ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨ ಸುರಸಗ್ರಂಥಮಾಲಾ, - - `ಒಡೆಯನ ಮರಣದ ದುಃಖದಿಂದಲ, ಅಥವಾ ಆತನ ರಾಜ್ಯವ ಬಾದಶಹನ ಉಪದ್ರವದಿಂದ ಹಾಗೆ ರಕ್ಷಬಂದೀತೆಂಬ ಚಿಂತೆಯಿಂದಲೋ, ಖಂಡೋಬನು ರಾಯಗಡಕ್ಕೆ ಹೋಗದೆ, ಮಧ್ಯಾರಣ್ಯದ ಹಾದಿಯನ್ನು ಹಿಡಿದು ಹೊರಟನು! ಸರಳವಾದ ದಾರಿಯು ಸರ್ವಥಾ ಇದ್ದಿಲ್ಲ. ಮಸಮಸಕಾದ ಸೀಳ ದಾರಿಯಿಂದ ಇಲ್ಲ ಮುಳ್ಳುಗಳನ್ನು ತುಳಿಯುತ್ತ, ಎಡಬಲದಲ್ಲಿ ಮೈಮೇಲಿನ ಅರಿವೆಯನ್ನು ಹಿಡಿದು “ಕೊಳ್ಳುವ ಕಾಡು ಮಳ್ಳ ಗಿಡಗಳನ್ನು ಬಿಡಿಸಿಕೊಳ್ಳುತ್ತ, ಆತನು ಮುಂದಕ್ಕೆ ಸಾಗಿದ್ದನು, ವಿಚಾರ ಮಗ್ನನಾಗಿರುವ ಆತನಿಗೆ ತಾನು ಎಲ್ಲಿಗೆ ಹೋಗುತ್ತಿರುವನೆಂಬ ದರ ಅರಿವು ಸಹ ಪೂರ್ಣವಾಗಿ ಇದ್ದಂತೆ ತೆರಲಿಲ್ಲ. ಏನೋ ಒಂದು ತರದ ಔದಾ ಸೀನ್ಯವನ್ನು ತಾಳಿದವನಂತೆ ವ ಎಂದಕ್ಕೆ ಸಾಗಿದ್ದನು . ಹೀಗೆ ಖಂಡೋಬನು ಬಹು ಕಷ್ಟ ಪಡುತ್ತ ಮಾರ್ಗವನ್ನು ಕ್ರಮಿಸುತ್ತ ಮೈಲೆಂ ಡು ಮೈಲುಗಳನ್ನು, ಕ ವಿ ಸಿ ಹೊ ಗ ಲು, ರಯ :ಗಡದ ಕಡೆಯಿಂದ ದೇವ ಸ್ನಾನದ ಕಡೆಗೆ ಹೋದದ್ದೆಂದು ಸ್ಪಷ್ಟವಾವ ಕಾಲಹಾದಿಯು ಆತನ ಕಣ್ಣಿಗೆ ಬಿದ್ದಿ ತು, ಅದನ್ನು ನೋಡಿ ಆತನು ಇಂಥ ಕಟ್ಟಡವಿಯಲ್ಲಿ ಇಂಥ ಸ್ವಚ್ಛವಾದ ಹಾದಿ ಯನ್ನು ಯಾರು ಮಾಡಿಸಿರಬಹುದೆಂದು ಆಶ್ಚರ್ಯಪಟ್ಟನು. ಆ ಹಾದಿಯನ್ನು ಮುಟ್ಟಲಿಕೆ ಆತನು ಮುಳ್ಳು ಕಂಟಿಗಳನ್ನು ದಾಟ, ದೊಡ್ಡ ದೊಡ್ಡ ವೃಕ್ಷ ಗಳನ: ಅಕ್ರಮಿಸಿ, ಕಲ್ಲು ಮುಳ್ಳುಗಳನ್ನು ತುಳಿದು, ಪ್ರಯಾಸದಿಂವ ಮಾರ್ಗವ ನ್ನು ಕ್ರಮಿಸಿ ಹೋಗಬೇಕಾಗಿತ್ತು ; ಆದರೆ ೧ ಆತನು ಹಿಂಜರಿಯಲಿಲ್ಲ! ಈ ವರೆಗೆ ಆದ ಅನ್ನ, ಕ ವನ್ನು ಲೆಕ್ಕಿಸಲಿಲ್ಲ. ಗುಡಿಯಲ್ಲಿ ಏನಿರ'ವದೆಂಬದನ್ನು ನೋ ಡಿಯೇ ತೀರಬೇಕೆಂದು ನಿಶ್ಚಯಿಸಿ ಆತನು ವರ್ಗ ವನ್ನು ಕ್ರಮಿಸಲಿಕ್ಕೆ ಟೊಂಕ ಕಟ್ಟಿದನು. ಒಮೊಮ್ಮೆ ತನಗೆ ಹಾದಿಯಲ್ಲಿ ಅಷ್ಟಾಗ ಗಿಡದ ಟೊಂಗೆಗಳನ್ನು ಮುರಿದು ಚಲ್ಲಿ, ಆತನು ಮಾರ್ತ ಮಾಡಿಕೊಳ್ಳಬೇಕಾಗುತ್ತಿತ್ತು. ಹೀಗೆ ಬಹು ಪ್ರಯಾಸದಿಂದ ಆತನು ಆ ಕಾಲುದಾರಿಯನ್ನು ಮುಟ್ಟಿದನು, ಆ ಮೇಲೆ ಆತನು ತನ್ನ ಕಾಲುಗಳಲ್ಲಿ ನಟ್ಟಿದ ಮುಳ್ಳುಗಳನ್ನು ತಕ್ಕೊಂಡು, ಮೈಗೆ ಚಿವುರಿಕೊಂಡದ್ದ ನ್ಯೂ, ಮೈಯನ್ನು ಹರಿದುಕೊಂಡದ್ದನ್ನೂ ಒರಿಸಿಕೊಂಡನು. ಆ ಹೊಸ ಹಾದಿ ಯಲ್ಲಿ ಇಂಥ ತೊಂದರೆಗಳೇನೂ ಇಲ್ಲ. ಹಾದಿಯು ಸ್ವಚ್ಛವಾಗಿ ಇತ್ತು, ಆದರೆ, ಅದು ಸರಳವಾಗಿ ಇರದೆ, ನಾಗ ಮೋಡಿಯಂತ ಅತ್ತಿತ್ತ ಸುತ್ತಿಕೊಂಡು ಹೋಗಿತ್ತು. ಕ್ರೂರ ಶ್ಯಾ ಪದಗಳಿರುವ ಸ್ಥಾನದಲ್ಲಿ ಇನ್ನು ಸ್ವಚ್ಛವಾದ ಮಾರ್ಗ ವಿರುವ ಬಗೆಹ್ಯಾಗೆ? ಕದಾಚಿತ್ ಆ ದೇವಸ್ಥಾನಕ್ಕೆ ನೈವೇದ್ಯವನ್ನು ಒಯುವದಕ್ಕಾಗಿ