ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುರಕಗ್ರಂಥಮಾಲಾ, wwwwwwwwwwwwwwwwwwwwwwwwwwwwwwwwwwwwwwwwww ದುರ್ಮರಣದಿಂದ ಬಹಳ ವ್ಯಥೆಯಾಯಿತು. ಯಾರು ಸಮಾಧಾನ ಹೇಳಿದರೂ ತನಿಗೆ ಸಮಾಧಾನವಾಗಲೊಲ್ಲದು! ಹೀಗಿರುವಾಗ ಪ್ರಹ್ಲಾದಪಂತನು ಮಹಾರಾಜರ ಬಳಿಗೆ ಬಂದನು, ಆಗ 3 ಸೂಬಾಯಿಯ, ರಾಜಾರಾಮನೂ, 'ಬೇರೆ ಪರಿವಾರವೂ ಶೋಕಗ್ರಸ್ತವಾಯಿತು. ತನ್ನ ಸ್ವಾಮಿಯ ಪರಿವಾರಕ್ಕೆ ಒದಗಿದ ವಿಪತ್ತಿನಿಂದ ಉಂಟಾಗಿರುವ ದುಃಖವನ್ನು ಪ್ರಹ್ಲಾದಪಂತನು ಇಲ್ಲಿಯವರೆಗೆ ನುಂಗಿಕೊಂಡಿದ್ದನೆ:; ಆದರೆ ಈಗ ಒಟ್ಟುಗೂ ಶಿದ್ದ ರಾಜಪರಿವಾರವೆಲ್ಲ ದುಃಖಪೀಡಿತ ವಾದದ್ದನ್ನು, ವಿಶೇಷವಾಗಿ, ಬಾಲಶಿವಾಜಿಯು ಗಾಬರಿಯಾಗಿ ಏನೂ ತಿಳಿಯದೆ, ಅಳುವವರನ್ನು ನೋಡಿ ಅಳುವದನ್ನು ಕಂಡು ಪ್ರ ಹ್ಲಾದಪಂಕ: ಅಂತಃಕರಣವು ಕರಗಿ ದುಃಖವು ಹೊರಬಿದ್ದಿತು. ಎಲ್ಲರ ಸಂಗಡ ಆತನ ಕೆಲಹೆ : ಅತ್ತು ಶೋಕಗ್ರಸ್ತನಾದನು; ಆದರೆ ಆತನು ಬೇಗನೆ ವಿವೇಕ ದಿಂದ ಶೋಕವನ್ನು ನುಂಗಿಕೊಂಡು ರಾಜಪರಿವಾರವನ್ನು ಕುರಿತು ಗದ್ಗದಿತ ಕಂಠದಿಂದ ಮಹಾರಾಜ, ಮಾತೋಶ್ರೀ, ರಾಜಕುವರಸಾಹೇಬ, ಏನಿದು? ಹೀಗೆ ಅಳುತ್ತ ಕುಳಿತು ಕೊಳ್ಳುವ ಹೊತ್ತೇ ಇದು? ದುಷ್ಕಅಲಮುಗೀರನು ನಮಗೆ ಯಥೇಚ್ಛವಾಗಿ ಅತ್ತು ಸಮಾ ಧಾನ ಮಾಡಿಕೊಳ್ಳಲಿಕ್ಕೆ ಮಾರ್ಗ ಎಲ್ಲದಹಾಗೆ ಮಾಡಿರುತ್ತಾನೆ. ಶಿವಪ್ರಭುವಿನ ಪರಿ ವಾರದ ಸಂಬಂಧವು ಮಹಾರಾಷ್ಟ್ರದ ರಾಜ್ಯಕ್ಕೆ ಇರುತ್ತದೆಂಬದನ್ನು ನಾವು ಮರೆಯು ತಕ್ಕದ್ದಲ್ಲ. ನಾವೇ ಶೋಕಗ್ರಸ್ತರಾಗಿ ಕಂಣೀರು ಸುರಿಸುತ್ತ ಕುಳಿತುಕೊಂಡ ಬಿಟ್ಟರೆ, ನವಿಂದ ಸಹಿತವಾದ ಮಹಾರಾಷ್ಟ್ರ ದೇಶವೇ ಔರಂಗಜೇಬನಿಗೆ ತುತ್ತಾದ ತಲ್ಲ! ಬಿಡಿರಿ; ಪೌರುಷಗೇಡಿದ ಈ ಕಟ , ಶೋಕವನ್ನು ತಟ್ಟನೆ ನಿಲ್ಲಿಸಿ ಬಿ ಡಿರಿ. ಹೀಗೆ ಶೋಕಗ್ರಸ್ತರಾಗಿ ಕರ್ತವ್ಯ ಭ್ರಷ್ಟರಾಗುವದು ಶಿವಪ್ರಭುವಿಗೆ ಸರ್ವ ಥಾ ಸಮ್ಮತವಾದದ್ದಲ್ಲ. ಶತ್ರುವ ನಮ್ಮ ಕಡೆಯ ಆಶಾಂಕುರವನ್ನು ಕೂಡ ಕಿತ್ತಿ ಒಗೆ ಯಲಿಕ್ಕೆ ಬಂದಗಿಂದಾನು ಬೇಗನೆ ಏಳಿರಿ, ಅಚ್ಚ ಮರಾಟರು ಸಂಕಟ ಕಾಲದಲ್ಲಿ ನಿರಾಶೆ ಕಡುವದಿಲ್ಲ, ಅವರು ಶಾಂತರೂ, ಗಂಭೀರರೂ ಆಗಿರುವರೆಂಬದನ್ನು ಜಗತ್ತಿಗೆ ತೋರಿಸುವದಕ್ಕಾಗಿ ಏಳಿರಿ, ಹೀಗೆ ಅಳುತ್ತ ಕುಳಿತುಕೊಂಡರೆ ಆಗುವದೇನು? ಸದ್ಯಕ್ಕೆ ದಾದಾಸಾಹೇಬರ ಕ್ರಿಯಾಕರ್ಮಗಳು ನಡೆಯಬೇಕಾಗಿರುವವವೇ? ಪ್ರಹ್ಲಾದನಂತನ ಈ ಮಾತುಗಳನ್ನು ಕೇಳಿ ರಾಜಾರಾಮನು ಕಣ್ಣೀರು ಸುರಿ ಮತ್ತ“ಏನು? ದಾದಾಸಾಹೇಬರ ಕ್ರಿಯಾಕರ್ಮಗಳನ್ನು ನಾನು ಮಾಡಲಾ? ಆ ಬಾಸಾಹೇಬರ ಕರ್ಮವನ್ನು ನಾನೇ ಮಾಡಿದನು. ಅವನ ಕರ್ಮವೂ ನನ್ನ ಕೈಯಿಂtಿ