ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೬ ಸುರಸಗ್ರಂಥಮಾಲಾ ಅವಕ್ಕೆ ಆತನು ಸೊಪ್ಪು ಹಾಕಲಿಲ್ಲ. ಆತನು ತನ್ನ ತಲೆಗೆ ಸುತ್ತಿದ್ದ ಮುಂಡಾಸವನ್ನು ಹರಿದು ಎರಡು ಮೂರು ಕಕ್ಕಡಗಳನ್ನು ಮಾಡಿಕೊಂಡು ಪಣತಿಯಲ್ಲಿ ಎದ್ದಿ ಇಟ್ಟು ಕೊಂಡನು. ಆ ಗಣೇಜಿಯೇ ಮೊದಲಾದವರು ಹೋಗಿ ಸ್ವಲ್ಪ ಹೊತ್ತು, ಆದ ಮೇಲೆ ಆತನು 'ಗುಹೆಯಬಾಗಿಲಿಗೆ ಹೋಗಿ ಮೊದಲು ಒಳಗೆ ಹಣಿಕಿನೋಡಿ, ಜನರ ಸುಳುವಿನ ಸಪ್ಪಳವನ್ನು ಕಿವಿಗೊಟ್ಟು ಕೇಳಿದನು. ಗವಿಯಲ್ಲಿ ಕತ್ತಲು ಮುಸು ಕಿತ್ತು, ಜನರಸದ್ದು ಕೇಳಲಿಲ್ಲ. ಆಗ ಮಹಾಧೈರ್ಯಶಾಲಿಯೂ, ಸ್ವಾಮಿಕಾರ್ಯ ತತ್ಪರನೂ ಆದ ಖಂಡೋಬನು ಕಕ್ಕಡವನ್ನು ಹಚ್ಚಿಕೊಂಡು ಮೆಲ್ಲಗೆ ಗವಿಯಲ್ಲಿ ಇಳಿದನು. ದೀಪದ ಪ್ರಕಾಶದಲ್ಲಿ ಆತನಿಗೆ ಗುಹೆಯ ಮಾರ್ಗವು ಸ್ಪಷ್ಟವಾಗಿ ಕಾಣಿ ಸಹತ್ತಿತು. ಗುಹೆಯಲ್ಲಿ ಹೋದವರಿದೀಪವು ತನ್ನೆಗುರಿಗೆ ಕಂಡಕೂಡಲೆ, ತನ್ನ ದೀಪವನ್ನು ನಂದಿಸಿ ಹಿಂದಿರುಗುವ ಸಂಕಲ್ಪವನ್ನು ಮಾಡಿದ್ದ ಆತನು ಬಹು ಜಾಗ ರೂಕತೆಯಿಂದ ಮಾರ್ಗವನ್ನು ಕ್ರಮಿಸಹತ್ತಿದನು. ಹೀಗೆ ಅತ್ಯಂತ ಕುತೂಹಲಪ್ರೇರಿತನಾದ ಖಂಡೋಜಿಯು ಬೇಗನೆ ನಡೆದು ಹೋದನು, ತಕ್ಕಮಟ್ಟಿಗೆ ದೂರ ಹೋದಬಳಿಕ, ಆತನಿಗೆ ಬಹು ದೂರದಲ್ಲಿ ದೀಪ ದಪ್ರಕಾಶವು ಕಾಣಹತ್ತಿತು. ಕೂಡಲೆ ಆತನು ತನ್ನ ಕೈಯಲ್ಲಿಯ ದೀಪವನ್ನು ನಂದಿಸಿ, ಆ ಬೆಳಕಿನ ನಿರತಿನಿಂದ ಕತ್ತಲಲ್ಲಿಯೇ ಮಾರ್ಗವನ್ನು ಕ್ರಮಿಸಹತ್ತಿದನು. ಹೊರಹೋಗುತ್ತ ಆತನಿಗೆ ಕೆಲವು ಪಾವಟಿಗೆಗಳು ಹತ್ತಿದವು. ಗಣೇಬೆಯೇ ಮೊದಲಾದವರು ತಾವು ಒಡ್ಡಿದ್ದ ಕಕ್ಕಡಗಳನ್ನು ಆ ಪಾ ವ ಟಿ ಗೆ ಗಳ ಹತ್ತರ ಚಲ್ಲಿ ಕೆಟ್ಟು ಹೋಗಿದ್ದರು. ಅವುಗಳಲ್ಲಿ ಒಂದೆರಡು ನಂದಿದ್ದವು, ಒಂ ದೆರಡು ಅರ್ಧಮರ್ಧ ಉರಿಯುತ್ತಿದ್ದವು. ದೀಪದ ಅವಶ್ಯಕತೆಯು ಇಲ್ಲದ್ದರಿಂದ ಅವನ್ನು ಇಲ್ಲಿ ಚೆಲ್ಲಿಕಟ್ಟು ಹೋಗಿರುವರೆಂದು ಖಂಡೋಜಿಯು ತರ್ಕಿಸಿದನು. ಆತನು ಪಾವತಿಗೆ ಗಳನ್ನು ಹತ್ತಿ ಮೇಲಕ್ಕೆ ಹೋಗಲು, ಜನರಮಾತುಗಳು ಕೇಳಹತ್ತಿದವು. ಬರಬ ರುಆ ಮಾತುಗಳಲ್ಲಿ ನಗೆa ಮಿಶ್ರಣವಾಗಿ ಗದ್ದಲವು ಸ್ಪಷ್ಟವಾಗಿ ಕೇಳಹತ್ತಿತು. ಖಂಡೋಜಿಯು ಮೆಲ್ಲಗೆ ಮೇಲಕ್ಕೆ ಹೋದನು. ಆತನಿಗೆ ಒಂದು ಬಾಗಿಲು ಹತ್ತಿತು. ಒಳಗೆ ಒಂದು ಪ್ರಶಸ್ತವಾದ ದಿವಾಣಖಾನೆಯಿದ್ದು, ಮಖ ಮ ಲಿ ಯಿಂ ದ ಭೂಷಿ ಸಲ್ಪಟ್ಟ ಕುರ್ಚಿಗಳನ್ನೂ ಬೇರೆ ಆಸನಗಳನ್ನೂ ಅಲ್ಲಿ ಇಟ್ಟಿದ್ದರು. ಅವುಗಳಮೇಲೆ ಗಣೋಜಿ, ರಾಣೋಜಿ ಮೊದಲಾದವರು ಕುಳಿತುಕೊಂಡಿದ್ದರು. ಅವರನ್ನು ನೋಡಿ ಖಂಡೋಜಿಯ ಮನಸ್ಸಿನಲ್ಲಿ ಹಲವು ವಿಚಾರತರಂಗಗಳು ಈ ೩ ನ ವಾ ದವು. ಅವರು, ಇಲ್ಲಿ ಯಾಕೆಬಂದಿರಬಹುದು ? ಈ ನೆಲಮನೆಯು ಯ ರ ದಾ ದ ರ