M 90 ಶೂರಸೇನಚರಿತ್ರೆ' [ಅಂಕ ೪. M ವಿಜಯಧ್ವಜನಿಗೆ ತನ್ನ ಅಧಿಕಾರವನ್ನು ಕೊಡುವೆನು ಸಮಿ-ಈ ರಾತ್ರೆ ಭೋಜನಕ್ಕೆ ನಮ್ಮ ಮನೆಗೆ ಬರಬೇಕೆಂದು ಪ್ರಾರ್ಥಿಸುವೆನು, ತಾವು ಇಲ್ಲಿಗೆ ಬಂದದ್ದು ಬಹಳ ಸಂತೋಷ, ಶುದ್ದ ಕಪಿಗಳು. (ಹೋಗುವನು.) ಜಯಸೇನ-ಸಕಲಗುಣಸಂಪನ್ನನೆಂದು ನಮ್ಮ ಸಭಿಕರು ಹೇಳಿದ ಶೂರಸೇನನೆಂಬುವನು ಈತನೆಯೊ? ಆಹ ! ಕೋಪದಿಂದ ಸ್ಮಲ್ಪವೂ ಚಲಿಸದೆ ಇರುವ ಪ್ರಭಾವವಿದೇಯೋ ! - ದೇವದತ್ತ-ಸ್ವಾಮಿ ನಿಜ, ಆತನ ಮನಸ್ಸು ಬಹಳ ವ್ಯತ್ಯಾಸ ವಾಗಿರುವದು, ಜಯಸೇನ-ಆತನಿಗೆ ಬುದ್ದಿ ಸರಿಯಾಗಿರುವದೆ ? ದೇವದತ್ತ -ಅವರು ಏನಾಗಿರುವರೋ ಅದೇ ಆಗಿದ್ದಾರೆ. ನನ್ನ ಮನ ಸ್ಸಿಗೆ ತೋರಿದ್ದನ್ನು ನಾನು ಹೇಳಕೂಡದು. ಅವರು ಹ್ಯಾಗಿರಬೇಕೋ ಹಾಗಿಲ್ಲದಿದ್ದರೆ ಹಾಗಿರುವಹಾಗೆ ಮಾಡಲಿಯೆಂದು ದೇವರನ್ನು ಪ್ರಾರ್ಥಿ ಸುವೆನು. ಜಯಸೇನ-ಏನು ? ಪತ್ನಿಯನ್ನು ಹೊಡೆದವರುಂಟೆ ? ದೇವದತ್ತ-ಆತನು ಇಷ್ಟು ಮಟ್ಟಿಗೆ ಸುಮ್ಮನಾದರೆ ಅದೇ ಸಾಕು. ಜಯಸೇನ-ಇದು ಅವನ ಸ್ವಭಾವವೋ ಅಥವಾ ಪತ್ರಿಕೆ ನೋಡಿದ್ದ ರಿಂದ ಹೀಗಾದನೋ ? ದೇವದತ್ತ-ಅಯ್ಯೋ! ಅಯ್ಯೋ! ನಾನು ತಿಳದ್ದನ್ನು ಹೇಳತಕ್ಕದ್ದು ನನ್ನ ಸತ್ಯಕ್ಕೆ ಸರಿಯಲ್ಲ. ಅವರ ಸಂಗಡ ತಾವೇ ಹೋಗಿ ಪರೀಕ್ಷಿಸಿದರೆ ತಮಗೆ ತಿಳಿಯುವದು. ಜಯಸೇನ-ನಾನು ಈತನು ಯೋಗ್ಯನೆಂದು ತಿಳಿದು ಮೋಸಹೋದೆನು. (ಇಬ್ಬರೂ ಹೋಗುವರು.) ೧ ೨ ನೆಯ ಪ್ರವೇಶ-( ಕೋಟೆಯೊಳಗಣ ಉಪ್ಪರಿಗೆಯ ಒಂದು ಏಕಾಂತಗೃಹದಲ್ಲಿ ಶೂರಸೇನ ವಿನೀತೆಯರು ಪ್ರವೇಶಿಸುವರು. ) ಶೂರಸೇನ-ಹಾಗಾದರೆ ನೀನು ಏನೂ ಕಾಣಲಿಲವೆ ? ವಿನೀತೆ-ನಾನುಕಾಣಲೂ ಇಲ್ಲ. ಕೇಳಲೂ ಇಲ್ಲ. ನನಗೆ ಅನುಮಾ ನವೂ ಇಲ್ಲ. m
ಪುಟ:ಶೂರಸೇನ ಚರಿತ್ರೆ.djvu/೧೦೧
ಗೋಚರ