ವಿಷಯಕ್ಕೆ ಹೋಗು

ಪುಟ:ಶೂರಸೇನ ಚರಿತ್ರೆ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರವೇಶ ೧] ಶೂರಸೇನಚರಿತ್ರೆ, ದುರಾಲೋಚನೆಯಿಂದ ನಿರ್ಭಯವಾಗಿ ನನ್ನ ನಿದ್ರಾಭಂಗವನ್ನು ಮಾಡಿ ದೀಯೆ. ರಾಷ್ಟಿ Jಯನು-ಸ್ವಾಮಿ ! ಸ್ವಾಮಿ ! ಸುನೀತಿ-ನನ್ನ ಗೌರವ : ನನ್ನ ಪದವಿ : ಇವುಗಳಿಂದ ನೀನು ನಡೆ ಸಿದ್ದು ಕೂರಪರಿಣಾಮವಾಗುವದೆಂದು ದೃಢವಾಗಿ ತಿಳಿದಿರಬೇಕು. ರಾಷ್ಟಿ ಯನು -ಸ್ವಾಮಿ ! ಸಂತೈಸಿಕೊಳ್ಳಿ. ಸುನೀತಿ-ಕಳವು ಎಂದು ಅದೇನು ಹೇಳಿದ್ದು ? ಇದು ರಾಜಧಾನಿ. ನನ್ನ ಮನೆಯೇನು ಹಳ್ಳಿಗುಡಿಸಲಲ್ಲ. ರಾಷ್ಟಿ ಯನು - ಎಲೈ ! ಸೌಮ್ಯತಮರಾದ ಸುನೀತಿಗಳೇ ! ಈ ವಿಷಯದಲ್ಲಿ ನನ್ನನ್ನು ನಿಷ್ಕಪಟಿಯನ್ನಾಗಿ ಭಾವಿಸಿ. ದೇವದತ್ತನು-ಯಾವದೋ ಒಂದು ಪಿಶಾಚಿಯು ತನ್ನನ್ನು ಕುರಿತು ದೇವರನ್ನು ಸೇವಿಸಿ ಎಂದರೆ, ದೇವರ ಸೇವೆಯನ್ನೇ ಬಿಡುವಂತವರು ತಾವು. ನಾವು ನಿಮಗೆ ಒಳ್ಳೇದನ್ನು ಮಾಡುವದಕ್ಕೆ ಒಂದದ : ನಮ್ಮನ್ನು ನೀವು ಧೂರ್ತರೆಂದು ಎಣಿಸಿದ್ದೂ : ನಿಮ್ಮ ಮಗಳಿಗೆ ಕುದುರೆಯಕೂಟವನ್ನು ಮಾಡಿಸುವದು. ಸುನೀತಿ-ನೀನು ಎಂತಾ ನೀಚನು ? ದೇವದತ್ತನು-ಸ್ವಾಮಿ ! ನಾನು ತಮ್ಮ ಮಗಳ ವಿದೇಶಿಯ ಕೂಗಿದ್ದನ್ನು ಹೇಳುವದಕ್ಕೆ ಬಂದಂತಾ-- ಸುನೀತಿ-ನೀನು ಪಾಪಿ. ದೇವದತ್ತನು-ತಾವು-ಮಂತ್ರಿ ಶ್ರೇಷ್ಠರು. ಸುನೀತಿ-ಎಲೈ ರಾಪ್ಪಿಯನೆ ! ಈ ವಿಷಯದಲ್ಲಿ ನೀನು ಶಿಕ್ಷೆಗೆ ಗುರಿಯಾಗಬೇಕಾಗಿದೆ. ನಿನ್ನನ್ನು ಚೆನ್ನಾಗಿ ಬಲ್ಲೆ, ರಾಷ್ಟಿ ಯನು-ಸ್ವಾಮಿ ! ನಾನು ಯಾವಶಿಕ್ಷೆಗಾದರೂ ಗುರಿಯಾಗು ತೇನೆ. ನಾನು ಹೇಳುವದನ್ನು ಲಾಲಿಸಿ, ಸುಂದರಿಯಾದ ತಮ್ಮ ಪುತ್ರಿಯು ಅರ್ಧರಾತ್ರಿಯಲ್ಲಿ, ಅಕಾಲದಲ್ಲಿ ಯಾರೂ ಅರಿಯದಂತೆ, ಪರಿಜನಗಳನ್ನು ಕೂಡ ಬಿಟ್ಟು, ಕೂಲಿ ಅಂಬಿಗನೊಬ್ಬನ ಸಂಗಡಲೇ, ವಿದೇಶಿಯಾದ ವಿಟ ನನ್ನು ಆಲಿಂಗಿಸುವದಕ್ಕೆ ಹೋದಳು. ಇದು ತಮ್ಮ ಆಲೋಚನೆಗೆ ತೃಪ್ತಿ ಬ.