ವಿಷಯಕ್ಕೆ ಹೋಗು

ಪುಟ:ಶೂರಸೇನ ಚರಿತ್ರೆ.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

112 ಶೂರಸೇನಚರಿತ ). [ ಅಂಕ ೫. wwwv ಶೂರಸೇನ-ನಿನ್ನನ್ನು ಉಪಯೋಗಿಸಿಕೊಂಡಿರುವನೆಂದು. ಮೋಹನೆ-ಹ್ಯಾಗೆ ಅನ್ಯಾಯವಾಗಿ ? ಶೂರಸೇನ-ಹದು. ಮೋಹನೆ-ಅವನು ಹಾಗೆ ಹೇಳುವದಿಲ್ಲ. ಶೂರಸೇನ-ಇಲ್ಲ. ಸತ್ಯವಂತನಾದ ದೇವದತ್ತನು ಅವನ ಬಾಯಿ ಮುಜ್ಜೆ ದನು. ಮೋಹನೆ-ಅಯ್ಯೋ ! ಅವನು ಸತ್ತನೆ ? ಶೂರಸೇನ-ಅಯ್ಯೋ ! ನನ್ನ ಆಕ್ರೋಶಕ್ಕೆ ಅವನ ಕೂದಲುಗಳೆಲ್ಲಾ ಪ್ರಣವಾಗಿದ್ದರೆ ಚೆನ್ನಾಗಿತ್ತು. ಮೋಹನೆ-ಅಯ್ಯೋ ! ಅವನು ಮೋಸಹೋದನು. ನಾನೂ ಮೋಸ ಹೋದೆನು. ಶೂರಸೇನ-ಟೀ ಸೂಳೆ ! ನನ್ನ ಎದುರಿಗೂ ಅವನನ್ನು ಕುರಿತು ಅಳುವೆಯಾ ? ಮೋಹನೆ-ಒಡೆಯನೆ! ನನ್ನನ್ನು ಕೊಲ್ಲಬೇಡಿ, ದೇಶಾಂತರಕ್ಕಾ ದರೂ ಕಳುಹಿಸಿಬಿಡಿ. (ಏಳುವದಕ್ಕೆ ಪ್ರಯತ್ನಿ ಸುವಳು.) ಶೂರಸೇನ-ಜಾರೆ ಬೀಳು. ( ಎಂದು ನೂಕುವನು.) ಮೋಹನೆ-ಈ ರಾತ್ರೆ ಮಾತ್ರ ಬಿಡಿ ಸ್ವಾಮಿ ; ನಾಳೆ ಬೇಕಾದರೆ ಕೊಲ್ಲಿ. ಶೂರಸೇನ-ನೀನು ಪೇಚಾಡಿದರೆ- (ಗಂಟಲನ್ನು ಹಿಡಿದು ) ಮೊಹನೆ-ಸ್ವಲ್ಪ ತಾಳ, ಶೂರಸೇನ-ಆಗಿಹೋದಮೇಲೆ ತಾಳುವದೇನು. ಮೋಹನೆ-ಒಡೆಯನೆ ! ಸ್ವಲ್ಪ ತಾಳ, ದೇವರನ್ನು ಸ್ಮರಿಸುವೆನು. ಶೂರಸೇನ-ಹೊತ್ತು ವಿಶಾರಿತು. (ಎಂದು ಕೊಲ್ಲುವನು) ವಿನೀತೆ-( ತೆರೆಯಲ್ಲಿ ) ನನ್ನೊಡೆಯನೆ, ನನ್ನೊಡೆಯನೆ ! ಶೂರಸೇನ-(ಗಾಬರಿಯಾಗಿ) ಅದೇನು ಕೂಗು ? ಇನ್ನೂ ಪ್ರಾಣ ಹೋಗಿಲ್ಲವೆ? ನಾನು ಕಟುಕನಾದರೂ ಕರುಣವನ್ನು ತೋರಿಸುವೆನುಆಯ್ಯೋ! ನಿನ್ನ ಸಂಕಟವನ್ನು ನೋಡಲಾರೆ. ( ಎಂದು ಕಠಾರಿಯಿಂದ ಹೊಡೆಯುವನು.)