ವಿಷಯಕ್ಕೆ ಹೋಗು

ಪುಟ:ಶೂರಸೇನ ಚರಿತ್ರೆ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಐದ'ನ' ಯ ಅ೦ಕ'. ೧ ನೆಯ ಪ್ರವೇಶ - ( ದೇವದತ್ತ ರಾಷ್ಟ್ರೀಯ ಪ್ರವೇಶ ) ದೇವದತ್ತ-ಮಿತ ನೇ ! ಇದರ ಮರೆಯಲ್ಲಿ ನಿಂತಿರು. ಕತ್ತಿಯನ್ನು ಬರೆಯಿಂದ ಹಿಡಿದುಕೊಂಡೇ ಇದ್ದು ಕೆಲಸ ನೆರವೇರಿಸು, ಭಯಪಡಬೇಡ. ನಾನು ನಿನ್ನ ಬೆನ್ನ ಹಿಂದೆ ಇರುವೆನು ; ಈ ಕಾರ್ಯಮಾತ್ರ ಕೊನೆಮುಟ್ಟಿದರೆ ನಮ್ಮ ಕಾರ್ಯವೆಲ್ಲಾ ನೆರವೇರಿತು; ತಪ್ಪಿದರೆ ನಮ್ಮ ಕಾರ್ಯವೆಲ್ಲಾ ಕೆಡು ವದು; ಜೋಕೆ, ಆಲೋಚನೆಯಿಂದ ರಚಿತವಾಗಿರು. ರಾಷ್ಟ್ರೀಯ-ಅಯ್ಯಾ ಮಿತ್ರನೆ : ನೀನು ಹತ್ತರವೇ ಇರು ಕಂಡೆಯಾ, ಒಂದುವೇಳೆ ನನ್ನ ಕೈ ಹುಸಿದರೂ ಹುಸಿಯಬಹುದು, ದೇವದತ್ತ-ಇಲ್ಲಿ ನಿನ್ನ ಹತ್ತರವೇ ಇರುವೆನು, ( ಎಂದು ಮರೆಯಾಗುವನು.) ರಾಷ್ಟ್ರೀಯ -ಈ ಕಾರಮಾಡುವದಕ್ಕೆ ನನಗೇನು ಅಪೇಕ್ಷೆಯಿಲ್ಲ. ಆದರೆ ದೇವದತ್ತನು ಇದು ಅವಶ್ಯಕವಾದದ್ದೆಂದು ಅನೇಕ ಕಾರಣಗಳನ್ನು ತೋರಿಸಿರುವನು. ಹೋದರೆ ಒಬ್ಬ ಮನುಷ್ಯ ತಾನೆ ಹೋಗುವನು. ಎಲೆ ಖಡ್ಗವೆ ? ಈಚೆಗೆ ಬಾ. ( ಒರೆಯಿಂದ ಕತ್ತಿ ಹಿರಿಯುವನು ) ದೇವದತ್ತ-( ಮರೆಯಾಗಿ) ಸಾಧ್ಯವಾದಮಟ್ಟಿಗೂ ಇವನನ್ನು ಕೆರ ಳಿಸಿರುವೆನು. ಇವನು ಅವನನ್ನ ಕೊಂದರೂ ಸರಿ; ಅವನು ಇವನನ್ನ ಕೊಂದರೂ ಸರಿ; ಅಥವಾ ಇಬ್ಬರೂ ಹೋದರೂ ನನಗೆ ಲಾಭವೆ. ಹಾಗೆ ಯೆಸರಿ. ಅಗೋ ! ವಿಜಯಧ್ವಜ ಬರುವ ಧ್ವನಿ ಕೇಳುವದು. ( ವಿಜಯಧ್ವಜನ ಪ್ರವೇಶ ) ರಾಷ್ಟ್ರ ಯ-ಬಲ್ಲಿ ಬಲ್ಲೆ; ಅವನ ನಡಿಗೆಯೆ ಇದು. ನೀಚನೆ ! ನೀನು ಸತ್ತೆ. ( ಎಂದು ಹೊಡೆಯುವನು. ) ವಿಜಯಧ್ವಜ-ನಿಜ, ನನ್ನ ಮೈಯಲ್ಲಿ ವಜ್ರಕವಚವಿಲ್ಲದಿದ್ದರೆ ಹಾಗೆ ಆಗುತ್ತಿದ್ದೆ. ಒಳ್ಳೇದು, ನಿನ್ನ ಕವಚವನ್ನು ಪರೀಕ್ಷಿಸುವೆನು. ( ಎಂದು ಹೊಡವನು )