ಪ್ರವೇಶ ೩.] ಶೂರಸೇನಚರಿತ ' 19 ವ ವೃತ | ಇದು ತಾನಚ್ಚರಿ ನೀಡುಮಚ್ಚರಿಯಿದೆಂದ೪ ಶೋಚನೀಯಂಗಡಿol ತಿದು ಕೇಳಲ್ಕತಿಶೋಚನೀಯಮಿದುಮೆಂದ೪ ಕೇಳೆ ನಾನೇತಕಿ೦ || ತಿದನೆಂದ೪ ವಿಧಿ ಯಿಂತುಟಪ್ಪ ವರನಂ ಕೈಗೂಡಿಸಲಾದ | ಳ್ಳಿದನೆಂದಳ' ವಲಯಾಂ ಕೃತಜ್ಞೆ ನಿನಗೆಂದ೪ ಪೇಳಿದಾಯಾಸಕ೦ll ಕಂದ | ನಿಂನ ಸಖ ನಾವನಾ ದೊಡ | ಮೆಂನಂ ಮನಮೋಜಿ ವರಿಸಲೆಳಸಿ ದೊಡಾತಂ | ಗಿಂನೇಂ ಬೇಡೀ ಪರಿ ಕಥೆ | ಯಂನೆರೆ ವೇಳ್ಳು ದುಮನಾದೊಡಂ ಕಲಿಸೆಂದ೪ || ನನ್ನ ಕಷ್ಟಕ್ಕೆ ನನ್ನಲ್ಲಿ ಅವಳಿಗೆ ದಯೆಯುಂಟಾಗಿ ವರಿಸಿದಳು. ನನ್ನ ವಿಷಯದಲ್ಲಿ ಅವಳಿಗುಂಟಾದ ಮರುಕವನ್ನು ನೋಡಿ ಅವಳಲ್ಲಿ ನಾನು ಪ್ರೀತಿಸಿದೆನು. ಇದೀಗ ನಾನು ಮಾಡಿದ ಮಾಟ. ಇದೋ ಆಕೆಯ ಬರುವಳು. ಇದಕ್ಕೆ ಅವಳ' ಸಾಕ್ಷಿ, (ಮೋಹನೆಯೂ, ದೇವದತ್ತನೂ, ಪರಿಜನರೂ ಪ್ರವೇಶಿಸುವರು.) ರಾಜ-ಈ ಕಥೆಯು ನನ್ನ ಮಗಳ ಮನಸ್ಸನ್ನು ಕೂಡ ಅಪಹರಿಸೀತು. ಸೌಮ್ಯರಾದ ಸುನೀತಿಗಳೇ ! ಕಾರವು ಕೈಮೀರಿ ಹೋದಮೇಲೆ ಇದ್ದದ್ದ ರಲ್ಲಿ ತೃಪ್ತಿ ಹೊಂದಬೇಕು. ಸುಭಟರು ಬರಿ- ಕೈಯೊಳಿರುವದಕ್ಕಿಂತಲೂ ಮುರಿದಾಯುಧವನ್ನಾದರೂ ಉಪಯೋಗಿಸಿಕೊಳ್ಳುವರು. ಸುನೀತಿ -ಸ್ಪಲ್ಪ ತಮ್ಮನ್ನು ಪ್ರಾರ್ಥಿಸುವೆನು. ಅವಳು ಮಾತಾ ಡಲಿ. ಈತನು ಹೇಳಿದ್ದರಲ್ಲಿ ಅರ್ಧವನ್ನಾದರೂ ಆಕೆ ಒಪ್ಪಿದಲ್ಲಿ ಇನ್ನು ಅವನಲ್ಲಿ ನಾನು ತಪ್ಪುಹೊರಿಸಿದರೆ ದೇವರು ನನ್ನನ್ನು ಶಿಕ್ಷಿಸಲಿ-ಯೋಗ್ಯ ಯರಾದ ಕುಮಾರಿಯರೇ ! ಇತ್ತ ಬನ್ನಿ, ಈ ಮಹಾಸಭೆಯಲ್ಲಿ ಯಾರಲ್ಲಿ ನೀವು ಬಹಳ ವಿಧೇಯತೆಯಿಂದ ಇರಬೇಕು, ಅದನ್ನು ಬಲ್ಲಿರಾ ? ಮೋಹನೆ-ಪೂಜ್ಯರಾದ ತಂದೆಗಳೇ ! ಇಲ್ಲಿ ನನಗೆ ಉಭಯತ್ರ ವಿಧೇ ಯತೆ ತೋರುವದು. ಜನ್ನಿಸಿದ್ದಕ್ಕೆ, ವಿದ್ಯಾ ಬುದ್ಧಿ ಮೊದಲಾದ್ದನ್ನು ಕಲಿ ನಿದ್ದಕ್ಕೂ ತಮ್ಮಲ್ಲಿ ನಾನು ವಿಧೇಯತೆಯಿಂದಿರಬೇಕು. ಇದುವರೆಗೂ ತಮ್ಮ ಮಗಳಾಗಿದ್ದೆ. ಈಗ ಇಲ್ಲಿ ನನ್ನ ಪತಿಯಿರುವನು. ಆದುದರಿಂದ ನನ್ನ ತಾಯಿಯು ತನ್ನ ತಂದೆಗಿಂತಲೂ ಹೆಚ್ಚಾಗಿ ತಮ್ಮಲ್ಲಿ ಹ್ಯಾಗೆ ವಿಧೇಯ ಒs em |
ಪುಟ:ಶೂರಸೇನ ಚರಿತ್ರೆ.djvu/೩೦
ಗೋಚರ