ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನಪುಣ, ೭ ಆದ್ದರಿಂದ, ನೀವು, ಬಾಳಾಸಾಹೇಬರು, ಬೇರೆ ರಾಜಪರಿವಾರವು ರಾಯಗಡದಲ್ಲಿ ಇರ ಬೇಕು. ರಾಜಪ್ರತಿನಿಧಿಗಳಾದ ರಾಜಾರಾಮಮಹಾರಾಜರವರು ತಮ್ಮ ಪರಿವಾರ ದೊಡನೆ ಪಲ್ಲಾಳಗಡಕ್ಕೆ ಹೋಗಿ, ಅದನ್ನು ಭದ್ರಪಡಿಸಿ ಅಲ್ಲಿಂದ ರಾಜ್ಯಸೂತ್ರ ಗಳನ್ನು ಅಲ್ಲಾಡಿಸಬೇಕು , ರಾಯಗಡವು ಬಹು ಭದ್ರವಾಗಿರುವದು , ಧಾನ್ಯ ಸಂಗ್ರಹವನ, ಮದ್ದು ಗುಂಡು ಮೊದಲಾದ ಯುದ್ಯೋಪಯುಕ್ತ ಸಾಮಾನುಗಳ ಸಂಗ್ರಹವನ್ನೂ ನಾನು ಅಲ್ಲಿ ವಿಪುಲವಾಗಿ ಮಾಡಿರುವೆನು' ಔರಂಗಜೇಬನ ಲಕ್ಷ ಈಗ ಒಂದು ರಾಯಗಡದ ಮೇಲೆ ಇರುವದನು , ಇನ್ನು ಮೇಲೆ ರಾಯಗಡ-ಪಲ್ಲಾ ಭಗಡ ಈ ಎರಡರ ಮೇಲೆ ವಿಭಾಗಿಸೋಣ : ರಾಯಗಡವು ಹಾಗೂ ಆತನಿಗೆ ಹಣಿ ಯುವ ಹಾಗಿಲ್ಲ. ಪಲ್ಲಾಳಗಡಕ್ಕೆ ಆತನ ಸೈನ್ಯವು ಬಂದಕೂಡಲೆ ಮಹಾರಾಜರು ಸಲ್ಲಾಳಗಡದಿಂದ ಎರಡನೆಯ ಕಡೆಗೆ ಹೋಗಬೇಕು , ಆ ಮೇಲೆ ಆ ಎರಡನೆಯ ಕಡೆಯಿಂದ ಮೂರನೆಯ ಕಡೆಗೆ, ಮರನೆಯ ಕಡೆಯಿಂದ ನಾಲ್ಕನೆಯ ಕಡೆಗೆ ಹೀಗೆ ಔರಂಗಜೇಬನ ಸೈನ್ಯವನ್ನು ಬೇರೆ ಬೇರೆ ಕಡೆಗೆ ಎಳೆದೊಯು, ಕಡೆಗೆ ದಕ್ಷಿಣದ ಜಿಂಜಿಕೊಟಗೆ ಮಹಾರಾಜರು ದಯಮಾಡಿಸಬೇಕು. ವೀರಶ್ರೇಷ್ಠರಾದ ನೀಳೋಪಂತ, ನೀವು ಈಗ ಮುಂಗಡ ಜೆಂಜಿಕೊಟೆಗೆ ಹೋಗಿ, ಮುಂದೆ ಅಲ್ಲಿ ನಡೆಯ ಬೇಕಾಗಿರುವ ಘೋರರಣಯಜ್ಞಕ್ಕೆ ಸ್ವಾಸವಾಗಬೇಕಾಗಿರುವ ಆ ಕಾವೇರಿ ತೀರದ ಕೋಟೆಯನ್ನು ಚನ್ನಾಗಿ ಭದ್ರಪಡಿಸಿ, ಅದನ್ನು ಸರ್ವ ಸನ್ನಾಹಯುಕ್ತವಾಗಿ ಮಾಡಿರಿ. ರಣಶೂರ ಸಂತಾಜಿರಾವ, ನೀವು ನಿಮ್ಮ ಸೈನ್ಯವನ್ನು ಕಟ್ಟಿಕೊಂಡು ನಿಮ್ಮ ದುಸ್ಸಹವಾದ ಪ ರಾ ಕ ಮ ದ ತೇ ಜ ನಿ೦ ದ ಬಾದಶಹನ ಹೃದಯದಲ್ಲಿ ಕಂಪವನ್ನುಂಟುಮಾಡಿರಿ , ರಣಧುರಂಧರ ಧ ನ ಜಿ ರಾ ವ, ನಿಮ್ಮ ಹೆಸರನ್ನು ಉಚ್ಛರಿಸಿದ ಕೂಡಲೆ ಮೊಗಲ ಸೇನಾಸಮೂಹವು ಕಂಪಿಸುವಂತೆ ನಿಮ್ಮ ಪರಾಕ್ರಮ ವನ್ನು ತೋರಿಸಿರಿ , ಇನ್ನುಳಿದ ವೀರಾಗ್ರೇಸರರದ ಸಮಸ್ತ ವೀರರೇ, ನೀವೆಲ್ಲರು ಗಾಜನಿಷ್ಟಾ ಪ್ರೇರಿತರಾಗಿ ಬೇರೆ ಬೇರೆ ಕಡೆಯಲ್ಲಿ ನಿಮ್ಮ ದುಸ್ಸಹವಾದ ಪರಾಕ್ರಮ ದಿಂದ ಔರಂಗಜೇಬನ ಸೈನ್ಯವನ್ನು, ಹಸಿದ ತೋಳಗಳಂತೆ ಹರಿದು ಹಣ್ಣು ಮಾಡಿರಿ ! ನಾವೆಲ್ಲರೂ ಕೂಡಿ ಶಿವಪ್ರಭುವಿನ ಪಣದ ಪ್ರತಾಪವನ್ನು , ಅಥವಾ ಮರಾಟರ ಕೆಚ್ಚು ಗಟ್ಟದ ಎದೆಯ ವೈ ಭ ವ ವ ನ್ನು ಔರಂಗಜೇಬನಿಗೆ ಚನ್ನಾಗಿ ತೋರಿಸೋಣ ! ಯುದ್ಧಮಂತ್ರಿಯಾದ ಪ್ರಹ್ಲಾದಪಂತನ ಈ ಸ್ಫೂರ್ತಿದಾಯಕವಾದ ಮಾತು ಗಳನ್ನು ಕೇಳಿ, ದರ್ಬಾರದೊಳಗಿನ ಮಹಾರಾಷ್ಟ್ರ ವೀರರ ಖಡಗಳು ಸರಸರನೆ