ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಳzinಘ -'$2, ಬೈರಾಗಿ -ಏನಂತಿ? ಸಂಭಾಜಿಗುಣ.21 ದರ್ಗಾರದೊಳಗಿಂದ ಬಂಧಯಾ? ಬಾ, ಒಳಗೆ ಬಾ, ನಾನೇ ಆ ಠಾಕುವನು, ನಿನ್ನ ಆಯುಷ್ಯದೊಳಗಿನ ಆಗು-ಹೋಗು ಗಳನ್ನೆಲ್ಲ ನಿನಗೆ ಬಿಚ್ಚಿ ಹೇಳುತ್ತೇನೆ ಬಾ, ಈ ಸಂಭಾಜಿಯ ದರ್ಬಾರದೊಳಗಿಂದ” ಎಂಬ ಶಬ್ದವನ್ನು ಕೇಳಿದ ಕೂಡಲೆ ಕಾಕರನಿಗೂ, ಅಲ್ಲಿದ್ದ ಅವನ ಅನುಯಾಯಿಗಳಿಗೂ ಆಶ್ಚರ್ಯವಾಯಿತು. ಅವರು ರಾಜಕುವರಳನ್ನು ಕರಕೊಂಡು ಗುಹೆಯೊಳಗೆ ಹೋದರು. ಠಾಕುರನು ತನ್ನ ಅನು ಯಾಯಿಗಳ ಕೈಯಿಂದ ಆ ಪರುಷ ವೇಷಧಾರಿಯಾದ ರಾಜಕುವರತಿಗೆ ತೀರ್ಥ-ಪ್ರಸಾದ ವನ್ನು ಕೊಡಿಸಿದನು. ಅವನು ಮತ್ತೆ ಆಕೆಯನ್ನು ಕುರಿತು ಠಾಕೂರ-ನೀನು ಸಂಭಾಜಿ ಮಹಾರಾಜರ ದರ್ಬಾರದಿಂದ ಬಂದೆಯಾ ? ಮಹಾ ರಾಜರು ಈಗ ಎಲ್ಲಿ ಇರುವರೆಂಬದು ನಿನಗೆ ಗೊತ್ತಿದೆಯೇ ? ರಾಜಕುವರ-ಗೊತ್ತಿರದೇನು ಮಾಡಿತು ? ಮಹಾರಾಜರ ವಿಷಯವಾಗಿ ಪ್ರಶ್ನೆ ಕೇಳುವದಕ್ಕಾಗಿಯೇ ನಾನು ಬಂದೇನೆ . ಮರುರಾಜರು ವಕಸಂಕಟಕ್ಕೆ ಗುರಿ ಯಾಗಿರುತ್ತಾರೆ. ತನು ಂಥ ತ್ರಿಕಾಲ ಜ್ಞಾನಿಗಳು ಅವರ ಸಂಕಟ ನಿವಾರಣ ಮಾಡೀ ರೆಂದು ತಿಳಿದು ನಾನು ಬಂದಿರುತ್ತೇನೆ . ಠಾಕುರ ಬಂದದ್ದು ಬಹಳ ನೆಟ್ಟಗಾಯಿತು , ಈಗ ನಾನು ನನ್ನ ದೇವತೆಯನ್ನು ಕರೆದು ಮಹಾರಾಜರ ಅರಿವನ್ನೆಲ್ಲ ಓಡಿಸುತ್ತೇನೆ ; ಆದರೆ ಮಹಾರಾಜರು ಇದೇ ಊರ ಹತ್ತರ ಎಲ್ಲಿಯಾದರೂ ಸವಿಾಪದಲ್ಲಿ ಇರುವರಲ್ಲವೆ ? ಏನು ಮಾಡಲಿ! ಮಹಾರಾಜರ ದುಷ್ಟ ಗ್ರಹಗಳು ನನ್ನನ್ನು ಅವರ ಬಳಿಗೆ ಹೊ ಸ ಗ ೧ ಡ ಲೋಲ್ಲ ವು. ಅವರನ್ನು ನನಗೆ ಮರೆಮಾಡಿ ಬಿಟ್ಟವೆ. ಪಾಪ! ಪುಣಶಾಲಿಯಾದ ಶಿವಛತ್ರಪತಿಯ ಆ'ಭಾಗ್ಯಶಾಲಿ ಪ್ರತ್ರನಿಗೆ ಎಂಥ ಭಯಂಕರ ಸ್ಥಿತಿಯು ಒದಗಿರುವದಲ್ಲ! ವಿಧಿಲಕ್ಷ್ಮಿಯು ಭಯಂಕರ ಅಪಘಾತವನ್ನು ಆತನ ಹಣೆಯಲ್ಲಿ ಬರೆದಿರುವಳು, ಅಕ್ಷರಗಳು ಸ್ಪಷ್ಟ , ವಾಗಿ ನನಗೆ ಕಾಣುತ್ತವೆ ; ಆದರೆ ಸಂಭಾಜಿಯು ಯಾವ ಚತುಸ್ಸಿವೆಯಲ್ಲಿರಬಹು ದಪ್ಪಾ ! ಆತನ ದುಷ್ಟ ಗ್ರಹಗಳು ಕಗ್ಗತ್ತಲೆಯನ್ನುಂಟು ಮಾಡಿ ನನಗೆ ಏನೂ ಕಾಣ ಗೊಡಲೊಲ್ಲವು | ತಮಾ , ನಿನಗೆ ಸಂಭಾಜಿ ಮಹಾರಾಜರು ಇರುವ ಸ್ಥಳವು ಗೊತ್ತಿ ದರೆ ಈಗ ಹೇಳಬಾರದೆ ? ರಾಜಕುವರಮಹಾರಾಜ , ನನಗೆ ಗೊತ್ತಿರದನು ಮಾಡೀತು ? ಮಹಾ ರಾಜರ ಸಂರಕ್ಷಣಕ್ಕಾಗಿ ನಾವು ಮರಾಟರು ವಿಶ್ವಪ್ರಯತ್ನ ಮಾಡುತ್ತಿರುವೆವು. ನಮದುಘ್ನ ವೈರಿಯಾದ ಔರಂಗಜೇಬನು ಮಹಾರಾಜರನ್ನು ಹಿಡಿಯುವದಕ್ಕಾಗಿ