ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನ ಪುಣ ೬೧. ರಿಗೂ ದರ್ಬಾರಕ ನಿಮಂತ್ರಣ ಮಾಡಿದನು. ಎಲ್ಲರೂ ದುಃಖಿತವಾದ ಅಂತಃಕರಣ ದಿಂದ ದರ್ಬಾರಕ್ಕೆ ಹೊರಟಿದ್ದರು. ಎಲ್ಲರೂ ತೀರ ಸಾಧಾರಣ ಉಡಿಗೆ ತೊಡಿಗೆಗಳನ್ನು ಧರಿಸಿದ್ದರು . ಸಭಾಖ್ಯಾನದ ಬಾಗಿಲುಗಳೆಲ್ಲ ತೆರೆದಿದ್ದವು. ಸಭಾಸ್ಥಾನದ ನೆಲವು ಚಿತ್ರವಿಚಿತ್ರವಾದ ಸಂಗಮರವರಿಕಲ್ಲುಗಳಿಂದಲೂ, ಸ್ಪಟಿಕಗಳಿಂದಲೂ ಅಲಂಕೃತ ವಾಗಿತ್ತು. ಮನುಷ,ನ ನಿಲುವಿಕೆಯಷ್ಟು ಎತ್ತರವಾದ ನಿಲುವುಗನ್ನಡಿಗಳನ್ನು ಅಲ್ಲಲ್ಲಿ ಇಟ್ಟಿದ್ದರು. ಸುವರ್ಣದ ನಾಲ್ಕು ಸ್ತಂಭಗಳಿಂದ ಅಲಂಕೃತವಾದ ಸಿಂಹಾ ಸನವು, ಮುತ್ತು-ರತ್ನಗಳ ದೀಪ್ತಿಯಿಂದ ಮನೋಹರವಾಗಿ ಒಪ್ಪುತ್ತಿತ್ತು. ಇದೇ ಸಿಂಹಾಸನವನ್ನು ಶಿವಛತ್ರಪತಿಯೂ, ಆತನ ಹಿರಿಯಮಗನಾದ ಸಂಭಾಜಿಯ ಅಲಂ ಕರಿಸಿದ್ದರು. ಈಗ ಮೂರನೆಯ ಛತ್ರಪತಿಯು ಆರೋಹಿಸುವದರ ಮಾರ್ಗವನ್ನು ಆ ಗೌರವದ ಸಿಂಹಾಸನವು ಗಾಂಭೀರ್ಯದಿಂದ ನಿರೀಕ್ಷಿಸುತ್ತಿರುವಂತ ಸ್ವಾಭಿಮಾನಿ ಗಳಾದ ಮಹಾರಾಷ್ಟ್ರ ವೀರರ ಕಣ್ಣಿಗೆ ಕಾಣುತ್ತಿತ್ತು. ಸಿಂಹಾಸನದ ಮೇಲೆ ವಾಘಸನವನ್ನು ಹಾಸಿದ್ದು, ಅದರ ಮೇಲೆ ಸುವರ್ಣಾಲಂಕೃತವಾದ ಪ್ರಾವರ ಣವು ಶೋಭಿಸುತ್ತಿತ್ತು, ಅದರ ಮೇಲೆ ಮೃದುವಾದ ಉಪಧಾನಗಳನ್ನು , ಅಂದರೆ ಲೋಡು ತಕ್ಕೆಗಳನ್ನು ಹಾಕಿದ್ದರು . ಪ್ರತ್ಯಕ್ಷ ಸಿಂಹಾಸನದ ಮೇಲೆಧನುಷ್, ಬಾಣ ಖಡ್, ಢಾಲು ಇವು ಒಪ್ಪುತ್ತಿದ್ದವು . ಮಹಾರಾಷ್ಟ್ರ ರಾಜ್ಯದ ಅಭಿಮಾನಿಗಳಿಂದ ಸಭಾಸ್ತಾನವ ತುಂಬಿಹೋಗಿರಲು, ಸ್ತುತಿಪಾಠಕರ ಧ್ವನಿಯು ಸಭಾಖ್ಯಾನವನ್ನು ಪ್ರವೇಶಿಸಹತ್ತಿತು , ಆಗ ಅಷ್ಟಪ್ರಧಾ ನರು, ವೇದಮೂರ್ತಿ ಉಪಾಧ್ಯಾಯ ಪುರೋಹಿತರು ಇವರನ್ನು ಅನುಸರಿಸಿ ರಾಜ ಮಾತೆಯಾದ ಏಸೂಬಾಯಿ ಯವರ ಸವಾರಿಯು ಸಭಾಸ್ಥಾನಕ್ಕೆ ದಯಮಾಡಿಸುತ್ತ ಲಿತ್ತು. ಪತಿಯ ಮರಣದಿಂದ ಅವರು ತೀರ ಖಿನ್ನರಾಗಿ ದ್ದರೂ, ಸ್ವರಾಜ್ಯ ಸಂರ ಕಣದ ಉತ್ಸಾಹದಿಂದ ಕೂಡಿದ ಕೆಚ್ಚೆದೆಯ ವರಾಟ ಆ ಒಟ್ಟುಗೂಡಿದ ತಂಡ ವನ್ನು ನೋಡಿ ಅವರ ಚಿತ್ರವು ಸುಪ್ರಸನ್ನವೂ ಆಗಿತ್ತು. ಮೇಲಾಗಿ ಬಾಹ್ಮಣರ ಆಶೀರ್ವಾದದಿಂದ ಅವರ ಚಿತ್ತವೃತ್ತಿಯು ಸಮಾಧಾನಪಟ್ಟಿತ್ತು. ಇವೆಲ್ಲವುಗಳ ಯೋಗದಿಂದ ಅವರ ಮುಖಮುದ್ರೆಯು ಬಹು ಗಾಂಭೀರ್ಯವುಳ್ಳದ್ದಾಗಿರಲು, ನೋಡು ವವರಲ್ಲಿ ಅವರ ವಿಷಯವಾಗಿ ಪೂಜ್ಯಬುದ್ದಿಯು ಉತ್ಪನ್ನವಾಗುತ್ತಿತ್ತು. ರಾಜಮಾತೆ ಯವರ ಮುಂದ:ಗಡೆಯಲ್ಲಿ ಪ್ರಹ್ಲಾದಪಂತನು ಮಾರ್ಗದರ್ಶಕನಾಗಿದ್ದನು , ಅವರ ಬಲಗಡೆಯಲ್ಲಿ ರಾಜಾರಾಮಮಹಾರಾಜರು ಉದಾಸೀನವೃತ್ತಿಯಿಂದ ಸಾಗಿದ್ದರು ; ಮಹಾರಾಜರ ಹಿಂದೆ ಅವರ ಅಂಗರಕ್ಷಕನಾದ ಬಂಕೀ ಗಾಯಕವಾಡ, ರಾಜಮಾತೆ