ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನ ಪುಣ್ಯ. ೬೫ ಇದು ನಿಜವು; ಅದರಂತೆ ನಾನು ಈಗ ವ್ಯಸನಪಡುವದೂ ಇಲ್ಲ, ನಿಮ್ಮಥ ಸ್ವಾಮಿ ಭಕ್ತರು ನನ್ನ ದುಃಖಕ್ಕೆ ಪಾಲುಗಾರರಾಗಿರುವಾಗ, ನನ್ನ ಪಾಲಿಗೆ ದುಃಖವಾದರೂ ಎಷ್ಟು ಉಳಿಯಬೇಕು ? ಮಾವನವರು ನಮ್ಮ ನಿಮ್ಮ ಹಣೆಗೆ ಹಚ್ಚಿಹೆ ಗಿದ್ದ ಸೌಭಾಗ್ಯ ತಿಲಕವು ಅಳಿಸಿ ಹೋಗುವ ಪ್ರಸಂಗವು ಈಗ ಬಂದಿರುವದಷ್ಟೆ ? ಅಂದ ಬಳಿಕ ನಾವೆಲ್ಲರೂ ನಮ್ಮ ಸುಖ-ದುಃಖಗಳೆರಡನ್ನೂ ಲೆಕ್ಕಿಸದೆ ಸ್ವರಾಜ್ಯ ರಕ್ಷಣದಲ್ಲಿ ದೇಹವನಸವಿಸಬೇಕಾಗಿರುವದು , ಪಂತ, ನಿಜವಾಗಿ ನೋಡಿದರೆ, ಈ ಮಹಾ ಕಾರ್ಯದಲ್ಲಿ ಆಬಾಸಾಹೇಬರ ಪುಣ್ಯದ ಮೂರ್ತಿಗಳೇ ಆಗಿ, ಈ ಸಭಾಸ್ಥಾನದಲ್ಲಿ ಕ.* ತಿರುವ ನಿಮ್ಮಂಥ ಪುಣ್ಯಾತ್ಮರು ದೇಹಾಭಿಮಾನವನ್ನು ತೊರೆದು ಹೆಣಗುತ್ತಿರುವಾಗ, ನನ್ನಂಥ ಅಬಲೆಯು ವೈಧವ್ಯವನ್ನು ಭೋಗಿಸುತ್ತ ಯಾಕೆ ಇರಬೇಕು ? ಸಹಗಮನ ದಿಂದ ಅಥವಾ ವಿಷಪಾನದಿಂದ ದೇಹತ್ಯಾಗ ಮಾಡುವದೇ ಯೋಗವು, ಆದರೆ ನಿಮ್ಮಂಥ ರಾಷ್ಟ್ರ ಕಾರ್ಯ ದುರಂಧರರ ವಿನಂತಿಯನ್ನು , ನಾನು ಆಬಾಸಾಹೇಬರ ಆಚೆ ಯೆಂದು ಪಾಲಿಸದಿದ್ದರೆ, ಆಬಾಸಾಹೇಬರು ತಮ್ಮ ಈ ಹಿರಿಯ ಸೊಸೆಯನ್ನು ನಿಶ್ಚಯವಾಗಿ ನಿರಾಕರಿಸಬಹುದು ; ಆದ್ದರಿಂದ ಪ್ರಹ್ಲಾದಪಂತ, ಈ ಯಾವತ್ತು, ಮಹಾರಾಷ್ಟ್ರಮಂಡಲದ ಸಮಕ್ಷ ತಮ್ಮ ಮುಂದೆ ಹೇಳುವದೇನಂದರೆ-ನಾನು ರಾಷ್ಟ್ರ ಕಾರ್ಯಕ್ಕಾಗಿ ನನ್ನ ಸುಖ-ದುಃಖಗಳನ್ನು ಮರೆತು ನಿಮ್ಮೊಡನೆ ಹೆಣಗಲಿಕೆ ಸಿದ್ಧ ಳಾಗಿರುವೆನು. ಅದೇ ನನ್ನ ಪತಿಸೇವೆಯು, ಇದೇ ನನ್ನ ಕುಲವ್ರತವು; ಆದ್ದರಿಂದ ಪಂತ, ಇನ್ನು ಮೇಲೆ ನಾನು ಸ್ವಾರ್ಥಕ್ಕಾಗಿ ಕಣ್ಣೀರು ಹಾಕಲಿಕ್ಕಿಲ್ಲ, ಉಸುರು ಗರೆಯಲಿಕ್ಕಿಲ್ಲ ! ಇನ್ನು ರಾಷ್ಟ್ರಕಾರ್ಯದಲ್ಲಿ ಪ್ರಸಂಗವಶಾತ್ ನನ್ನ ಕಣ್ಣೀರು ಉದರಬಹುದು , ನಾನು ಉಸುರ್ಗರೆಯಲೂಬಹುದು , ಸಂತೋಷದಿಂದ ಉಬ್ಬಲೂ ಬಹುದು , ಅದಕೆ ನನ್ನ ಯತ್ನ ವಿಲ್ಲ ! ಏಶೂಭಾಯಿಯವರ ಈ ದೊಡಿಸನದ, ಹಾಗು ಜಾಣತನದ ಮಾತುಗಳನ್ನು ಕೇಳಿ ಯಾವತ್ತು ಸಭಿಕರಲ್ಲಿ ಸ್ವಾಭಿಮಾನವು ಜಾಗ್ರತವಾಗಿ ಸ್ವಾಮಿಭಕ್ತಿ ಪ್ರೇರಿತ ವಾದ ಅವರ ಆವೇಶವು ಹೆಚ್ಚಿತು. ಆಗ ಧನಾಜಿಜಾಧವನು ಎದ್ದುನಿಂತು-ಅವನ ವರೇ, ತಾವು ನಿಜವಾಗಿಯೇ ನಮ್ಮೆಲ್ಲರ ಹಡೆದತಾಯಿಯು ! ಇಷ್ಟು ಜನ ಮಕ್ಕಳು ತಮ್ಮ ಸೇವಾ ತತ್ಪರರಾಗಿರುವಾಗ ತಮಗೆ ಯಾತರ ಚಿಂತೆಯಿರಬೇಕು ? ಗಾಳಿಯ ದಿಕ್ಕನ್ನು ನೋಡಿ ಪಟವನ್ನಂತು ಏರಿಸಿಯೇ ಏರಿಸುವೆವು, ಲೋಕದ ಹರ್ಷ-ಕೋಳ್ ಗಳಿಗೂ, ಸ್ತುತಿ-ನಿಂದೆಗಳಿಗೂ ಲಕ್ಷಗೊಡದೆ, ನಮ್ಮ ಸರಳಮಾರ್ಗದಂತೆ ನಾವು. ಹೋಗಬೇಕಾಗಿರುವದಷ್ಮೆ ? ಎಂದು ನುಡಿಯಲು, ಆತನ ಮಾತುಗಳು “ಒಂದು