ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪ ಸುರಸಗ್ರಂಥಮಾಲಾ, ಕ್ರೀಡೆಯನ್ನು ಮಾಡುತ್ತಿದ್ದವು, ಖಂಡೋಬನು ಅತ್ತಿತ್ತ ನೋಡದ ನೆಟ್ಟಗೆ ಗರ್ಭಗು ಡಿಯನ್ನು ಹೊಕ್ಕನು. ಅಲ್ಲಿ ಕಗ್ಗತ್ತಲೆಯ ಮುಸುಕಿತ್ತು. ಒಂದು ಆಳು ಎತ್ತರದ ಎರಡು ಸಮೆಗಳಲ್ಲಿ ದೀಪಗಳು ಉರಿಯುತ್ತಿದ್ದವು. ಸ್ವಯಂಭೂಲಿಂಗವು ಸಣ್ಣದಿದ್ದುಅದರ ಅರ್ಧಭಾಗವು ನೀರಿನಲ್ಲಿ ನುಣುಗಿದ್ದರಿಂದ, ಖಂಡೋಪನು ಕುಳಿತುಕೊಂಡು ದೇವರದರ್ಶನ ಮಾಡಿಕೊಳ್ಳಬೇಕಾಯಿತು. ಆತನು ಭಕ್ತಿಯಿಂದ-“ಶಂಭೋ ಹರ ಹರ, ಮಹಾದೇವ” ಎಂದು ನಾವಘೋಷ ಮಾಡಿದನು. ಗರ್ಭಗುಡಿಯಲ್ಲಿ ಸಿಂಹ ನಾದದಂತ ಧ್ವನಿಯು ತುಂಬಿಕೊಂಡಿತು. ಕಣ್ಣು ಕಪ್ಪಡಿಗಳು ಪರಪರ ಸಪ್ಪಳ ಮಾಡುತ್ತ ಹಾರಾಡುತ್ತಲಿದ್ದವು. ಖಂಡೋಬನು ಲಿಂಗದಿಂದ ಸೃವಿಸುತ್ತಿರುವ ಗಂಗಾ ಜಲವನ್ನು ಪ್ರೋಕ್ಷಿಸಿಕೊಂಡು, ಕ್ಷಣಹೊತ್ತು ದೇವರಸ್ತೋತ್ರಮಾಡಿದನು. ಖಂಡೋಬನು ಇನ್ನು ಹೊರಬೀಳಬೇಕೆಂದು ಗರ್ಭಗುಡಿಯ ಹೊಲವನ್ನು ದಾಟುತ್ತಿರಲು, ಹೊರಗೆ ಯಾರೋ ಘಂಟಾನಾದ ಮಾಡಿದ್ದನ್ನು ಕೇಳಿ ಆತನು ಮೆಟ್ಟ ಬಿದ್ದನು. ನನ್ನಂತೆಯೇ ಯಾರಾದರೂ ದೇವರ ದರ್ಶನಕ್ಕೆ ಬಂದಿರಬಹುದೋ, ಎಂಬ ವಿಚಾರವು ಆತನ ಮನಸ್ಸಿನಲ್ಲಿ ಉತ್ಪನ್ನವಾಗುತ್ತಿರಲು, ಹೊರಗಿನವರು ತಿವಶಂಭೋ, ಹರಹರ” ಎಂದು ನಾಮಘೋಷವಾಡಿದರು, ಅವರ ನಾವಘೋಷ ಧ್ವನಿಯು ಪ್ರತಿಧ್ವನಿಯರೂಪದಿಂದ ಗುಡಿಯನ್ನೆಲ್ಲ ತುಂಬಿಕೊಂಡಂತೆ ಭಾಸವಾಯಿ' ತು, ಅದನ್ನು ಕೇಳಿ ಖಂಡೋಬನು ಭಯಗ್ರಸ್ತನಾದನು. ಬ್ರಹ್ಮರಾಕ್ಷಸಗಳೇ ಶಿವ ಪೂಜೆಗಾಗಿ ಬಂದಿರಬಹುದೆಂದು, ಪುನಃ ಆತನು ಗರ್ಭಗುಡಿಯಲ್ಲಿ ಹಕ್ಕು ಮೂಲೆಯ ಲ್ಲಿ ನಿಂತುಕೊಂಡನು. ಬ್ರಹ್ಮರಾಕ್ಷಸಗಳು ಶಿವಪೂಜೆಮಾಡುವಾಗ ನನ್ನನ್ನು ನೋಡಿ ಸಿಟ್ಟಿಗೆದ್ದರೆ ಏನುಮಾಡಬೇಕು? ಅಥವಾ ಭಿಲ್ಲರೇ ಮೊದಲಾದ ಕಾಡುಜನರು ಗುಡಿಯಲ್ಲಿ ಬಂದಿದ್ದು, ಅವರ ಕೈಯಲ್ಲಿ ನಾನು ಸಿಕ್ಕರೆ ಏನು ಮಾಡಬೇಕು? ಎಂಬಿವೇ ಮೊದಲಾದ ಭಯಸೂಚಕ ವಿಚಾರಗಳನ್ನು ಮಾಡುತ್ತಾ ಖಂಡೋಬನು ಮೂಲೆಯಲ್ಲಿ ಸುಮ್ಮನ ನಿಂತುಕೊಂಡುಬಿಟ್ಟನು ! ಅಷ್ಟರಲ್ಲಿ ಹೊರಗೆ ಘಂಟಾನಾದಮಾಡಿದವರು ಒಬ್ಬೊಬ್ಬರೇ ಒಳಗೆ ಗರ್ಭ ಗುಡಿಯಲ್ಲಿ ಬಂದರು. ಆದರೆ ಕತ್ತಲೆಯಲ್ಲಿ ಅವರು ಗುರುತು ಖಂಡೋಬನಿಗೆ ಹತ್ತ ಅಲ್ಲ, ಅವರು ಒಳಗೆಬಂದು ಮತ್ತೆ ಶಿವನಾಮಫೋಸಮಾಡಲು, ಈ ವ್ಯಕ್ತಿಗಳು ಬ್ರಹ್ಮ ರಾಕ್ಷಸಗಳಾಗಿ, ಭಿಲ್ಲರೇ ಮೊದಲಾದ ಕಾಡುಜನರಾಗಲಿ ಅಲ್ಲವೆಂದು ಅವರ ದನಿಯು. ಮೇಲಿಂದ ಖಂಡೋಜಿಯು ತಿಳಿದುಕೊಂಡನು. ಅಷ್ಟರಲ್ಲಿ ಗರ್ಭಗುಡಿಯೊಳಗಿನ ಆ ನಾಲ್ಕಾರು ಜನರಲ್ಲಿ ಒಬ್ಬನು ದೇವರಮುಂದಿನ ದೀಪಗಳನ್ನು ಸ್ಪಷ್ಟವಾಗಿ