ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನಪುಣ - ಆh ನ ಕಾಲದಲ್ಲಿ ನಾವೆಲ್ಲರೂ ನೆನಪಿಗೆ ತಂದುಕೊಳ್ಳುವದು ಹಿತಕರವು, ಆಬಾಸಾಹೇಬರು ಹದಿನೈದು ವರ್ಷದವರಿರುವಾಗ ಅಸಹಾಯಶೂರರಾಗಿ ಸ್ವರಾಜ್ಯ ಸ್ಥಾಪನೆಯ ಕಾರ್ಯವನ್ನು ಆರಂಭಿಸಿದರು. ಆ ಕಾಲದಲ್ಲಿ ಅವರ ಸುತ್ತು ಆದಿಲಶಾಹಿ, ಕುತುಬ ಶಾಹಿ, ನಿಜಾಮಶಾಹಿ, ಎಂಬ ಮೂರು ಬಲಾಢ ಮುಸಲ್ಮಾನ ಬಾದಶಾಹಿಗಳು ಕೈ ತೊಳಕೊಂಡು ಬೆನ್ನು ಹತ್ತಿದ್ದವಲ್ಲದೆ, ಉತ್ತರದಲ್ಲಿದ್ದ ಅತ್ಯಂತ ಬಲಾಢನಾದ ಔರಂಗ ಜೇಬ ಬಾದಶಹನು ಕಣ್ಣು ಕೆಕರಿಸಿ ಆಬಾಸಾಹೇಬರನ್ನು ನೋಡುತ್ತಿದ್ದನು ! ಇನ ರಲ್ಲದೆ ಶಾಮಲ, ಫಿರಂಗಿ, ಇಂಗ್ರೇಜಿ, ರಾಮನಗರದವರು, ಪಾಳೇಗಾರರು ಬಿದನೂ ರವರು, ಮೈಸೂರವರು, ತ್ರಿಚನಾಪಲ್ಲಿಯವರು, ಮೊದಲಾದ ಗಟ್ಟಿಗರು ಆಬಾ ಸಾಹೇಬರ ಕಾರ್ಯಕ್ಕೆ ವಿಘಕಾರಿಗಳಾಗಿದ್ದರು. ಇಷ್ಟಕ್ಕೇ ತೀರಲಿಲ್ಲ. ಸ್ವಜನ ರೊಳಗಿನ, ಚಂದ್ರರಾವಶಿರ್ಕೆ, ಸಾವಂತ, ದಳವಿ, ನಿಂಬಾಳಕರ, ಘಾಟಕೆ ಮೊದ ಲಾದ ಪೋ೩ ಸರಂಜಾಮಿನ ದೇಶಮುಖರು ಮಹಾರಾಜರ ಕಾರ್ಯಕ್ಕೆ ಅಡ್ಡಬರುತ್ತೆ ಲಿದ್ದರು; ಆದರೆ ಬುದ್ಧಿಶಾಲಿಗಳೂ, ಪರಾಕ್ರಮಿಗಳೂ ಆದ ಮಹಾರಾಜರು ಇವರೆಲ್ಲರಿಗೂ ಸೊಪ್ಪು ಹಾಕದೆ, ತಮ್ಮ ರಾಜ್ಯ ಸ್ಥಾಪನೆಯ ಕಾರ್ಯವನ್ನು ಸಾಗಿಸಿ, ಅಹಿವಂತ ದಿಂದ ಕಾವೇರಿ ತೀರದ ಜಂಜೆಯ ವರೆಗೆ ನಿಷ wಂಟಕ ರಾಜ್ಯವನ್ನು ಸಂಪಾದಿಸಿ, ಸಿಂಹಾಸನವೇರಿ ಛತ್ರಪತಿಯೆಂದು ಔರಂಗಜೇಬನಿಂದ ಹೊಗಳಿಸಿಕೊಂಡರು. ನೂರಾರು ದುರ್ಗಗಳನ್ನೂ, ಕೋಟೆಗಳನ್ನೂ, ಜಲದುರ್ಗಗಳನ್ನೂ ನಿರ್ಮಿಸಿದರ. ; ಎಷ್ಟೋ ವಿಶಾಲ ಸ್ಥಳಗಳನ್ನು ತಮ್ಮ ವಾಗಿ ಮಾಡಿಕೊಂಡರು ; ನಾಲ್ಕು ಸಾವಿರ ರಾವು ತರನ್ನೂ , ಅರವತ್ತು-ಎಪ್ಪತ್ತು ಸಾವಿರ ಶಿಲೇದಾರರನ್ನೂ, ಎರಡು ಅಕ ಕಾಲಾಳು ಗಳನ್ನೂ , ಕೋಟ್ಯವಧಿ ವರಹಗಳ ಭಾಂಡಾರವನ್ನೂ, ಬಹು ಬೆಲೆಯುಳ್ಳ ವಸ್ತ್ರಾ ಲಂಕಾರಗಳನ್ನೂ ಆ ಮಹಾತ ನು ಸಂಪಾದಿಸಿದನು. ಆ ಪುಣ್ಯವಂತ) ತೊಂಬ ತಾರು ಕುಲದ ಮರಾಟರನ್ನು ಉದ್ಧರಿಸಿದನು , ಸಂಸ್ಥಾನದಲ್ಲಿ ದೇವಬ್ರಾಹ್ಮಣ ರನ್ನು ಸ್ನಾಪಿಸಿ, ಯಜನಯಾಜನಾದಿ ಷಟ ರ್ಮಗಳನ್ನು ವರ್ಣ ಸಿಭಾಗದಂತೆ ನಡಿಸಿದನು. ರಾಜ್ಯದಲ್ಲಿ ಅನ್ಯಾಯದ ಹೆಸರು ಉಳಿಯದಂತೆ ಮಾಡಿದನು , ಬಹಳ ಹೇಳುವದೇನು? ನಮ್ಮ ಪೂಜ ಆಬಾಸಾಹೇಬರು ಹೊಸ ಸೃಷ್ಟಿಯನ್ನೇ ಮಾಡಿ ದರು! ಆ ಪ್ರತಾಪನಿಧಿಗಳು, ಔರಂಗಜೇಬನಂಥ ಬಲಾಢ ಶತ್ರುವಿನ ಪಂಗಿಯ ನು ಬಂದು ಮಾಡಿ, ದಿಗಂತ ಕೀರ್ತಿಯನ್ನು ಸಂಪಾದಿಸಿದರು. ಇಂಥ ಅವತಾರಿಕ ಕೃತ್ಯಗಳನ್ನು ಮಾಡುವಾಗ ನವ ಶಕಕರ್ತರಾದ ಅಬಾಸಾಹೇಬರು ಕೆಲವರ ಮೇಲೆ ದಂಡೆತ್ತಿ ಹೋಗಿ ಖಾಡಾಖಾಡಿ ಯುದ್ಧ ಮಾಡಿದರು; ಕೆಲವರನ್ನು ಮರೆಯ ಗಿ