ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುರಸಗ್ರಂಥಮಾಲಾ, ಜ್ಞೆಯನ್ನು - ಶಿವಪ್ರಭುವಿನ ವಂಶವನ್ನು ನಿರ್ವಂಶವಾಗಮಾಡುವೆವೆಂಬ ದುಷ್ಟ ಪ್ರತಿಜ್ಞೆ ಯನ್ನು ಭಂಗಗೊಳಿಸಿಕೊಂಡು, ರಾಜಾರಾಮ ಪ್ರಭುವನ್ನು ಜಿಂಜೀಕೋಟೆಯಿಂದ ಮುಕ್ತಮಾಡಿ ಮಹಾರಾಷ್ಟ್ರಕ್ಕೆ ದಾಟಹಾಕಿರಿ” ಎಂದು ಪ್ರಾರ್ಥಿಸಲು, ಗಣೋಜಿಯೂ, cಣೋಜಿಯೂ ಅದಕ್ಕೆ ಒಪ್ಪಿಕೊಂಡರು! ಕೂಡಲೆ ಖಂಡೋಜಿಯ ಸಂಕೇತದಿಂದ ಜಿಂಜೀಕೋಟೆಯ ಮೇಲಿಂದ ತೊಟ್ಟಿಲುಗಳು ಇಳಿದು ಬರಹತ್ತಿದವು. ರಾಜಾರಾಮನೇ ಮೊದಲಾದ ಯಾವತ್ತು ರಾಜಪರಿವಾರವು ಶಿರ್ಕೆ ಸರದಾರನ ಡೇರೆಯ ಬಾಗಿಲ ಮುಂದೆ ಬಂದು ನಿಂತುಕೊಂಡಿತು. ಅಣ್ಣನನ್ನು ನೋಡಿ ರಾಜಕುವರಳ ಕಣ್ಣಲ್ಲಿ ಆನಂದಾಶ್ರುಗಳು ಉದುರಹತ್ತಿದವು. ಶಿರ್ಕೆ ಬಂಧುಗಳು ಆ ರಾಜಪರಿವಾರವನ್ನು ಸತ್ಕರಿಸಿ, ಎರಡುದಿನ ತಮ್ಮಲ್ಲಿ ಅವರನ್ನು ಗುಪ್ತವಾಗಿ ಇಟ್ಟು ಕೊಂಡು ಯೋಗ್ಯಸಂಧಿಯನ್ನು ಸಾಧಿಸಿ ಯಾವ ತ್ತು ಪರಿವಾರವನ್ನು ವೇಷಾಂತರದಿಂದ ಮಹಾರಾಷ್ಟ್ರಕ್ಕೆ ಮುಟ್ಟಿಸಿದರು. ಈ ಗುಪ್ತತಂ ತ್ರದ ಸುದ್ದಿಯು ಯಾವ ಮೊಗಲಸರದಾರರಿಗೂ ಹೆದೆಯಿದ್ದದ್ದರಿಂದ, ಕೆಲವು ದಿವಸ ಹಾಗೆಯೇ ಅವರು ಕೋಟೆಯನ್ನು ಬಲವಾಗಿ ಮುತ್ತಿಕೊಂಡಿದ್ದರು. ಇತ್ತ ರಾಜಾರಾ ಮನೇ ಮೊದಲಾದ ಯಾವತ್ತು ರಾಜಪರಿವಾರವು ಸುರಕ್ಷಿತವಾಗಿ ಸಾತಾರೆಯನ್ನು , ಸೇರಿತು! ಅಗ ರಾಮಚಂದ್ರಪಂತನೇ ಮೊದಲಾದ ಮಹಾರಾಷ್ಟ್ರ ವೀರರಿಗೂ, ಮುತ್ಸದ್ದಿಗೆ ಳಿಗೂ ಆದ ಆನಂದವನ್ನು ವರ್ಣಿಸಲಸಾಧ್ಯವು, ಅವರು ಬಹು ದೊಡ್ಡ ಸಮಾರಂಭ ದಿಂದ ರಾಜಾರಾಮನೇ ಮೊದಲಾದ ರಾಜಪರಿವಾರವನ್ನು ಪಟ್ಟಣದಲ್ಲಿ ಮೆರಿಸುತ್ತ ಕರ ತಂದರು. ಅಂದಿನ ದರ್ಬಾರವು ಬಹು ವಿಧದಿಂದ ಅಲಂಕರಿಸಲ್ಪಟ್ಟಿತ್ತು. ರಾಜಾರಾ ಮಮಹಾರಾಜರು ಶೃಂಗರಿಸಿದ ಅನೆಯಮೇಲಿನ ಅಂಬಾರಿಯಲ್ಲಿ ಕುಳಿತ್ತಿದ್ದು, ಸೇನಾಪ ತಿಯ ಸ್ಥಳದಲ್ಲಿ ರಾಮಚಂದ್ರಪಂತನು ಆನೆಯ ಮಸ್ತಕವನ್ನು ಆರೋಹಿಸಿದ್ದನು, ಆತನು ಕೈಯಲ್ಲಿ ಚಾಮರವನ್ನು ಹಿಡಿದಿದ್ದನು. ಮಹಾರಾಜರ ಹಿಂದೆ ಮುಖ್ಯ ಪ್ರಧಾನನಾದ ನೀಲೋಪಂತನಿಂದ ಸಹಿತವಾಗಿ ಅಷ್ಟಪ್ರಧಾನರು ಚಾಮರಗಳನ್ನು ಹಿಡಕೊಂಡು ಕುಳಿತಿ ದ್ದರು. ಮಹಾರಾಜರ ಹಿಂಬದಿಯಲ್ಲಿ ರಾಜಪುರೋಹಿತರು ಅನೆಯನ್ನೇರಿ ಸಾಗಿಬರುತ್ತ ಲಿದ್ದರು. ಅಗ್ರಭಾಗದಲ್ಲಿ ಆನೆಯಮೇಲೆ ಶ್ರೀಸಮರ್ಥ ರಾಮದಾಸಸ್ವಾಮಿಗಳ ಕೋವಿಯ ನಿಶಾನೆಯೂ, ಜರಿಪಟಕಾ ನಿಶಾನೆಯ ಗಾಂಭೀರ್ಯದಿಂದ ಮರಾಟರ ಅಭಿಮಾನದ್ಯೋತಕವಾಗಿ ಒಪ್ಪುತ್ತಿದ್ದವು. ಅದರ ಸುತ್ತುಮುತ್ತು ಅಶ್ವಾರೂಢರಾದ ಮಹಾ ಮಹಾವೀರರು ಪ್ರತಾಪಯುತರಾಗಿ ನಾಗಿ ಬರುತ್ತಲಿದ್ದರು. ಅವರಲ್ಲಿ ಶಂಕ ರಾಜಿ ನಾರಾಯಣ, ಪರಶುರಾಮಪಂತ ಪ್ರತಿನಿಧಿ, ಕಾನೋಜಿ ಅಂದ್ರೆ, ಆಟೋಳೆ ಬಡೆ, ಭಾಂಡವಲಕರ, ಪವಾತ, ಪಾಟಣಕರ ಮುಂತಾದ ಸರದಾರರು ಮುಖ್ಯವಾಗಿ ದರು ಸಂತಾಜೆ ಘೋರಪಡೆಯಂಥ ವೀರಾಗ್ರಣಿಯು ಇಲ್ಲದ್ದರಿಂದ ಸಮಾರಂಭಕ್ಕೆ