ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನಪುಣ - ರ್೪ ಪ್ರಸಂಗದಿಂದಲೇ ಮಹಾರಾಷ್ಟ್ರದ ಭವಿಷ್ಯ ಕಾಲದ ನಿರ್ಣಯವಾಗತಕ್ಕದ್ದದೆ, ಮಹಾ ರಾಜ, ಹೋಗಿಬರುತ್ತೇನೆ, ಎಂದು ನುಡಿದು, ತನ್ನ ಪ್ರಭುವಿಗೆ ಸಾಷ್ಟಾಂಗವಾಗಿ ವಂದಿಸುವಾಗ, ಆ ಸ್ವಾಮಿಭಕ್ತನ ಕಣ್ಣು ತುಂಬ ನೀರುಗಳು ಬಂದು, ಆತನ ಕಂಠ ಬಿಗಿದು ಮಾತುಗಳು ಹೊರಡದಾದವು. ಕರುಗಳುದುರುತ್ತಿರಲು, ಆತನು ತನ್ನ ಪ್ರಭುವನ್ನು ಬಾರಿಬಾರಿಗೆ ನೋಡುತ್ತ ಹೋಗಲಾರದೆ ಹೊರಟು ಹೋದನು. ಇತ್ತ ಸಂಭಾಜಿಯು ಮತ್ತೆ ಹತಬುದ್ಧನಾಗಿ ಕುಳಿತುಕೊಂಡನು . ೬ ನೆಯ ಪ್ರಕರಣ-ಪುನರುತ್ಥಾಪನ. + ಜೋತಾಜಿಯು ಹೋದಬಳಿಕ ಸ್ವಲ್ಪ ಹೊತ್ತಿನಲ್ಲಿಯೇ ಒಬ್ಬ ಮುಸಲ್ಮಾನ ಸರ ದಾರನು ಸಂಭಾಜಿಯ ಬಳಿಗೆ ಬಂದು ಸಂಭಾಜಿಯ ಅನುಯಾಯಿಗಳಲ್ಲಿ ಒಬ್ಬೊಬ್ಬ ರನ್ನೇ ಅವರ ಮೈ ಮೇಲಿನ ಅರಿವ-ಅಂಚಡಿಗಳನ್ನು ತೆಗೆದು ಬರಿ ಮೈ ಬಕ್ಕ ನೆತ್ತಿಯ ವರನ್ನಾಗಿ ಮಾಡಿದನು , ಅದನ್ನೆಲ್ಲ ಸಂಭಾಜಿಯು ಸಂತಾಪದಿಂದ ಕಂಪಡರಿದ ಕಣ್ಣುಗಳಿಂದ ನೋಡುತ್ತಲಿದ್ದನು ; ಆದರೆ ಆತನು ಅತ್ತಿತ್ತ ಮಿಸಿಕಾಡುವ ಹಾಗಿ ಡ್ಡಿಲ್ಲಹಾಗು ಒಂದು ಮಾತಾಡುವ ಹಾಗಿದ್ದಿಲ್ಲ. ಹಾಗೆ ಮಾಡಿದ್ದರೆ ಕಾವಲು ಗಾರರ ತೀಕ ಖಡ್ಗಳ ಇರಿತಕ್ಕೆ ಆತನು ಈಡಾಗಬೇಕಾಗುತ್ತಿತ್ತು ; ಆದ್ದರಿಂದ ಸಂಭಾಜಿಯು ತನ್ನ ಜನರ ಏಟಂಬನೆಯನ್ನು ನೋಡುತ್ತ ಸುಮ್ಮನೆ ನಿಂತುಕೊಂಡಿ ದ್ದನು , ತನ್ನವರೆಲ್ಲ ಬರಿಮೈಯವರಾಗಲು ಸಂಭಾಜಿಯು ತಾನೂ ತನ್ನ ವಸ್ತ್ರಾ ಲಂಕಾರಗಳನ್ನೆಲ್ಲ ತನ್ನ ಕೈ ಮುಟ್ಟಿ ಸಮಾಧಾನದಿಂದ ತೆಗೆದಿಟ್ಟು, ಬರಿಮೈಯವ ನಾದನು , ಆ ಮೇಲೆ ಆ ಸರದಾರನು ಸಂಭಾಜಿಗೆ ಒಂದು ಚಿತ್ರವಿಚಿತ್ರವಾದ ಪೋಷಾ ಕನ್ನು ಧರಿಸುವದಕಾಗಿ ಕೊಟ್ಟನು. ಬಳಿಕ ಆತನ ತಲೆಯ ಮೇಲೆ ಕಟ್ಟಿಗೆಯ ದೊಂದು ಕಿರೀಟವನ್ನು ಹಾಕಿ, ಕೊರಳಲ್ಲಿ ವಿಚಿತ್ರ ಬಣ್ಣದ ಪುಷ್ಪಗಳ ಮಾಲೆ ಯನ್ನು ಹಾಕಿದನು , ಈ ವಿಧವಾಗಿ ಮಹಾರಾಷ್ಟ್ರ ರಾಜನನ್ನು ಅವಮಾನ ಗೊಳಿಸಿದ್ದು ಸಾಲದ್ದರಿಂದ, ಆ ಸರದಾರನು ಸಂಭಾಜಿಯನ್ನು ಒಂದೆಯ ಮೇಲೆ ಹಿಂಬ ರಿಕೆಯಾಗಿ ಕುಳ್ಳಿರಿಸಿ, ನಾಲೂ ಮಗ್ಗಲು ಆತನನ್ನು ಕಾಡನೆಯ ಹಗ್ಗಗಳಿಂದ ಬಿಗಿದು ಕಟ್ಟಿದನು , ಮುಂಬದಿಯಲ್ಲಿ ತಾಸಮರ್ಥ, ತುತ್ತೂರಿ, ಕರ್ಣಿ, ಕೊಂಬು, ಮೊದಲಾದ ಕರ್ಕಶ ವಾದ್ಯಗಳು ಬಾರಿಸುತ್ತಿರಲು , ಪರಿವಾರದೊಡನೆ ಸಂಭಾಜಿಯು ಮೆರವಣಿಗೆಯಲು ಹೊರಟಿತು!