ವಿಷಯಕ್ಕೆ ಹೋಗು

ಪುಟ:ಶೂರಸೇನ ಚರಿತ್ರೆ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರವೇಶ ೨] 121 ಶರಸೇನಚರಿತ MMMMMMMMMMMMMMMMMMM (ಜಯಸೇನ, ಮಹಾಮತಿ, ಕುರ್ಚಿಯಮೇಲೆ ವಿಜಯಧ್ವಜ, * ರಾಜದೂತರಿಂದ ಅಪರಾಧಿಯಾಗಿ ಬಂಧಿಸಲ್ಪಟ್ಟ ದೇವ ದತ್ತ-ಇತರ ದೂತರೂ ಪ್ರವೇಶಿಸುವರು.) ಜಯಸೇನ-ಆ ದುರದೃಷ್ಟನಾದ ಶೂರಸೇನ ಎಲ್ಲಿ ? ಶೂರಸೇವ-ಪೂರ್ವದಲ್ಲಿ ಶೂರಸೇನನಾಗಿದ್ದವನು ಇದೆ ಇಲ್ಲಿ. ಜಯಸೇನ -ಆ ಸರ್ಪವೆಲ್ಲಿ? ಆ ದ್ರೋಹಿಯನ್ನು ಮುಂದೆ ನಿಲ್ಲಿಸಿ, ಶೂರಸೇನ-ಇವನು ಪಿಶಾಚಿಯೊ, ಮನುಷ್ಯನೂ ! ಇವನ ಕಾಲನ್ನು ನೋಡುವೆನು-ಅದೆಲ್ಲ ಕಥೆ-ಇವನು ಪಿಶಾಚಿಯಾದರೆ ಸಾಯುವದಿಲ್ಲ. (ಎಂದು ಕಠಾರಿಯಿಂದ ದೇವದತ್ತನನ್ನು ತಿವಿಯುವನು.) ಜಯಸೇನ-ಹೋ ! ! ಈತನ ಕಠಾರಿಯನ್ನು ಕಿತ್ತು ಕೊಳ್ಳಿ, ದೇವದತ್ತ-ಸ್ವಾಮಿ ನನಗೆ ಗಾಯವಾದರೂ ಅಪಾಯವಾಗಲಿಲ್ಲ. ಶೂರಸೇನ-ಎಲಾ ಪಾಪಿ ! ನೀನು ಸಾಯದೇ ಇದ್ದದ್ದೇ ನನಗೆ ಸಂತೋಷ; ಬದುಕು, ಬದುಕು, ಸಾಯುವದು ಪರಮ ಸುಖವೆಂದು ಭಾವಿ ಸುವೆನು. ಅಂಥಾ ಸುಖ ನಿನಗೆಂದಿಗೂ ಸಂಭವಿಸಬೇಡ. ಜಯಸೇನ-ಅಯ್ಯೋ ಗುಣಾಡ್ಯನಾದ ಶೂರಸೇನನೆ ! ನೀನು ಈ ಚಂಡಾಲನ ಬಲೆಗೆ ಸಿಕ್ಕಿಬಿದ್ದೆಯಲ್ಲಾ. ಲೋಕದಲ್ಲಿ ಇನ್ನು ನಿನ್ನನ್ನು ಏನೆಂದು ಕರೆಯುವರು. ಶೂರಸೇನ-ಏನೆಂತಲಾದರೂ ಕರೆಯಲಿ, ನಾನಂತೂ ಗೌರವವನ್ನು ಕಾಪಾಡುವದಕ್ಕಲ್ಲದೆ ದ್ವೇಷದಿಂದೇನೂ ಮಾಡಿದವನಲ್ಲ. ಜಯಸೇನ-ಈ ನೀಚನು ದಾರಿಯಲ್ಲಿ ತನ್ನ ತಪ್ಪನ್ನು ಸ್ವಲ್ಪ ಹೇಳಿ ರುವನು. ವಿಜಯಧ್ವಜನ ಕೊಲೆಯಲ್ಲಿ ನೀವಿಬ್ಬರೂ ಅನುಮತಿಸಿದರೆ ? ಶೂರಸೇನ-ಹೌದು. ವಿಜಯಧ್ವಜ-ಪ್ರಿಯನಾದ ದಳಪತಿಯೆ ! ನನ್ನನ್ನು ಕೊಲಿಸುವದಕ್ಕೆ ಏನೂ ಕಾರಣವಿಲ್ಲವಲ್ಲ. ಶೂರಸೇನ-ನಿಜ. ನನ್ನ ಅಪರಾಧವನ್ನು ಕ್ಷಮಿಸಬೇಕೆಂದು ನಿನ್ನನ್ನು ಪ್ರಾರ್ಥಿಸುವೆನು. (ಜಯಸೇನನಕಡೆ ನೋಡಿ) ಸ್ವಾಮಿ ? ನನ್ನ ಜೀವಾತ್ಮ