ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುರಸಗ್ರಂಥಮಾಲಾ, ಭಾಜೇ, ಮುಸಲಮಾನನಾಗು ! ಹಾಗೂ ನೀನು ಅತ್ಯಂತ ವಿಷಯಾಸಕ್ತನು, ಬಾದ ಶಹನ ಕೃಪೆಯಿಂದ ಬದುಕಿ ಇನ್ನಿಷ್ಟು ವಿಷಯಗಳನ್ನು ಭೋಗಿಸಬಾರದೇ? ಬಾದಶಹನು ಬಹುಚಲುವೆಯಾದ ತನ್ನ ಮಗಳನ್ನು ನಿನಗೆ ನಿಕಾವಾಡಿಕೆಖಟ್ಟರೆ, ನೀನು ವಿಲಾಸಭೆ ಗಕ್ಕಾಗಿ ಮುಸಲಮಾನನುಯಾಕಾಗಬಾರದು ? ಒಂದು ಆಕಳ ಜೀವವನ್ನು ಬದುಕಿ ಸುವದಕ್ಕಾಗಿ ನಮ್ಮ ಹಿರಿಯರು ತಮ್ಮ ಜೀವವನ್ನು ಗಂಡಾಂತರಕ್ಕೆ ಗುರಿಮಾ ಡಿಕೊಂಡರು; ಆದರೆ ಅವರ ಜೇಷ್ಠ ಪುತ್ರನೆನಿಸುವ ನಾನು ಗೋವಧೆಗೆ ಮಕ್ಯದ್ವಾರ ವಿರುವ ಮಸಲ್ಮಾನಧರ್ಮವನ್ನು ಯಾಕೆ ಸ್ವೀಕರಿಸಬಾರದು? ಹೇಳು, ಬಾದಶಹನೇ, ಶಹಾಜಾದಿಯನ್ನು ನನಗೆ ಲಗ್ನ ಮಾಡಿಕೊಡುವಿರಾ? ಕೊಟ್ಟರೆ ನಾನು ಮುಸ ಲ್ಮಾನನಾಗುವೆನು, ನೋಡು! ಆದರೆ ಬಾದಶಹಾ, ನಾನು ಮುಸಲ್ಮಾನನಾಗಲಿಯಾ? ಶಾವಲರು ಬಲಾತ್ಕಾರದಿಂದ ಗಂಗಾಧರ ರಂಗನಾಥ ಕುಲಕರ್ಣಿ ಈತನನ್ನು ಮಸಲ್ಲಾ ನನ್ನಾಗಿಮಾಡಿ, ಆತನಿಗೆ ಬಹುದೊಡ್ಡ ಸ್ವಾಸ್ಥ್ಯವನ್ನು ಇನಾಮಾಗಿ ಹಾಕಿಕೊಟ್ಟು ತಮ್ಮ ಚಾಕರನನ್ನಾಗಿ ಮಾಡಿಕೊಂಡರು ; ಆ ದ ಆ ಧರ್ಮಾತ್ಮನಾದ ಆ ಕುಲಕರ್ಣಿಯು ತನ್ನ ಲಾಭಕ್ಕೆ ಆಶೆಮಾಡದೆ , ತನ್ನ ಭಾಗ್ಯವನ್ನು ಕಾಲಿನಿ ದೊದೆದು , ಪಶ್ಚಾತ್ತಾಪದಿಂದ ರಾಯಗಡಕ್ಕೆ ಬಂದು ನನ್ನನ್ನು ಮೊರೆಹೊಕ್ಕನು, ಆಗ ಆತನ ರಾಜನೆನಿಸುವ ನಾನು ಆತನನ್ನು ಶುದ್ಧ ಮಾಡಿಸಿದೆನು! ಹೀಗೆ ದ್ದ. ನಾನೇ ಈಗ ಮುಸಲ್ಮಾನನಾಗಲಾ! ಎಲ ಎಲಾ! ಧರ್ಮ ಪ್ರೇಮಕ್ಕಿಂತ ಆತ್ಮ ಪೇಮವು ಹೆಚ್ಚಿ ನದೇನು? ಆಬಾಸಾಹೇಬರ ಸಲುವಾಗಿ ಏಕ ನಿಷ್ಠೆಯಿಂದ ಆತ್ಮಾರ್ಪಣವನ್ನು ಮಾ ಡಿದ ಬಾಜದೇಶಪಾಂಡೆ, ತಾನಾಜಿ ಮಾಲಸುರ ಮೊದಲಾದವರೆಲ್ಲ ಮೂರ್ಖರೇನು? ಆದರೂ ಚಿಂತೆಯಿಲ್ಲ, ಬಾದಶಹನೇ, ಮತಾಡು, ನಿನ್ನ ಮಗಳನ್ನು ಕೊಡುವೆಯಾ? ಕೃತಾರ್ಥನಾಗುವೆಯಾ? ಹಾಗಾದರೆ ಮೂತ್ರ ನಾನು ಮುಸಲ್ಮಾನನಾಗುತ್ತೇನೆ, ನೋಡು! ಸಂಭಾಜಿಯ ಈ ಮೂತುಗಳಿಂವ ಅವಮಾನಿತನಾದ ಬಾದಶಹನು ಸಂತಾಪ ದಿಂದ ನಖಶಿಖಾಂತವಾಗಿ ಉರಿಯಹತ್ತಿದನು. ಕ್ರೋಧಾವೇಶದಲ್ಲಿ ಅವನ ವಿವೇಕವು ನಷ್ಟವಾಯಿತು. ಆತನು ಸಂಭಾಜಿಯನ್ನು ಕುರಿತು-ಎಲಾ ಅಧಮ್ರ ಕಾಫರನಾದ ನೀನು ನನ್ನ ಮಗಳನ್ನು ಕೇಳುವೆಯಾ? ಮುಕರ್ಬಖಾನ, ಏನು ನೋಡು ಶ್ರೀp? ಈ ನೀಚನ ಕೆಟ್ಟ ನಾಲಿಗೆಯನ್ನು ಚೂರು ಚೂರು ಆಗುವಹಾಗೆ ಕೂಯ್ದಿರಿ ತನ್ನನ್ನು ಕೆಟ್ಟ ಕಣ್ಣಿನಿಂದ ನೋಡುವ ಈ ಉದ್ಧಟನ ಕಣ್ಣುಗಳಲ್ಲಿ ಕಾದಶಲಾಖೆಗೆ ಳನ್ನು ಇರಿಯಿರಿ! ಸಾವಿರಾರು ಜನರು ಮೋಜಿನಿಂದ ನೋಡುತ್ತಿರಲು, ಇವನ ಮೈದೊಗಲನ್ನು ಸುಲಿಯಿರಿ! ನಡೆಯಿರಿ! ಏಳಿರಿ!! ಹಿಡಿಯಿರಿ ಹಾದಿಯನ್ನು! ಅನ್ನಲು