ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನಪುಣ್ಯ, ೫ . - - ಆಯಿತು , ಈಗ ಅಂಣನ ಕರ್ಮವನ್ನು ನಾನು ಮಾಡಬೇಕೆ ? ಇವಲ್ಲರ ಆತ್ಮಕ ಇಂದ ನನ್ನ ಕಪಾಳಮೋಕ್ಷವು ಯಾಕಾಗಬಾರದು ? ಪ್ರಹ್ಲಾದಪಂತ, ನನ್ನ ಕಾಲು ಬುಡದ ಹರಿಯು ಮುರಿದು ಬಿದ್ದಂತಾಯಿತು. ಇನ್ನು ನನ್ನ ಪರಾಕ್ರಮವು ಮುಗಿ ಯಿತು , ಅನ್ನಲು, ಪ್ರಹ್ಲಾದಪಂತನು-ಎಂಥ ಹೀನ ನುಡಿಗಳನ್ನು ನುಡಿಯುವಿರಿ ಮಹಾರಾಜ ! ಶಾಜಿರಾಜರು ಬಂದಿವಾಸವನ್ನು ಹೊಂದಿದರೆಂದು ಅಬಾಸಾಹೇಬರು ಕೈಕಾಲುಗಟ್ಟಿರೋ ? ಶಹಾಜಿರಾಜರು ಕೈಲಾಸವಾಸಿಗಳಾದರೆಂದೇನು ಅಬಾ ಸಾಹೇ ಬರು ಮೈ ಮರೆತು ಕುಳಿತುಕೊಂಡರೋ ? ಬಹಳ ಹೇಳವದೇನು ? ಸ್ವತಃ ಅಬಾಸಾ ಹೇಬರಂಥ ದೇದೀಪ್ಯಮಾನ ರಕ್ತವೂ ಆಗ್ರಾದಲ್ಲಿ ಔರಂಗಜೇಬನ ಸೆರೆಯಲ್ಲಿ ಸಿಕ್ಕಾಗ. ತರಾಟರ ಕಾರ್ಯವು ತಡೆದು ನಿಂತಿತೇನು ? ನಾವೆಲ್ಲರೂ ಆಬಾಸಾಹೇಬರ ಪಟ್ಟ ಶಿಷ್ಯರಿರುವೆವಲ್ಲವೆ ? ಅಬಾಸಾಹೇಬರು ಕಷ್ಟಪಟ್ಟು ತೋಡಿ ಹೊರಡಿಸಿರುವ ಶಿಲೆ ಯನ್ನು ನಾವು ಶತಮುಖಗಳಿಂದ ಹರಿಸೋಣ! ಅಂದರೇನೇ ಛತ್ರಪತಿಯ ಗರಡಿಯ ಮನೆಯನ್ನು ಆಡಿದ್ದರ ಸಾರ್ಥಕವಾಗುವದು ಏಳಿರಿ! ಈ ಜೋತಾಜಿಯಂಥ ಬಹದ್ದ ರನು ಆ ಚಂಡಾಲರ ಕೈಯೊಳಗಿಂದ ಮಹಾರಾಜರ ಶಿರಸ್ಸನ್ನು ಕಸಿದುಕೊಂಡು ಬಂದಿ ರವನು ! ಇದೇ ಶುಭಶಕುನವು ! ಇದೇ ಈಶ್ವರೀಪ್ರಸಾದದ ಮೊದಲನೆಯ ಕುರುಹು! ಇದೇ ಪರಾಕ್ರಮದ ಪರಮಾವಧಿಯು ! ! ನಾವೆಲ್ಲರೂ ಮಾತೃಶ್ರೀಯವರ ಸಮಾಧಾನ ಮಾಡೋಣ ? ಅವರು ವೀರಪತ್ನಿಯರಿರುವರು ! ಅವರನ್ನು ಕರೆದುಕೊಂಡು ನಾವು ಮುಂದಿನ ಮಾರ್ಗವನ್ನು ಗೊತ್ತು ಮಾಡಿಕೊಳ್ಳೋಣ. ಸಾವಿರಾರು ಸಂಕಟಗಳೊ ಡಗಿದರೂ, ಸತು , ಮಾತು, ಗಾಢಾಂಧಕಾರವು ಪಸರಿಸಿದರೂ ಕಚೆದೆಯ ಆಚ ಮರಾಟರು ಅವುಗೆಡದೆ, ಉತ್ಸಾಹದಿಂದ ಮುಂದಕ್ಕೆ ಹೆಜ್ಜೆಗಳನ್ನಿಡತಕ್ಕವಿಂಬದನ್ನು ತಪ್ಪದೆ ಜಗತ್ತಿಗೆ ತೋರಿಸೋಣ! ಸದ್ಯಕ್ಕೆ ಮಹಾರಾಜರ ಶಿರಸ್ಸಿನ ಪೂಜೆಯೇ ಮನೆ ಯಲ್ಲಾಗುವ ದೀಪೋತ್ಸವವು ! ಇದೇ ಶಂಭುಮಹಾದೇವನ ಯಜನವು, ಭಜನವು ! ಏಳಿರಿ, ಏಳಿರಿ, ರಾಜಾರಾಮ ಪ್ರಭುಗಳೇ ಏಳಿರಿ? ಅಲಮುಗೀರನ ಒr ಬಡಿತವ ಲೆಕ್ಕಿ ಸದೆ ಮರಾಟರ ಪುನರುತ್ಥಾನವಾಗಲಿ , ಏಳಿರಿ !! ೭ ನೆಯ ಪ್ರಕರಣ-ನಿಷ್ಠೆಯಂತೆ ಸಾಹಸವು? - - ರಾಯಗಡದ ಬುಡದಲ್ಲಿಯ ಘೋರವಾದ ಅರಣ್ಯವು. ನಿರ್ಜನವಾದ