ವಿಷಯಕ್ಕೆ ಹೋಗು

ಪುಟ:ಶೂರಸೇನ ಚರಿತ್ರೆ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವm 18 ಶೂರಸೇನಚರಿತ ), (ಅಂಕ ೧. ಶೂರಸೇನ-ಆಕೆಯ ತಂದೆಯು ಯಾವಾಗಲೂ ನನ್ನಲ್ಲಿ ಪ್ರೀತಿಸುತ್ತಿ ದ್ದನು. ಮತ್ತು ಪದೇಪದೆ ನನ್ನನ್ನು ಕರೆಯಿಸುತ್ತಿದ್ದನು. ಯುದ್ಧದಲ್ಲಿ ನಾನು ಹಾಕಿದ ಮುತ್ತಿಗೆಗಳನ್ನೂ, ನನಗೆ ಬಂದ ಹಾನಿವೃದ್ಧಿ ಮೊದಲಾದ ನನ್ನ ಚರಿತ್ರೆಯನ್ನೆಲ್ಲಾ ಕೇಳುತ್ತಿದ್ದನು. ಆತನಿಗೆ ಬಾಲ್ಯಾರಭ್ಯವಾಗಿ ನಾನು ನಡೆಸಿದ ಕಾಠ್ಯಗಳನ್ನೆಲ್ಲಾ ಕೊನೆತನಕ ಹೇಳುತ್ತಿದ್ದನು. ಅವೇ ನೆಂದರೆ: ಕೇಳುವವರಿಗೆ ರೋಮಾಂಚವುಂಟಾಗುವಂತೆ ಭೂಮಿಯಮೇಲೂ, ಸಮುದ್ರದಮೇಲ, ನಾನು ನಡೆಸಿದ ಯುದ್ಧಗಳಲ್ಲಿ ಸಂಭವಿಸಿದ ಅಪಾಯ ಗಳು; ಕೋಟೆಗೆ ಮುತ್ತಿಗೆ ಹಾಕುವಾಗ ನಾನು ಕೂದಲುಮೊನೆಯಷ್ಟರಲ್ಲಿ ತಪ್ಪಿಸಿಕೊಂಡು ಉಳಿದದ್ದು; ನೀಚ ಶತ್ರುಗಳ ಕೈಗೆ ನಾನು ಸಿಕ್ಕಿದ್ದು ! ಅವರು ನನ್ನನ್ನು ಆಳುವಾರು ಮಾರಿದ್ದು ; ಅಲ್ಲಿಂದ ಬಿಡಿಸಿಕೊಂಡದ್ದು; ಮತ್ತು ಭ ಯಂಕರವಾದ ಮಹಾಗುಹೆಗಳನ್ನೂ, ಬೆಳೆಯಿಲ್ಲದ ಕಗ್ಗಾಡುಗಳನ್ನೂ, ಆಕಾ ಶವನ್ನು ಮುಟ್ಟುವ ಪರ್ವತಗಳನ್ನೂ, ಮನುಷ್ಯರನ್ನೇ ತಿನ್ನುವ ಮನುಷ್ಯ ರನ್ನೂ ಮತ್ತು ಭುಜಗಳ ಕೆಳಗೆ ತಲೆಗಳುಳ್ಳ ಮನುಜರನ್ನೂ ನೋಡಿದ್ದು : ಮೊದಲಾದುದನ್ನೆಲ್ಲಾ ಹೇಳುತ್ತಿದ್ದೆನು. ಆ ಕಾಲದಲ್ಲಿ ಮೊಹನೆಯು ಕಂದ | ಜನಕನ ಬಳಿಯೋಳ ಕುಳ್ಳಿ ! ರ್ದನುರಾಗದೆ ಕೇಳಳ್ಳೆದೆ ಮನೆಗೆಲಸಂ ಬೇ 1 ಗನೆ ಮಾಡಿ ಬಂದು ಪೀರ್ದ೪ || ಮನದೊಲವಿಂ ಕಿವಿಯಿ ನನ್ನ ಕಥನಾಮೃತಮಂ | *ವೃತ್ತ || ಆನುರಾಗಂ ಮಿಗೆ ಚಿತ್ತದೋ೪ ಸಮಯಮಂ ಪಾರ್ದನಿ ನ್ಯೂ ರ್ಮೈಪೇ | ಳೆನಗಾದ್ಯಂತಮುಮಂ ಭವತ್ಕಥೆಯನೆಂದಳ' ಮತ್ತಮೆನ್ನ ಚೌ ಚೌ || ವನದೊಳ' ಸಂಗಡಿಸಿರ್ದ್ದ ಸಂಕಟಕೆ ನೀಡುಂ ಸುಯ್ದು ನೀರೇರುಹಾ। ನನೆ ತಂದಳ' ನಿಡುಗಣ್ಣಳಲ್ಲಿ ಪಲವುಂ ಸೂಳಾಕೆ ಬಾಷ್ಪಾಂಬುವಂ | * ರಾಗ-... ಜಲಾಬ' 1). ೧ ಆ- ಛಾಪುತಾಳ || ಎ ವಿಜಯ ಕಥೆ | ಯನ್ನರೆ ಕೇಳಲಾ 1 ಕನ್ನೆ ಯಿದಚ್ಚರಿ | ಯನ್ನು ತಾಡಿದಳು!೧೧ ಕೂರವಾದೆನ್ನ ಸಂ | ಚಾರದ ಕಷ್ಟಕ | ನೀರಜಾಕ್ಷಿಯು ಕ ಣ್ಣೀರಸುರಿದಳು||೨| ಬಿಸಜಾಂಬಕಿ ನಿ | ಟೈು ಸುರನು ಬಿಡುತಲಿ | ಪೊಸತಿದೆನ್ನು ತ ತಾನೊಸೆದುಸುರಿದಳು ಧರೆಯೊಳಗಿ೦ತಹವರಸ ನನಗೆ ವಿಧಿವಿರಚಿಸಿ ಕರುಣೆಯೆಂ | ದೊರೆದಳು ನಲವಿಂ೪|| ಚೆನ್ನನೆ ಕೇಳುತ | ಲೆನ್ನಯ ಬನ್ನ ಕಾ | ಕನ್ನೆ ಕೃತಜ್ಞೆಯಾ | ನನ್ನು ತಾಡಿದಳು ೫| m