26 ಶರಸೇನಚರಿತ್ರೆ, [ಅಂಕ ೧. MMMMMMMMMMMMMMM ಅನಿಶ್ಚನಿವೃತ್ತಿ. ಕಾಲವು ಇನ್ನೂ ಅನೇಕ ಕಾರಗಳನ್ನು ಗರ್ಭೀಕರಿಸಿ ಕೊಂಡಿದೆ. ಮುಂದೆ ಪ್ರಕಾಶಕ್ಕೆ ಬರುವುದು, ನಡೆ ! ಹೋಗು ! ಹಣಾ ಸಿದ್ಧಪಡಿಸಿಕೊ. ಇನ್ನು ನಾಳೆ ಈ ವಿಷಯವಾಗಿ ಹೇಳತಕ್ಕದ್ದು ಬಹಳ ವಿದೆ. ಹೋಗಿ ಬಾ ? ರಾಷ್ಟ್ರ ಯ-ನಾಳೆ ನಾವೆಲ್ಲಿ ಸೇರೋಣ ? ದೇವದತ್ಯ-ನಮ್ಮ ಮನೆಯಲ್ಲಿ. ರಾಷ್ಟಿ ಯ-ನಾನು ಹೊತ್ತಿಗೆ ಮುಂಚೆ ಬರುವೆನು. ದೇವದತ್ತ-ಆಗಲಿ, ಹೋಗಿ ಬಾ ! ( ರಾಷ್ಟಿ ಯನು ಹೋಗುವಷ್ಟರಲ್ಲಿ ) ರಾಷ್ಟ್ರ ಯನೇ ? ಸ್ವಲ್ಪ ನಿಲ್ಲು. ರಾಷ್ಟ್ರೀಯ-ಏನು ಹೇಳಿದೆ ? ದೇವದತ್ತ-ಬಾವಿಗೆ ಬೀಳುವದನ್ನು ಮಾತ್ರ ಬಿಡು, ತಿಳಿಯಿತೋ? ರಾಷ್ಟ್ರ ಯ-ಇಲ್ಲ. ಈಗ ನನ್ನ ಮನಸ್ಸು ತಿರುಗಿರುವದು, ನನ್ನ ಸರ್ವಸ್ವವನ್ನೂ ಮಾರಿಬಿಡುವೆನು. ದೇವದತ್ತ-ಒಳ್ಳೇದು, ಹೋಗಿ ಬಾ ! ಬೇಕಾದಷ್ಟು ಹಣವನ್ನು ತೆಗೆ ದುಕೊಂಡು ಬಾ ! (ರಾಷ್ಟಿ ಯನು ಹೋಗುವನು.) ದೇವದು-ಇಂತಾ ಮಢರೇ ನನ್ನ ಬೊಕ್ಕಸದ ಭಂಡಾರಗಳು. ಪ್ರಯೋಜನವಿಲ್ಲದೆ ಇಂತಾ ಬೆಪ್ಪರ ಸಂಗಡ ನಾನು ಕಾಲಕ್ಷೇಪಮಾ ಡುವದಾದರೆ, ಗಳಿಸಿದ ನನ್ನ ವಿದ್ಯವೆಲ್ಲ ಅನರ್ಥವಾಗುವದಲ್ಲವೆ ? ವಿದೇಶಿ ಯಲ್ಲಾದರೋ ನನಗೆ ತುಂಬಾ ಪವಿರುವುದು. ಇದಲ್ಲದೆ ಅವನು ನನ್ನ ಹಾಸಿಗೆಯನ್ನು ಮೆಟ್ಟಿದ್ದನೆಂಬ ಸಮಾಚಾರವುಂಟು. ಅದು ನಿಜವೋ ಅಲ್ಲವೋ ನನಗೆ ತಿಳಿಯದು. ನಾನಂತು ಅದನ್ನು ನಿಜವೆಂದೇ ತಿಳಿದು ಅದಕ್ಕೆ ತಕ್ಕುದನ್ನು ಮಾಡುವೆನು. ಅವನಿಗೆ ನನ್ನಲ್ಲಿ ಬಹಳ ಗೌರವವಿದೆ. ಆದುದರಿಂದ ಅವನಲ್ಲಿ ನನ್ನ ಪ್ರಯತ್ನವು ಸುಲಭವಾಗಿ ಸಾಗುವುದು, ವಿಜಯಧ್ವಜನಾದರೋ ಯೋಗ್ಯನು-ಆಗಲಿ ನೋಡೋಣ-ಅವನ ಪದವಿ ಯನ್ನು ಕಿತ್ತುಕೊಳ್ಳುವದು ಒಂದು: ನನಗೆ ಶೇಖರ ಬರುವದು ಒಂದು: ಒಂದರಿಂದ ಎರಡು ಲಾಭವಾದಂತಾಗುವುದು. ಅದು ಹ್ಯಾಗೆ ? ಒಳ್ಳೇದು, ನೋಡೋಣ-ಸಮಯ ನೋಡಿ ನಿನ್ನ ಹೆಂಡತಿಯು ವಿಜಯಧ್ವಜನಲ್ಲಿ ನಡೆ $ |
ಪುಟ:ಶೂರಸೇನ ಚರಿತ್ರೆ.djvu/೩೭
ಗೋಚರ