ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನ ಪುಣ್ಯ , ೮೩ ಶೂರಸರದಾರರೆ, ಇನ್ನು ನೀವು ಪಾಳಗಡಕ್ಕೆ ೬ರಳಿ . ನಮ್ಮ ಯುದ್ದ ಮಂತ್ರಿ ಗಳಾದ ಪ್ರಹ್ಲಾದಪಂತ, ನೀವು ನನ್ನ ಅನಭಿಷಿಕ್ತ ರಾಜನ ದರ್ಬಾರದ ಮುಖಾಂ ತರವಾಗಿ ನಿಮ್ಮ “ ಗವಿ ಕಾವಾ ( ಹೊಂಚುಹಾಕಿ ಹೊಡೆಯುವ) ” ಯುದ್ಧದ ಆಟವನ್ನು ಆಡಿಸಿರಿ. ನಮ್ಮ ಬ್ರಾಹ್ಮಣನುತೃತ್ವಗಳಾದ ರಾಮಚಂದ್ರಪಂತ, ಇಂಥ, ಕಠಿಣಕಾಲದಲ್ಲಿ ಮಹಾರಾಷ್ಟ್ರ ರಾಜ್ಯವನ್ನು ಜಾಗರೂಕತೆಯಿಂದ ಸಾಗಿಸಿರಿ, ಭಾಂ ಡಾರದ ಸಿಲಕನ್ನು ಕಾಯಿರಿ. ಪಾಂಡವರ ಲಜ್ಜೆಯನ್ನು ಕಾಯ್ದ ಶ್ರೀ ಕೃಷ್ಣ ಪರಮಾತ್ಮಾ, ನಿನ್ನನ್ನು ನಾನು ಕಟ್ಟಕಡೆಯಲ್ಲಿ ಪ್ರಾರ್ಥಿಸುವೆನು, ಈಗ ನೀನು ಮಹಾರಾಷ್ಟ್ರರ ಲಜ್ಞಾ ರಕ್ಷಣಮಾ ಡಬೇಕು. ಈಗ ಧರ್ಮಯುದ್ದಕ್ಕಾಗಿ ಸಿದ್ಧವಾಗಿರುವ ನಮ್ಮ ಈ ಮಹಾರಾಷ್ಟ್ರ ವೀರರ ಅಭಿಮಾನವು ನಿನಗಿರಲಿ ! ದಯಾನಿಧೇ, ನೀನು ಪತಿತೋದ್ಧರಣಶೀಲನಾದ ದ್ದರಿಂದ, ಪತಿತರಾಗಿರುವ ನಮ್ಮನ್ನು ನೀನು ರಕ್ಷಿಸಬೇಕು. ಭೀಷರು ನಿಷ್ಟಾಂಡವೀ ವೃದ್ಧಿಯನ್ನು ಮಾಡುವದಕ್ಕಾಗಿಯೂ, ಜಯದ್ರಥನು ಪಾರ್ಥನನ್ನು ಯಮಸದ ನಕ್ಕೆ ಅಟ್ಟುವದಕ್ಕಾಗಿಯೂ, ಅಶ್ವತ್ಥಾಮನು ಪಾಂಡವರ ನಿರ್ವಂಶಮಾಡುವದ ಕ್ಯಾಗಿಯೂ ಪ್ರತಿಜ್ಞೆ ಮಾಡಿದಾಗ, ಭಗವನ್ , ಭಕ್ತವತ್ಸಲಾ, ಪ್ರೇಮಳಮೂರ್ತಿ ಯೇ, ಪುರುಷೋತ್ತಮಾ, ನೀನು ಗರುಡನಿಗಿಂತ ಮೊದಲೇ ಓಡಿಹೋಗಿ ಪ ದಿಯ ಮಾನವನ್ನು ಕಾಯಲಿಲ್ಲವೆ ? ಅದರಂತೆ, ಈಗ ನೀನು ನನ್ನ ಮಾನವನ್ನು ಕಾಯಬೇಕು , ಈ ಪ್ರಸಂಗದಲ್ಲಿ ನೀನು ದೌಪದಿಯ ಮಹಾ ಯೋಗ್ಯತೆಗೆ ಮಾತ್ರ ನನ್ನಂಥ ಕುತ್ರಳ ಕುದ್ರತನವನ್ನು ಹೊಲಿಸದಷ್ಟು ದೊಡ್ಡ ಮನಸ್ಸು ಮಾಡು; ಇದೇ ನನ್ನ ಪ್ರಣತಿಪೂರ್ವಕವಾದ ಪ್ರಾರ್ಥನೆಯ !! ಏಸೂಬಾಯಿಯ ಮೇಲೆ ಸಂತಾಜೆಯ ಅನಿರ್ವಾಚ್ಯವಾದ ಭಕ್ತಿಯು ಇತ್ತು. ಆತನು ತನ್ನ ಸ್ವಾಮಿನಿಯ ಈ ಹೈ ದ ಯ ೦ ಗ ಮ ವಾ ದ ಭಾಷಣವನ್ನು ಕೇಳಿ, ಉ ಕೈ ರಿ ದ ಸಾ ವಿಭಕ್ತಿಯಿಂದ-ಮಾತೃ ಶ್ರೀ , ಪ್ರಭು ರಾಜಾರಾಮಸಾಹೇಬ, ಸನ್ಮಾನನೀಯ ರಾಜಕುವರ , ಹಾಗು ಯಾವತ್ತು, ಮುತ್ಸದ್ದಿಗಳೇ , ಶೂರ ಬಂಧು ಗಳೇ, ಮಹಾರಾಷ್ಟ್ರರ ಈ ಪೂಜ್ಯ ಸಿಂಹಾಸನದ ಅಪಮಾನವನ್ನು ಅಲಮಗೀರಸು ಮಾಡಿರುವನಷ್ಟೆ ? ಅದರ ಸೇಡು ತೀರಿಸಿಕೊಂಡು, ಮಹಾರಾಷ್ಟ್ರ ರಾಜ್ಯವನ್ನು ಸಿರಗೊಳಿಸಿದ ಹೊರತು ಮಹಾರಾಷ್ಟ್ರ ವೀರರೂ, ಮುತ್ಸದ್ದಿಗಳೂ ಶಾಂತರಾಗ ತಕ್ಕದ್ದಲ್ಲ. ಅಲ್ಲಿಯವರೆಗೆ ತಮ್ಮ ಮನೆ-ಮಾರುಗಳ, ಹೆಂಡಿರು-ಮಕ್ಕಳುಗಳ, ಬಹಳವೇಕೆ? ತನು ಜೀವದ ಹಂಗನ್ನು ಸಹ ಯಾರೂ ಇಡತಕ್ಕದ್ದಲ್ಲ, ನಾನು