ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪ ಸುರಸ ಗ್ರಂಥಮಾಲಾ, M ರಾಜಕುವರಳು ಇದರಲ್ಲಿ ಏಸೂಬಾಯಿಯನ್ನು ಬಂದು ಕೂಡಿ ಸಂಗಮೇಶ್ವರದ ಸುದ್ದಿಯನ್ನು ಹೇಳಿದ್ದಳು , ಇತ್ಯ ಸಂಡೂಬಾಯಿಯು ಕುಳಿತುಕೊಂಡಿದ್ದ ಮೇಣೆಯು “ಭರೋತ” ಎಂಬ ಊರ ಬಳಿಗೆ ಬಂದಿತು . ಕೂಡಲೆ ಮೊಗಲರ ಸೈನಿಕರು ಅದನ್ನು ಮುತ್ತಿ ಸ್ವಾಧೀನ ಪಡಿಸಿಕೊಂಡರು . ಆಗ ಗಣೋಜಿರಾಯನು ಬೇರೆ ಸರದಾರರನ್ನು ಕುರಿತು-ಮೇಣೆಯನ್ನು ಚನ್ನಾಗಿ ಸಂರಕ್ಷಿಸಿರಿ , ಒಳಗಿನವರಿಬ್ಬರೂ ಈ ಗಣೋಜಿ ಶಿರ್ಕೆಯ ಆಪ್ತರಿರುತ್ತಾರೆ, ಎಂದು ಹೇಳಿದನು - ಮೇಣೆಯು ಮುಂದಕ್ಕೆ ಸಾಗಿ ಅವರು ಒಂದು ಮುಕ್ಕಾಮಿಗೆ ಬಂದು ಅಲ್ಲಿ ಇಳಿದುಕೊಂಡರು , ಆಗ ಗಣೋಜಿಯು ಮೇಣೆಯ ಬಳಿಗೆ ಬಂದು ಪ್ರಿಯೆ , ರಾಜಕುವರಿ, ನಡೆ, ಹೊರಗೆ ಬಾ, ತಂಗಿ, ಏಸೂ, ನಾಚಬೇಡ. ನಾನು ನಿನ್ನಣ್ಣನು! ನಾನು ನಿನ್ನನ್ನು ಆ ಭೋಸಲೆಯ ಅನ್ನ ದಿಂದ ಮುಕ್ತಳಾಗ ಮಾಡುವನು, ನಿನ್ನ ತವರಮನೆಯ ಅಭಿಮಾನ ಬಿಡಬೇಡ, ಎಂದು ನುಡಿದು, ತಾನು ಸ್ವತಃ ಮೇಣೆಯ ಬುರುಕೆಯನ್ನು ತೆಗೆದು ನೋಡುತ್ತಾನೆ, ಅಲ್ಲಿಯೇನಿದೆ ? ಎರಡು ಹೆಣಗಳು ಬಿದ್ದಿದ್ದು , ಪುಣೆಯೆಲ್ಲ ರಕ್ತ ಮುಣುಗಿ ಹೋಗಿತ್ತು, ಸಂತೂಬಾಯಿಯೂ , ಇನ್ನೊಬ್ಬ ದಾಸಿಯ ಕಠಾರಿಯಿಂದ ಇರಿದುಕೊಂಡು ಪ್ರಾಣ ಕೊಟ್ಟಿದ್ದರು. ಅದನ್ನು ನೋಡಿ ಗಣೋಜಿಯು ಹಿಂದಕ್ಕೆ ಸರಿದನು , ಹೆಣಗಳ ಮೋರೆಯ ಮೇಲಿನ ಬುರುಕೆಯನ್ನು ತೆಗೆದು ಆತನ ನೋಡಲಿಲ್ಲ , ಏಸೂಬಾಯಿಯೂ ರಾಜಕುವರಳೂ ಆತ ಘಾತ ಮಾಡಿಕೊಂಡರೆಂದು ಆತನು ನಂಬಿದನು , ಇದೇ ಸುದ್ದಿ ಯು ಎಲ್ಲ ಕಡೆಗೆ ಹಬ್ಬಿತು ! ಖಂಡೋಜಿಯು ಈ ಸುದ್ದಿಯನ್ನು ಕೇಳಿ ವಿಷಾದ ಪಟ್ಟು , ತನ್ನ ಒಡೆಯಳಾದ ಎಸೂಪಾಯಿಯನ್ನು ಹೋಗಿ ಕೂಡಿದನು . ಬಳಿಕ ಖಂಡೋಜಿಯ ಜೋತಾಜಿಯೂ ಏಸೂಬಾಯಿಯನೂ, ರಾಜಕುವ ರಳ ರಾಯಗಡದ ಹಾದಿಗೆ ಹಚ್ಚಿ , ಅದೇ ಕಾಲಿಲಿ ಸಂಗಮೇಶ್ವರದ ಕಡೆಗೆ ಹಿಂದಿರುಗಿದರು . ಯಾಕಂದರೆ, ಸಂಭಾಜಿಯನ್ನು ಹಿಡಿಯುವದಕ್ಕಾಗಿ ಮುಕರ್ಬ ಖಾನನು ತನ್ನ ಸೈನ್ಯದಲ್ಲಿ ಎರಡು ಭಾಗಗಳನ್ನು ಮಾಡಿ ಒತ್ತರದಿಂದ ಸಾಗಿ ಬರುತ್ತಿ ರುವನೆಂಬ ಸುದ್ದಿಯು ಅವರಿಗೆ ಹತ್ತಿತ್ತು; ಆದ್ದರಿಂದ ಅವರು ನಡುವೆ ಎಲ್ಲಿಯೂ ನಿಲ್ಲದೆ ಬೆಲ್ಲ ತಿಂದು ನೀರು ಕುಡಿದು ಸ೦ ಗ ಮೇ ಶ ರ ಕೆ ಬಂದು ಮುಟ್ಟಿದರು. ಈ ಕಾಲದಲ್ಲಿ ಪ್ರೌಢ ಪ್ರತಾ ಪಿ ಯಾ ದ ಔ ರ೦ಗ ಜೇ ಬ ನು ದಕ್ಷಿಣ ಹಿಂದು ಸ್ಥಾನವನ್ನು ಗೆಲ್ಲುವದಕ್ಕಾಗಿ ತನ್ನ ಪ್ರಚಂಡ ಸೈನ್ಯದ ಜಾಲವನ್ನು ನಾಲ್ಕೂ ಕಡೆಗೆ ಒಡಿದ್ದನು . ಆತನ ಬಲೆಯನ್ನು ದಾಟಿ ಒಂದು ನರಪ್ರಾಣಿಯ ಪಾರಾಗಿ ಹೋಗುವ ಹಾ ಗಿದ್ದಿಲ್ಲ.ಧೆಂ ದು ಹೇಳಬಹುದು. ಒಂದು ತುದಿಯಲ್ಲಿ ಕಾಬೂಲ ಕಂದ