ವಿಷಯಕ್ಕೆ ಹೋಗು

ಪುಟ:ಶೂರಸೇನ ಚರಿತ್ರೆ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರವೇಶ ೨.] ಶೂರಸೇನಚರಿತ್ರೆ, 123 wwwwwwwwwwww wwwwwwwwwwMMMMMMMMMMMMMMMMMMMM ಜಯಸೇನ-ನೀನು ಇಲ್ಲಿಂದ ಹೊರಟು ನನ್ನೊಡನೆ ಬರಬೇಕು. ನಿನ್ನ ಪದವಿಯನ್ನು ವಿಜಯಧ್ವಜನು ಆಳುವನು.-ಈ ನೀಚನ ವಿಷಯದಲ್ಲಿ ಬಹಳ ಹೊತ್ತು ಜೀವಹೋಗದಂತೆ ಶ್ರಮಪಡಿಸುವ ಶಿಕ್ಷಾ ಯಂತ್ರಗಳೆಲ್ಲಾ ಇವನಿಗಾಗೆ ಸಿದ್ಧವಾಗಿವೆ. ನಿನ್ನ ಅಪರಾಧವು ರಾಜಧಾನಿಗೆ ತಿಳಿಯುವ ತನಕ ನೀನು ಸೆರೆಮನೆಯಲ್ಲಿ ಇರಬೇಕು.-ಕರಕೊಂಡು ಬನ್ನಿ. * ಶೂರಸೇನ-ಸ್ವಲ್ಪ ನಿಲ್ಲಿ. ನನ್ನದು ಒಂದು ಮಾತಿದೆ. ನಾನು ಈ ರಾಜ್ಯಕ್ಕೆ ಉಪಕಾರಿಯೆಂಬುದನ್ನು ರಾಜಧಾನಿಯವರು ಬಲ್ಲರು. ಅದು ಹಾಗಿರಲಿ-ಈ ದುಃಖಕರವಾದ ಕೃತ್ಯಗಳನ್ನು ತಿಳಿಸುವ ರಾಜಕೀಯ ಪತ್ರಿ ಕೆಯಲ್ಲಿ ನನ್ನ ಯಥಾಸ್ಥಿತಿಯನ್ನು ಬರೆಯಬೇಕು. ಶೂರಸೇನನು ಅತಿ ಪ್ರತಿಪರಸ್ಪಭಾವವುಳ್ಳವನು. ಆದರೆ ಆಲೋಚಿಸಿ ಪ್ರೀತಿಸಿದವನಲ್ಲ. ಸುಲಭವಾಗಿ ಅನುಮಾನಪಡುವನಲ್ಲ, ಅನುಮಾನ ಹುಟ್ಟಿದರೆ ಸೈರಿಸು ವನಲ್ಲ, ಮೃದುಹೃದಯನಲ್ಲದಿದ್ದರೂ ಧಾರಾಳವಾಗಿ ಕಣ್ಣೀರ ಸುರಿಸಿ ದವನು. ಅಲ್ಲದೆ :-- ಕಂದ | ಪರಿಮಿತಿ ಯಿಲ್ಲದ ಪುಣ್ಯದಿ। ಕರಕ್ಕೆ ಸಿಕ್ಕಿರ್ದ ಜೀವರತ್ನ ವನಕಟಾ | ಕುರುಬನ ತೆರದೊಳು ಗಾಜೆಂ । ದಿರದೆ ಬಿಸಾಡಿದವನೆಂದು ಬರೆವುದು ನನ್ನ೦ || ಇದಲ್ಲದೆ ಅಮರ್ಪಪಟ್ಟಣದಲ್ಲಿ ಒಬ್ಬ ನೀಚನಾದ ತುರುಕನು ನಮ್ಮ ರಾಜಧಾನಿಯು ಜನರಲ್ಲಿ ಒಬ್ಬನನ್ನು ಹೊಡೆದು ರಾಜಧಾನಿಗೆ ಅವ ಮಾನ ಉಂಟುಮಾಡಿದಾಗ ಆ ನಾಯಿಯ ಗಂಟಲನ್ನು ಹಿಡಿದು ನಾನು ಹೀಗೆ ಹಡೆದೆನು. ಕಂದ | ಯವನಾಧಮನೋರೈಂನ || kವನಿಪನಾ ಪ್ರಜೆಗಳೊಳಗದೋಲ್ವ ನನಸಿಯಿಂ॥ ತಿವಿದೆಮ್ಮ ರಾಜಧಾನಿಗೆ | ಯವಮಾನವ ಮಾಡಲವನ ನೀಪರಿ ಪೊಡದೆಂ | (ಎಂದು ಹೊಡಕೊಳ್ಳುವನು. ) ಜಯಸೇನ-ಅಯ್ಯೋ ಪ್ರಳಯಕಾಲವೆ ? ವೀರವರ್ಮ-ಆಡಿದ್ದೆಲ್ಲಾ ವ್ಯರ್ಥವಾಯಿತಲ್ಲಾ !