ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನಪುಣ್ಯ, ವಾಡೆಯ ಬುಡದಲ್ಲಿ ಇರಬಹುದೇ ಹೇಗೆ? ಇಲ್ಲಿಂದ ರಾಯಗಡವು ಎಷ್ಟು ದೂರ ದಲ್ಲಿ ಇರಬಹುದು? ಇಲ್ಲಿಂದ ಪಾರಾಗಿಹೋಗಲಿಕ್ಕೆ ನನಗೆ ನಾ ರ್ಗ ವು ಸಿಗಬ ಹುದೋ? ಎಂಬಿವೇ ಮೊದಲಾದ ವಿಚಾರಗಳಲ್ಲಿ ಮಗ್ನನಾಗಿರಲು, ಆ ದಿವಾಣಖಾ ನೆಯದೊಂದು ಬಾಗಿಲು ಧಡಕ್ಕನೆತೆಗೆದು, ಅದರೊಳಗಿಂದ ರಾಯಗಡದ ಮುಖ್ಯಾ ಧಿಕಾರಿಯಾದ ಸೂರ್ಯಾಜಿಪಿಸಾಳನು ಬಂದನು, ಅವನನ್ನು ನೋಡಿದಕೂಡಲೆ ಖಂಡೋಜಿಯ ಕಣ್ಣುಗಳು ಕೆಂಪಾಗಿ ಆತನು ಸಂತಾಪದಿಂದ ಉರಿಯಹತ್ತಿದನು. ಅತನ ಮುಖದಿಂದ-“ ಎಲಾ ನೀಚಾ, ಉಂಡಮನೆಗಳ ಯೆಣಿಸುವ ಅಧಮ” ಎಂಬ ಉದ್ದಾರವು ಹೊರಡತಕ್ಕದ್ದು ! ಆದರೆ ಆತನು ಅವನ್ನು ಬಹು ಪ್ರಯಸ ನಿಂದ ನುಂಗಿಕೊಂಡನು. ಹೀಗಿರುವಾಗ ಸೂರ್ಯಾಜಿಯಸಂಗಡ ಗಣೋಜಿಶಿರ್ಕೆ, ಹಾಗು ಭೋಲಾ ನಾಥ ಇವರ ಆಲೋಚನೆಗಳು ನಡೆದವು. ಭೋಲಾನಾಥನು ಸೂ ರ್ಯ ಜಿ ಗೆ ಹಲವು ಪ್ರಶ್ನೆಗಳನ್ನು ಮಾಡಿದನು. ಕೂಡಲೆ ಈ ಚಾಂಡಾಲ ಚೌಕಡಿಯ ಸಂಕೇ ತಗಳು ಗೊತ್ತಾದವು. ಅವು ಕಿವಿಗೆ ಬಿದ್ದ ಕೂಡಲೆ ಖಂ ಡೋ ಜಿ ಯ ಮೈ ಮೇ ಲಿನ ಎಚ್ಚರವು ತಪ್ಪಿತು. ಸಂತಾಪಾತಿಶಯದಿಂದ ಅವನ ತುಟಿಗಳು ನಡುಗ ಹತ್ತಿದವು. ಆತನು ತಿರುಗಿ ಹೋಗುವದಕ್ಕಾಗಿ, ಕಕ್ಕಾಬಿಕ್ಕಿಯಾಗಿ ನಾಲ ಕಡೆಗೆ ನೋಡಹತ್ತಿದನು. ಅವನ ಮೈ ಮೇಲೆ ಪೂರಾ ಎಚ್ಚರವಿದ್ದಿಲ್ಲ. ಅಮ್ಮ ರಲ್ಲಿ ಗಣೇಜಿಯೇ ಮೊದಲಾದವರು ಹೊರಡಲು ಸಿದ್ದರಾಗಿ, ಗಣೋಜೆಯೊಬ್ಬ ನೇ ಒಂದು ದೀವಟಿಗೆಯನ್ನು ತಕ್ಕೊಂಡು ಹೊರಗೆ ಬರಹತ್ತಿದನು. ಆತನ ದಿನ ಟಗೆಯ ಬೆಳಕು ಬಿದ್ದಕೂಡಲೆ, ಖಂಡೋಜಿಯು ಎಚ್ಚತ್ತು ಲಗಬಗೆಯಿಂದ ಪಾವಟಿಗೆಗಳನ್ನು ಇಳಿಯಹತ್ತಿದನು. ಆಗ ಗಣೇಚಿಯು ಹೊರಗೆ ಬರಲು, ಸಿ ಶಾಚದಂತೆ ಯಾರೋ ಓಡಿ ಹೋಗುತ್ತಿರುವದು ಅವನ ಕಣ್ಣಿಗೆ ಬಿದ್ದಿತು. ಈ ಡಲೆ ಆತನು ಬೆದರಿ ಬಿದ್ದು-“ ಘಾತವಾಯಿತು ! ಘಾತವಾಯಿತು ! ಯವನೋ ನಮ್ಮ ಒಳಸಂಚುಗಳನ್ನು ಕೇಳಿಕೊಂಡನು ” ಎಂದು ಒ ದ ರಿ ದ ನು, ಕಡಲೆ ಒಳಗಿನವರೂ ಹೊರಗೆ ಬಂದು, ಗಣೋಜಿಯನು ಹಿಂಬಾಲಿಸಿದರು. ಗಣೇ ಜಿಯು ಎಡಗೈಯಲ್ಲಿ ದೀವಟಿಗೆಯನ್ನು ಹಿಡ ಕೊಂ ಡು, ಬಲಗೈಯಲ್ಲಿ ತನ್ನ ಖಡ್ಗವನ್ನು ಹಿಡಿದು ಖಂಡೋಜಿಯ ಬೆನ್ನು ಹತ್ತಿದನು. ಆಗ ಸೂರ್ಯಾಜಿಯ ಆತನನ್ನು ಕುರಿತು ಗಣೋಜಿರಾವ, ನೀವು ಈ ಘಾತಕ ಮನುಷ್ಯನ ಬೆನ್ನು ಬಿಡಬೇಡಿರಿ, ಕದಾಚಿತ್ ಆತನು ಹಿಂದಕ್ಕೆ ತಿರುಗಿ ನಿಲ್ಲಬಹುದು. ಕೂಡ