ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆy ಸುರಸಗ್ರಂಥಮಾಲಾ . ಭಾಗವತ ಧರ್ಮದ ಕಾಳಿಯನ್ನು ಹಿಡಿದರು ; ಇದೇ ಗಡದ ಮೇಲಿಂದಲೇ ಸಮರ್ಥರು ಸ್ವಾತಂತ್ರ ಪ್ರೀತಿಯೆಂಬ ಅಮೃತವನ್ನು ಮಹಾರಾಷ್ಟ್ರದ ಮನೆಮನೆ ಯಲ್ಲಿ ಸುರಿಸಿದರು. ಹೀಗೆ ಅತ್ಯಂತ ಮಹತ್ವದ ಕಾರ್ಯಗಳ ಉಗಮಸ್ಥಾನವೆನಿಸಿ, ಸೃಷ್ಟಿ ಸೌಂದರ್ಯದಿಂದ ನೋಡುವವರ ಮನಸ್ಸನ್ನು ಹರಣ ಮಾಡುವ ಉರ್ವಸಿ ( ಉರ್ಮೋಡೀ ) ನದಿಯ ದ ೦ ಡೆ ಯಲ್ಲಿ ರುವ ಆ ಸಜ್ಜನಗಡದ ಮಹತ್ವವನ್ನು ಎಷ್ಟು ವರ್ಣಿಸಿದರೂ ಸ್ವಲ್ಪವೇ ಇರುವದು , ಇಂಥ ಪವಿತ್ರ ದುರ್ಗವಿರುವ ಪರ್ವತವನ್ನು ಸಮರ್ಥ ಭಕ್ತರಾದ ನಮ್ಮ ರಾಜಾರಾಮಮಹಾರಾಜರೂ, ರಾಮ ಚಂದ್ರಪಂತ, ಪ್ರಾದಪಂತ, ಧನಾಜಿ, ಸಂತಾಜಿ ಮೊದಲಾದವರೂ ಭಕ್ತಿಯಿಂದ ಏರುತ್ತಿರುವಾಗ, ಅವರ ಕೃತಿಯು ಆನಂದದಿಂದ ಪ್ರಫುಲ್ಲಿತವಾಯಿತೆಂದು ನಾವು ಬರೆಯುವ ಕಾರಣವಿಲ್ಲ. ಅವರು ದುರ್ಗದ ಪ್ರವೇಶ ದ್ವಾರವನ್ನು ದಾಟಿ ಉತ್ಸಾಹ ದಿಂದ ಒಳಗೆ ಬಂದರು. - ದುರ್ಗವನ್ನು ಪ್ರವೇಶಿಸಿದ ಕೂಡಲೆ ಅವರಲ್ಲಿ ಆನಂದದ ಹೊಸ ತೆರೆಗಳು ಉತ್ಪನ್ನವಾಗಹತ್ತಿದವು - ರಾಮನಾವು ಘೋಷವು ಅವರ ಕಿವಿಗೆ ಬೀಳಹತ್ತಿತು. ಗಾಯನದ ಮಂಜುಲಧ್ವನಿಯಿಂದ ಅವರ ಮನಸ್ಸು ರಮಿಸಹತ್ತಿತು , ಕೆಲವರು ಕಾವಿಯ ವಸ್ತ್ರಗಳನ್ನು ಧರಿಸಿದವರು, ಕೆಲವರು ತಲೆಗೆ ಜರತಾರಿಯ ಪಟಕವನ್ನು ಸುತ್ತಿದವರು ಹೀಗೆ ರಾಮದಾಸಿಯ ಸಂಪ್ರದಾಯದ ಜನರು ಭೆಟ್ಟಯಾಗಹತ್ತಿದರು ಧೂಪದ ಸುಗಂಧವು ಮನಸ್ಸಿಗೆ ಆಹ್ಲಾದವನ್ನುಂಟುಮಾಡಹತ್ತಿತು. ಇಷ್ಟರಲ್ಲಿ ಭರ ಜರಿಯ ಪೊಷಾಕಿನಿಂದಲೂ, ಸುವರ್ಣಾಲಂಕಾರಗಳಿಂದಲೂ, ಹೆಗಲೇರಿಸಿದ ಧನು ವ್ಯ-ಬಾಣಗಳಿಂದಲೂ ಮಹಾಪ್ರತಾಪವನ್ನು ವ್ಯಕ್ತಗೊಳಿಸುವ ಶ್ರೀ ಸಮರ್ಥ ರಂಗ ನಾಥಸ್ವಾಮಿಗಳ ದೇದೀಪ್ಯಮಾನವಾದ ಮೂರ್ತಿಯು, ಬೆಟ್ಟದಂಥ ಕುದುರೆಯ ನೇರಿ ಎದುರಿಗೆ ಬಂದಿತು. ಕೆಲವರು ಅವರಿಗೆ ಚಾಮರಗಳನ್ನು ಬೀಸುತ್ತಿದ್ದರು, ಕೆಲವರು ಛತ್ರಗಳನ್ನು ಹಿಡಿದಿದ್ದರು. ಅವರನ್ನು ನೋಡಿದ ಕೂಡಲೆ ಪ್ರಹ್ಲಾದ ಪಂತರು ಕುದುರೆಯ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿದರು. ಕೂಡಲೆ ರಾಜಾ ರಾಮಮಹಾರಾಜರೇ ಮೊದಲಾದ ಯಾವತ್ತು ರಾ ಜ ಸ ರಿ ವಾರ ವು ಸಮರ್ಥರಿಗೆ ಸಾಷ್ಟಾಂಗ ನಮಸ್ಕಾರವನ್ನು ಮಾಡಿತು. ಆಗ ರಂಗನಾಥಸ್ವಾಮಿಗಳು ಕುದುರೆ ಯಿಂದ ಇಳಿದು , ರಾಜಾರಾಮಮಹಾರಾಜರೇ ಮೊ ದ ಲಾ ದ ವ ರ ನ್ನು ಹಿಡಿದು ಸಂತಯಿಸಿ, ಎಲ್ಲರ ಯೋಗಕ್ಷೇಮವನ್ನು ವಿಚಾರಿಸಿದರು . ಯಾವತ್ತು ಜನರು ಪದ ಪ್ರಕಲನವನ ವಾದುವದಕ್ಕಾಗಿ ಧಾನಸರೋವದಕ್ಕೆ ಹೋದರು , ಅಲಜಿ