ವಿಷಯಕ್ಕೆ ಹೋಗು

ಪುಟ:ಶೂರಸೇನ ಚರಿತ್ರೆ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶೂರಸೇನಚರಿತೆ : {ಅಂಕ ೧. MMMMMMMMMMMMMMMMMMMMMMMMMM ಬ ಕರವಾಗಿ, ತಮ್ಮ ಅನುಮತಿಯನ್ನು ಹೊಂದಿದ್ದರೆ, ನಾವು ಮಾಡಿದ್ದು ಮಹಾಪರಾಧವೇ ಸರಿ. ತಾವು ಮಾತಾಡುವದನ್ನು ನೋಡಿದರೆ ತಾವು ಒಪ್ಪಿದಹಾಗೇ ತೋರುತ್ತೆ. ಹಾಗೆ ತಾವು ಒಪ್ಪದೆ ಇದ್ದಲ್ಲಿ, ನನ್ನ ತಿಳುವ ಆಕೆಗೆ ತಾವು ನಿಂದಿಸುವದು ಅನ್ಯಾಯವೆಂದು ತೋರುತ್ತೆ. ತನ್ನಂತಾ ಪೂಜ್ಯರೊಡನೆ ಮರಾದೆಯನ್ನೆಲ್ಲಾ ಬಿಟ್ಟು ಹುಡುಗಾಟವಾಡೇನೆ ? ಹಾಗೆಂ ದಿಗೂ ಎಣಿಸಬೇಡಿ. ತಮ್ಮ ಅನುಮತಿಯಿಲ್ಲದೆ ತಮ್ಮ ಮಗಳು ಈ ಕಾರವನ್ನು ನಡೆಸಿದ್ದಲ್ಲಿ ಇದು ದೊಡ್ಡ ಅಕೃತ್ಯವೇ ಸರಿ. ಅಯ್ಯೋ ! ತನ್ನ ಸೌಂದರವನ್ನೂ ಮಂತೋನ್ನತಿಯನ್ನೂ ಮತ್ತು ತನ್ನ ಸುಶಿಲತೆ ಯನ್ನ ಪರಾಲೋಚಿಸದೆ, ಅವಿವೇಕದಿಂದ, ಊರೂರು ಸುತ್ತುವ ಒಬ್ಬ ವಿದೇತಿಯ ಪಾಲಾದಳು. ಮೊದಲು ತಮ್ಮ ಮನಸ್ಸಿಗೆ ನಿಸ್ಸಂಶಯವಾದ ನಂಬುಗೆಯನ್ನು ತಂದುಕೊಳ್ಳಿ. ನಿಮ್ಮ ಮಗಳೇನಾದರೂ ನಿಮ್ಮ ಮನೆ ಯಲ್ಲಿ ದಲಿ ನಿನ್ನನ್ನು ಮೆಸಪಡಿಸಿದ್ದಕ್ಕೆ ಸಕಲವಾದ ದಂಡನೆಗೂ ನನ್ನನ್ನು ಗುರಿಮಾಡಿ, - ಸುನೀತಿ-ಅದಾರು ? ದೀಪವನ್ನು ಹಚ್ಚಿ ತೆಗೆದುಕೊಂಡು ಬನ್ನಿ. ನಮ್ಮ ಜನಗಳನ್ನೆಲ್ಲಾ ಎಬ್ಬಿಸಿ, ನನ್ನ ಕನಸೂ ಈಗ ನಡೆದ ಕಾರವೂ ಒಂದೇಯಾಗಿರುವುದು. ನಿರ್ಣಯಿಸುವದಕ್ಕೆ ಮೊದಲೆ ನನ್ನ ಹೃದಯದಲ್ಲಿ ನಿಜವಾಗಿ ನಡೆದಂತೆ ಕಳವಳ ವಾಗುತ್ತೆ, ಎಲ್ಲಿ ದೀಪ ! ಎಲ್ಲಿ ದೀಪ ? | (ಒಳಗೆ ಹೋಗುವನು.) ದೇವದತ್ತನು-ಈಗ ನಾನು ಹೋಗುವೆನು. ಇಲ್ಲಿ ನಾನು ಇರ ಕೂಡದು. ಒಂದುವೇಳೆ ಇದ್ದಲ್ಲಿ ಆ ವಿದೇತಿಗೆ ವಿರೋಧವಾಗಿ ನನ್ನನ್ನು ಸಾಕ್ಷಿಗೆ ಕರೆಯುವರು. ಅದು ನನಗೆ ತಕ್ಕದ್ದಲ್ಲ. ನನ್ನ ಪದವಿಗೂ ಹಾನಿಕರವಾಗುವದು. ಯಾಕೆಂದರೆ, ಇದರಿಂದ ಆ ವಿದೇತಿಯ ಸಂತೋ ಸಕ್ಕೆ ಸ್ವಲ್ಪ ಕುಂದುಂಟಾದರೂ, ಅವನನ್ನು ಈ ರಾಜಾಂಗದವರು ಅನ ಪಾಯವಾಗಿ ತೆಗೆದು ಹಾಕಲಾರರು. ಈಗ ನಡೆಯತಕ್ಕ ಸಿಂಹಳ ಯುದ್ದಕ್ಕೆ ಈತನೇ ಹೊರಡಬೇಕೆಂದು ಪ್ರಜೆಗಳೆಲ್ಲಾ ಒಗ್ಗಟ್ಟಾಗಿ ಉದ್ಭವಿಸು ತಿರುವರು, .ಇವನಲ್ಲದೆ ತನ್ನ ಕಾರನಿರ್ವಾಹಕ್ಕೆ ತಕ್ಕ ಇನ್ನೊಬ್ಬ ಯುದ್ಧ ವಿಶಾರದನನ್ನು ಸಂಪಾದಿಸಲಾರರು. ಇದನ್ನೆಲ್ಲಾ ನೋಡುವಲ್ಲಿ @ ೧ ಪ