ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಶಿವಪ್ರರ್ಭುನ ಪುಣ್ಯ! ೪ಘವಾ. ಕೆಟ್ಟಿದೆಯ ಮರಾಟರು !! + + 7+ ೧ನೆಯ ಪ್ರಕರಣ-ಶ್ರೀ' ಸಮರ್ಥಕ . ಭಗವಾನ್ ಸೂರ್ಯನಾರಾಯಣನು ಅದೇ ಉದಯಂಗಿ ಮೇಲಕ್ಕೆ ಹುದ್ದರಿಂದ, ಬಿಸಿಲಶಾಹವು ಹೆಚ್ಚತೊಡಗಿದೆ. ಆತನ ಶಿಕ್ಷಕಿ ರಣಗಳು ಸತಾ? ಯ ನಿಬಿಡವಾದ ಅರಣ್ಯಪ್ರದೇಶವನ್ನೂ ಭೇದಿಸಿ ಅಲ್ಲಲ್ಲಿ ಪಸರಿಸಹತ್ತಿದೆ. ಆ ಪರ್ವತದ “ ಘಾನೇಯಿ ” ಎಂಬ ಶಿಖರದ ಮೇಲೆ ಕಟ್ಟಲ್ಪಟ್ಟಿದ್ದ “ ವಿರುಲಿ " ಎಂಬ ಕೋಟಿಯು, ತಾನು ಶಿವಪ್ರಭುವಿನ ರಾಜಧಾನಿಯಾದ ( ರಾಯಗಡದ ” ಪ್ರವೇ ಶಾರನೆಂಬ ಗೌರವವನ್ನು ಪಡೆದು ಗಾಂಭೀರ್ಯದಿಂದ ಒಪ್ಪುತ್ತದೆ. “ ಶಿವಪ ಭುವು ಸನಾತನ ಧರ್ಮರಕ್ಷಣಕಾಗಿ ತನ್ನ ಮಾವಳರೊಡನೆ ಘೋರತಪಸ್ಸನ್ನಾಚರಿ ಸಿದ್ದು ಇದೇ ಪುಣ್ಯ ಭೂಮಿಯಲ್ಲಿ "ವೆಂಬ ಗೌರವದ ಸಂಗತಿಯನ್ನು ಕೂಗಿ ಕೂಗಿ ಜಗತ್ತಿಗೆ ತಿಳಿಸುವವೋ ಅನ್ನುವಂತೆ, ವಿವಿಧ ಪಕ್ಷಿಗಳು ತಮ್ಮ ಸ್ವಾಭಾವಿಕಧ್ವನಿ ಗಳಿಂದ ಅರಣ್ಯ ಪ್ರದೇಶದಲ್ಲಿ ಪ್ರತಿಧ್ವನಿಯನ್ನುಂಟುಮಾಡುತ್ತಿರಲು, ಸಹೃದಯರ ಹೃದ ಯಗಳು ಸ್ವದೇಶಾಭಿಮಾನದಿಂವ ಉಕ್ಕೇರುತ್ತಲಿವೆ. ಇಂಥ ಪ್ರಸಂಗದಲ್ಲಿ ಒಬ್ಬ ತರುಣರಾವುತನು ತನ್ನ ಕುದುರೆಯನ್ನು ವೇಗದಿಂದ ನಡೆಸುತ್ರ ಕೋಟೆಯ ಕಡೆಗೆ ಬರುತ್ತಿರುವದನ್ನು “ ನಿರೂಯಿ ” ಕೋಟೆಯ ಕಾವಲುಗಾರನು ನೋಡಿದನು. ರಾವು ತನು ಒಮ್ಮೆ ಗಿಡಗಳ ಗುಂಪಿನಲ್ಲಿ ಮರೆಯಾಗುವನು, ಒಮ್ಮೆ ಕಾಣುವನು. ನೋಡ ನೋಡುತ್ತಿರುವಷ್ಟರಲ್ಲಿ ಆತನು ಕೋಟೆಯ ಕೆಳಗಿದ್ದ ಶ್ರೀ ಭವಾನೀಶಂಕರನ ಗುಡಿಯ ಸನಿಯಕ್ಕೆ ಬಂದು, ಕುವ ರೆಯನ್ನು ಗಿಡದಬೇರಿಗೆ ಕಟ್ಟಿ ಭಕ್ತಿಯಿಂದ ಗುಡಿಯನ್ನು ಹೊಕ್ಕನು.