚಾಚಿ, ತನ್ನ ಮಗುವನ್ನು ಮುಂದಕ್ಕೆ ಸರಿಸಿ, ತಾನು ತಲೆಬಾಗಿಸಿಕೊಂಡಳು, ಅದನ್ನು ನೋಡಿ, ಬರಿಯ ರಾಣೋಜಿಯ ಹೃದಯವಷ್ಟೇ ಅಲ್ಲ, ಗಣೋಜಿಯ ಹೃದ ಯವೂ ಕರಗಿ ನೀರಾಯಿತು. ಆಗ ರಾಣೇಬಿಯು ತನ್ನ ಅಣ್ಣನನ್ನು ಕುರಿತು - ಗಣೋಜಿರಾವ ಇಲ್ಲಿಗೆ ನಮ್ಮ ನೀಚತನದ ಇತಿಹಾಸವು ಮುಗಿಯಲಿ, ನಮ್ಮ ಶತ್ರು ವಾದ ಸಂಭಾಜಿಯ ಕೊಲೆಯಾದದ್ದರಿಂದ ನಮ್ಮ ಸೇಡು ತೀರಿದ ಹಾಗಾಗಿರುತ್ತದೆ. ಇನ್ನು ದೀರ್ಘದ್ವೇಷಮಾಡಿ ಶಿವಪ್ರಭುವಿನ ಸುತತಿಯನ್ನು ಛೇದಿಸುವದು ಯುಕ್ತವಾಗಿ ತೋರುವದಿಲ್ಲ. ನೋಡಿದಿರಾ ಅತ್ತಿಗೆಯ ಈ ದೈವೀ ತೇಜಸ್ಸನ್ನು! ಆಕೆಯ ನಿರ್ಮಲ ಹೃದಯವು ಅಚಲವಾದ ಧೈರ್ಯರೂಪದಿಂದ ಹಾಗೆ ಬೆಳಗುತ್ತದೆ ನೋಡಿರಿ, ನಿಮ್ಮ ಎದುರಿಗೆ ನಿಂತಿರುವ ಶುದ್ಧಾಂತಃಕರಣದ ಖಂಡೋಜಿಯ ಅಚ್ಚಳಿಯದ ಸ್ವಾಮಿನಿಷ್ಠೆ "ಯನ್ನು ಸ್ಮರಿಸಿ ನಮ್ಮ ಕಲುಷಿತ ಮನಸ್ಸುಗಳನ್ನು ಪವಿತ್ರ ಮಾಡಿಕೊಳ್ಳೋಣ! ಅತ್ತಿ ಗೆಯೇ, ನಿನಗೆ ನನ್ನ ನಮಸ್ಕಾರವು! ನನ್ನ ಅಪರಾಧಗಳನ್ನು ಕ್ಷಮಿಸಿ, ಸೀತಾಮಾತೆಯು 'ಲಕ್ಷ್ಮಣನನ್ನು ಅನುಗ್ರಹಿಸಿದಂತೆ ನೀನು ನನ್ನನ್ನು ಅನುಗ್ರಹಿಸು! ಪಿಲಾಜಿರಾವ, ಅಂಕು ರರೂಪವಾಗಿರುವ ನಿಮ್ಮ ಅಭಿವೃದ್ಧಿಯಿಂದ ನಮ್ಮ ಶಿರ್ಕೆ ಕುಲವು ಪವಿತ್ರವಾಗಲಿ! ಎಂದು ನುಡಿದು ರಾಣೋಜಿಯು 'ರಾಜಕುವರಳನ್ನು ಮಂಡಿಸಿ ಪಿಲಾಜೆಯನ್ನು ಎತ್ತಿ ಕೊಂಡನು? ಹೀಗೆ ತನ್ನ ತಮ್ಮನ ಕಠಿಣಹೃದಯವು ಕೂಡ ಕರಗಿದ್ದನ್ನು ನೋಡಿ, ಮೊದಲಿ ಗೇ ಹೃದಯವು ಕರಗಿ ನೀರಾಗಿ ಹೋಗಿದ್ದ ಗಣೋಜಿಯು ಖಂಡೋಜಿರ್ರೆಯನನ್ನು ಕುರಿತು_ ಖಂಡೋಜಿರಾವ, ನನ್ನ ಅಪರಾಧಗಳನ್ನು ಕ್ಷಮಿಸಿರಿ, ನನ್ನನ್ನು ಕ್ಷಮಿಸು ವಂತೆ ರಾಜಕುವರಳನ್ನು ನೀವು ಪ್ರಾರ್ಥಿಸಿರಿ, ಇಂದಿಗೆ ಶಿವಪ್ರಭುವಿನ ವಂಶದಮೇಲಿನ ನಮ್ಮ ಸಿಟ್ಟು ಇಳಿಯಿತು. ನೀವೂ ಸಂತಾಜಿಘೋರಪಡೆ, ಧನಾಜಿ ಜಾಧವ ಮೊದಲಾದ ಮಹಾರಾಷ್ಟ್ರ ವೀರರೂ, ಸ್ವದೇಶದ ಸ್ವಾತಂತ್ರ ತಕ್ಷಣಕ್ಕಾಗಿಯೂ, ಶಿವಪ್ರಭುವಿನ ಮಶದ ಸಂರಕ್ಷಣಕ್ಕಾಗಿಯೂ ಕಷ್ಟ ಪಡುವದನ್ನು ನೋಡಿ ಪುರುಷರೆನಿಸುವ ನಮಗೆ ಬಹಳ ನಾಚಿಕೆಬಂದಿದೆ! ಗಣೋಜಿಯು ತನ್ನ ಬಂಧುವಿನೊಡನೆ ನಿಮ್ಮ ಆಜ್ಞಾಧಾರಕ ನಾಗಿ ನಿಂತಿರುತ್ತಾನೆಂದು ತಿಳಿಯಿರಿ! ನಿಮ ಕಾಮಿಯ ಹಿತಕಾಗಿ ನಾವೇನು ಮಾಡೋ *ಣ ಹೇಳಿರಿ! ” ಎಂದು ನುಡಿಯುತ್ತಿರಲು, ಖಂಡೋಜಿಯು ಅತ್ಯಾದರದಿಂದ-ಗಣೇ ಜಿರಾವ, ಇಷ್ಟರಮಟ್ಟಿಗೆ ನಮ್ಮ ಮೇಲೆ ನಿಮ್ಮ ಅನುಗ್ರಹವಿದ್ದರೆ, ನಿಮ್ಮ ಘೋರಪ್ರತಿ