ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬o ಸುರಸಗ್ರಂಥಮಾಲಾ, ಆ ನಿಬಿಡಾರಣ್ಯದಲ್ಲಿ ಗಿಡಗಳು ಬಹುದಟ್ಟವಾಗಿ ಬೆಳೆದದ್ದರಿಂದ, ಮಧ್ಯಾಹ್ನದಲ್ಲಿಯೂ ಹೊತ್ತು ಮುಣುಗಿದಂತೆ ಭಾಸವಾಗುತ್ತಿತ್ತು. ಅಲ್ಲಿ ಹಿಂಸ್ರಪಶುಗಳ ವಾಸ್ತವ ವಿದ್ದದ್ದರಿಂದ, ಮಹಾಮಹಾ ವೀರರು ಕೂಡ ಆ ಅರಣ್ಯವನ್ನು ಪ್ರವೇಶಿಸಲಿಕ್ಕೆ ಅಂಜು ಇಲಿದ್ದರು . ಈ ಘೋರಾರಣ್ಯವನ್ನು ಕುರಿತು ಅಂಜಿಕೆ ಬರುವಂಥ ಹಲವು ಸುದ್ದಿ ಗಳು ಜನರಲ್ಲಿ ಪಸರಿಸಿದ್ದವು. ಕೆಲವರು ಈ ಅರಣ್ಯದ ಮಧ್ಯದಲ್ಲಿ ಒಂದು ಅರಮನೆ 'ರದ್ದು , ಅಲ್ಲಿ ಹಿಂದಕ್ಕೆ ಯಾದವವಂಶದ ರಾಜರು ವಾಸಿಸುತ್ತಿದ್ದರೆಂತಲೂ, ಅವ ರನ್ನು ಮುಸಲ್ಮಾನರು ಸಂಹರಿಸಿದ್ದರಿಂದ, ಅವರೆಲ್ಲರು ಪಿ ಶಾ ಚ ರೂ 5 ದಿ೦ದ ಸದ್ಯಕ್ಕೆ ಅಲ್ಲಿ ವಾಸಿಸುವರೆಂತಲೂ ಹೇಳುತ್ತಿದ್ದರು ! ಈ ನಿಬಿಡಾರಣ್ಯದಲ್ಲಿ ಹನ್ನೆರಡು ತಿಂಗಳು ಹರಿಯುವಂಥ ಒಂದು ಸರವ ಇದ್ದು , ಒಂದು ಶಿವಾಲಯದ ಶಿಖರವು ಗಿಡಗಳ ಗುಂಪಿನಲ್ಲಿ ಗಾಂಭೀರ್ಯದಿಂದ ಶೋಭಿಸುತ್ತಲಿತ್ತು. ಕೃಚಿತ ಪ್ರಸಂಗದಲ್ಲಿ ಸಾಹಸಿಗರಾದ ಶ್ರಮಹಾರಾಷ್ಟ್ರ ಸರದಾರರು ಆ ಶಿವಾಲಕ್ಕೆ ಹೋಗಿ, ಮಹಾ ದೇವನ ದರ್ಶನ ಮಾಡಿಕೊಂಡು ಬರುತ್ತಲಿದ್ದರು ; ಆದರೆ ಅವರು ದರ್ಶನ ಮಾಡಿಕೊಂ ಡು ಬಂದು ಹೇಳುತ್ತಿದ್ದ ಸುದ್ದಿಗಳು ಬಹು ವಿಲಕ್ಷಣವಾಗಿರುತ್ತಿದ್ದವು. ಅವರು ಹೇಳುವ ದೇನಂದರೆ-ದೇವಾಲಯದಲ್ಲಿ ಸ್ವಯಂಭುಜ್ಯೋರ್ತಿಲಿಂಗವಿರುವದು , ಮಧ್ಯರಾತ್ರಿ ಯಲ್ಲಿ ಎಷ್ಟೋ ಬ್ರಹ್ಮರಾಕ್ಷಸಗಳು ಬಂದು ಮಹಾದೇವನನ್ನು ಷೋಡಶೋಪಚಾರ ಗಳಿಂದ ಪೂಜಿಸುವವು. ಆ ಕಾಲದಲ್ಲಿ ಭಯಂಕರ ವ್ಯಾಘಾದಿ ಹಿಂಸ್ರ ಪಶುಗಳು ಕೂಡ ಈಶ್ವರನ ದರ್ಶನಕ್ಕೆ ಬರುತ್ತವೆ. ಆ ದೇವಾಲಯದಲ್ಲಿ ಒಮ್ಮೆ ಲೇ ಲಕ್ಷಾ ವಧಿ ದೀವಟಿಗೆಗಳು ಹತ್ತುವವು. ಇಷ್ಟಾದ ಬಳಿಕ ಗುಡಿಯಲ್ಲಿ ಭಯಂಕರವಾದ ಸಿಂಹನಾದವಾಗುವದು.* ಕೆಲವರು ಮತ್ತೆ ಹೇಳುವದೇನಂದರೆ-“ಪೂಜಿಸುವ ಆ ಬ್ರಹ್ಮರಾಕ್ಷಸವು ಮುಸಲ್ಮಾನರಿಂದ ಹೊಡೆಯಲ್ಪಟ್ಟಿದ್ದ ಆ ಯಾದವ ರಾಜನ ಬ್ರಾಹ್ಮಣ ಪ್ರಧಾನಿಯು , ಆ ರಾಜನು ತನ್ನ ಹೆಂಡಿರುಮಕ್ಕಳಿಂದ ಕೂಡಿಕೊಂಡು ಪೂಜೆಯ ಕಾಲಕ್ಕೆ ಬರುವನು !” ರಾಯಗಡದ ಕಿಲ್ಲೇದಾರರಿಗೆ ಮಾತ್ರ ಆ ಗುಡಿಯ ಸಂಪೂರ್ಣ ವೃತ್ತಾಂತವು ಗೊತ್ತಿರುತ್ತಿತ್ತು. ಅವರು ಆನಂದದಿಂದ ಹರಟೆ ಕಚ್ಚುತ್ತಿರುವಾಗ ಆ ಗುಡಿಯ ವೃತ್ತಾಂತವನ್ನು ಬಣ್ಣಿಸುತ್ತಲಿದ್ದರು, ಅವರು ಹೇಳುವದೇನಂದರೆ- ಆದವ ರಾಜನು ನಮ್ಮ ಮೂಲಪುರುಷನು , ವರ್ಷಕ್ಕೊಂದು ಸಾರೆ ನಾವು ಆತನ ಹೆಸರಿನಿಂದ ಅನ್ನ ನೀರು ಕೊಡುವದಕ್ಕೆ ಜೀವದ ಹಂಗುದೊರೆದು ಆ ಗುಡಿಗೆ ಹೋಗಬೇಕಾಗು ವದು , ಆಗ ನಮ್ಮ ಜೀವಕ್ಕೆ ಅಪಾರು ಮಾತ್ರ ಎಷ್ಟು ಮಾತ್ರವೂ ಆಗುವದಿಲ್ಲ! ಅಲ್ಲಿ