ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ML ಸುರಸ ಗ್ರಂಥಮಾಲಾ, ಇಸುಕೊಳ್ಳುವಂತೆ ಆ ಇಬ್ಬರು ಮೋಜುಗಾರರಕೈಯಿಂದ ಅದನ್ನುಳಿಸಿಕೊಂಡು ತಮ್ಮ ಕುದುರೆಗಳನ್ನು ಓಡಿಸಹತ್ತಿದರು. ಅವರನ್ನು -ಆಇಬ್ಬರು ಮೋಜುಗಾರರು 'ಕನ್ನಟ್ಟಏ, ಆ ರುಂಡವನ್ನು ಇತ, ಕಡೆಗೆ ತಕೊಂಡು ಬರಿ. ಇಲ್ಲಿ ಮೋಜು ಮಾಡೋಣ ಎಂದುಕೂಗುತ್ತ, ಆ ಸವಾರರ ಬೆನ್ನು ಹತ್ತಿ ಓಡಹತ್ತಿದರು. ಉಳಿದ ದಂಡಾಳುಗಳಿಗೆ ಇದೊಂದು ವಿನೋದವಾಗಿ ತೋರಿತು. ಮುಂದೆ ಆ ಇಬ್ಬರು ಮೋಜುಗಾರರು ಕಲವು ದೂರ ಓಡಿ ಹೋದ ಬಳಿಕ ತಮ್ಮ ಸಲುವಾಗಿ ನಿಲ್ಲಿಸಿದ್ದ ಕುದುರೆಗಳನ್ನು ಹತ್ತಿಕೊಂಡು, ರುಂಡವನು ತಕ್ಕೊಂಡು ಓಡಿ ಹೋಗುತ್ತಿರುವ ರಾವುತರ ಬೆನ್ನುಹತ್ತಿ, ಓಡ ಹತ್ತಿದರು. ಇತ್ತ ಔರಂಗಜೇಬನ ದಂಡಾಳುಗಳು-(ರುಂಡ ವನ್ನು ಈಗ ತಂದಾರು, ಇನ್ನೊಂದು ಗಳಿಗೆಗೆ ತಂದರು.” ಎಂದು ಹಾದಿಯ ನೋಡ್ ೩ರಲು ರುಂಡವು ರಾಯಗಡದ ಹಾದಿಯನ್ನು ಹಿಡಿದು ವೇಗದಿಂದ ಸಾಗಿತು. ಸ್ವಾಮಿಭಕ್ತರಾದ ಖಂಡೋಜಿ ಜೋತಾಜಿ, ಇವರಿಬ್ಬರು ತಮ್ಮ ಸ್ವಾಮಿಯ ಕೊಲೆಯನ್ನು ನೋಡಿ ಪರಮದುಃಖಿತರಾದಾಗ್ಯೂ ಹೇಡಿಗಳಂತೆ ಕೈ ಕಾಲು ಗೆಡಲಿಲ್ಲ ಜನ್ಮವಿರುವತನಕ ಔರಂಗಜೇಬನ ಸೇಡು ತೀರಿಸಿಕೊಳ್ಳುವದನ್ನು ನಿಶ್ಚಯಿಸಿ, ತಮ್ಮ ಒಡೆಯನ ರುಂಡವನ್ನು ಹ್ಯಾಗಾದರೂ ಮೂಡಿ ಸಂಪಾದಿಸಿ ರಾಯಗಡಕ್ಕೆ ಒಯು ಬೇಕೆಂದು ಎಣಿಕ ಹಾಕ ಹತ್ತಿದರು. ಆಗ ಅವರಿಬ್ಬರು ಮೇಲೆ ಹೇಳಿದಂತೆ ಮುಸಲ್ಮಾನರ ಸೋಗಿನಿಂದ ಮೋಜುಗಾರರಾಗಿ ಔರಂಗಜೇಬನ ದಂಡಿನಲ್ಲಿ ಸೇರಿ ಯುಕ್ತಿಯಿಂದ ರುಂಡವನ್ನು ಸಂಪಾದಿಸಿದರು. ಮೊದಲೇ ಆಲೋಚಿಸಿದಂತೆ ಬೇರೆ ನಾಲ್ವರು ಮಹಾರಾಷ್ಟ್ರ ರಾವುತರು ಖಂಡೋಜಿ ಜೋತಾಜಿಯ ಸಲುವಾಗಿ ಸಂಕೇ ತದ ಸ್ಥಳದಲ್ಲಿ ಎರಡು ಕುದುರೆಗಳನ್ನು ನಿಲ್ಲಿಸಿ ತಾವೂ ಮೋಜು ಮೂಡುವವರಂತ ರುಂಡವನ್ನು ಸಂಪಾದಿಸಿ ಕುದುರೆಯನ್ನು ಬಿಟ್ಟರು. ಮುಂದೆ ಆರು ಜನರೂ ಕೂಡಿ ಮುಕಾಮಿನ ಮೇಲೆ ಮುಕಾಮು ಮೂಡುತ್ತ, ರಾಯಗಡದ ಸಮೀಪಕ್ಕೆ ಬಂದರು. ಆಗ ಖಂಡೋಬೆಯ ಜೋತಾಜೆಯ ತಿರಸ್ಕಾರದಿಂದ ತಮ್ಮ ಗಡ್ಡ ಗಳನ್ನು ಕಿತ್ತಿ ಒಗೆದು, ತಮ್ಮ ಸ್ವಾಮಿಯ ರುಂಡವನ್ನು ರೇಸಿಮೆಯ ವಸ್ತ್ರದಲ್ಲಿ ಸುತ್ತಿ ಕೊಂಡು ಕಂಣೀರು ಸುರಿಸುತ್ತ ರಾಯಗಡವನ್ನು ಏರಹತ್ತಿದರು. ಇತ, ರಾಯಗಡದಲ್ಲಿ ಸಂಭಾಜಿಯ ಸಂಬಂಧದಿಂದ ಎಲ್ಲರೂ ಚಿಂತಾಕ್ರಪ್ಪ ರಾಗಿದ್ದರು: ಬಾದಶಹನು ಸಂಭಾಜಿಯನ್ನು ಕೊಲ್ಲಿಸಿದ ದಿವಸ ರಾಯಗಡದ ಹಲವು ದುರ್ಲಕ್ಷಣಗಳೂ ಉತ್ಪಾತಗಳೂ ತೋರಿದ್ದರಿಂದಂತೂ ಅವರ ಚಿಂತೆಯು ಮತ್ತಷ್ಟು ಹೆಚ್ಚಿತು. ಸಂಭಾಜಿಯು ರಾಜಾರಾಮನನ್ನು ರಾಯಗಡದಲ್ಲಿ ಸೆರೆಯಲ್ಲಿ