ವಿಷಯಕ್ಕೆ ಹೋಗು

ಪುಟ:ಶೂರಸೇನ ಚರಿತ್ರೆ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

118 ಶೂರಸೇನಚರಿತ್ರ, [ಅಂಕ ೫. MMMMMMMMMMMMMMM •wwwwww . ಟ ಟ ವಿನೀತೆ-ಮಹಾಜನಗಳೆ, ನಾನು ನಿಜವಾಗಿ ಹೇಳುತ್ತೇನೆ ; ಸುಳ್ಳಾಡು ವದಿಲ್ಲ, ಈ ಮಥನಿಗೆ ಅಂಥಾ ಯು ಸಿಕ್ಕಬಹುದೆ. ಶೂರಸೇನ-ಅಯ್ಯೋ! ವ್ಯರ್ಥವಾಗಿ ಬೆಟ್ಟಗುಟ್ಟಗಳ ಮೇಲೆ ಬಿಡುವ ಸಿಡಿಲನ್ನು ದೇವರು ಇವನಮೇಲೆ ಬಿಡಬಾರದೆ.-ಪರಮಚಂಡಾಲನೆ ! (ಎಂದು ದೇವದತ್ತನಮೇಲೆ ಬೀಳುವನು.) (ದೇವದನು ಹಿಂದಿನಿಂದ ವಿನೀತೆಯನ್ನು ಕಠಾರಿಯಿಂದ ಹೊಡೆದು ಓಡಿಹೋಗುವನು.) ವೀರವರ್ಮ-ಇವಳು ಬೀಳುತ್ತಾಳೆ. ಇವಳನ್ನು ಕೊಡದಿರಬಹುದು. ವಿನೀತೆ -ಹೌದು, ಹೌದು. ನನ್ನ ಒಡತಿಯಬಳಿ ನನ್ನನ್ನು ಮಲಗಿಸಿ. ವೀರವರ್ಮ- ಅವನು ಓಡಿಹೋದನು.-ಈಕೆ ಬಿದ್ದು ಹೋದಳು. ಮಹಾಮತಿ-ಅವನು ಬಹಳ ದೊಹಿ.ಶೂರಸೇನನ ಕೈಯಿಂದ ಕಿತ್ತುಕೊಂಡ ಆಯುಧವನ್ನು ನೀವು ಸ್ವಲ್ಪ ಹಿಡಿಯಿರಿ.-ಶೂರಸೇನನನ್ನು ಹೊರಗೆ ಬಿಡದೆ ಕಾದುಕೊಂಡಿರಿ. ನಾನು ಆ ನೀಚನನ್ನು ಹಿಡಿದುತರುವೆನು. (ಮಹಾಮತಿ ವೀರವರ್ಮ ಹೋಗುವರು.) ಶೂರಸೇನ-ನನ್ನ ವೀರತೆಯು ಹೋಯಿತು. ಅಶಕ್ತರೆಲ್ಲ ನನ್ನ ಕೈಯಾಯುಧವನ್ನು ಕಿತ್ತುಕೊಳ್ಳುವ ಹಾಗಾಯಿತು. ಸತ್ಯ ಹೋದ ಮೇಲೆ ಗೌರವದಿಂದೇನು ! ಇನ್ನು ಎಲ್ಲಾ ಹೋಗಲಿ. ವಿನೀತೆ -ಬಡತಿಯೇ ! ನೀನು ಹೇಳಿದ ಪದಕ್ಕೆ ಸರಿಯಾದ ಫಲವಾಯಿ ತಲ್ಲಾ. ನಾನು ಆ ಪದವನ್ನೆ ಹಾಡುತ್ತಾ ಸಾಯುವೆನು. ((( ಆಕೆ ಚಿತ್ರದಿ ಬಹಳ 2' ಎಂಬ ಪದವನ್ನು ಅರ್ಧ ಹೇಳಿ ) ಅಯ್ಯೋ ವಿದೇಶಿಯ ! ಆಕೆ ಮಹಾ ಪತಿವ್ರತೆ. ಕರನಾದ ನಿನ್ನಲ್ಲಿ ಬಹಳ ಪ್ರೀತಿಯಿಟ್ಟಿದ್ದಳು. ನಾನು ಹೇಳಿದ್ದೆಲ್ಲಾ ನಿಜವಾದರೆ ನನಗೆ ಸ್ವರ್ಗವಾಗಲಿ. (ಎಂದು ಪ್ರಾಣಬಿಡುವಳು.) . * ಶೂರಸೇನ-ನನ್ನದು ಇನ್ನೊಂದು ಕಠಾರಿ ಇರಬೇಕು. ಇದೆ ಇಲ್ಲೇ ಇದೆ. -ಪೂಜ್ಯರೆ ! ನಾನು ಹೊರಕ್ಕೆ ಬರಲೇಬೇಕು. ವೀರವರ್ಮ-ಆಜ್ಞೆಯನ್ನು ಮಾರಿ ನೀನು ಹೊರಕ್ಕೆ ಬಂದರೆ ತಕ್ಕೆ ಫಲವನ್ನು ಅನುಭವಿಸುವೆ ; ನೀನು ನಿರಾಯುಧನಾದ್ದರಿಂದ ಸುಮ್ಮನಿರು. ೨ m ಟ ೧