ಪ್ರವೇಶ ೧.} ಶೂರಸೇನಚರಿತೆ . 32 M ವೀಣೆಯ ಬಿರಡೆಯನ್ನು ತಿರುಗಿಸಿ ಅಪಸ್ಸರವನ್ನು ಹೊರಡಿಸದೇ ಇದ್ದರೆ, ನಾನು ಸತ್ಯವಂತನೇ ಅಲ್ಲ. * ಶೂರಸೇನ-ಬನ್ನಿ, ಕೋಟೆಗೆ ಹೋಗೋಣ, ಮಿತ್ರರೇ ? ಬಂದು ವರ್ತಮಾನ ಹೇಳ ಬೇಕಾಗಿದೆ. ನಮ್ಮ ಯುದ್ದ ಪ್ರಸಕ್ತಿ ನಿಂತುಹೋಯಿತು. ತುರುಕರು ಸಮುದ್ರದಲ್ಲಿ ಮುಳುಗಿಹೋದರು. ನಮ್ಮ ಪುರಾತನ ಸ್ನೇ ಹಿತರು ಕ್ಷೇಮದಿಂದಿರುವರೆ ? ಓ, ಇನಿಯಳೇ ! ಈ ಸಿಂಹಳ ದ್ವೀಪದವರು ನಿನ್ನನ್ನು ಬಹಳ ಆದರಿಸುವರು. ಯಾತಕ್ಕೆಂದರೆ, ಇವರು ಪೂರ್ವದಲ್ಲಿ ನನ್ನಲಿ ಬಹಳವಾಗಿ ವಿಶ್ವಾಸವನ್ನು ತೋರಿಸಿರುವರು. ನನ್ನ ಸಂತೋಷ ದಲ್ಲೇ ದೃಷ್ಟಿಯಿಟ್ಟು ಔಚಿತ್ಯವನ್ನು ಮರೆತು ಬಹಳವಾಗಿ ಗಳ ಪುವೆನು. ಗುಣಾಡ್ಯನಾದ ದೇವದತ್ತನೇ ? ನೀನು ಹಡಗಿನ ನಿಲ್ಲ ಡೆಲ್ಲಿಗೆ ಹೋಗಿ, ನನ್ನ ಸಾಮಾನುಗಳನ್ನು ತೆಗೆಯಿಸು. ನಾವಿಕರ ಮುಖ್ಯನನ್ನು ಕೋಟೆಗೆ ಕರೆದುಕೊಂಡು ಬಾ. ಅವನು ಬಹು ಸಮರ್ಥನು. ಆತನು ಮನ್ನಣೆನಾ ಡುವುದಕ್ಕೆ ಯೋಗ್ಯನು. ಮೋಹನೆ ? ಬಾ, ಹೋಗೋಣ, ಎಲೈ, ಪುರಜ ನರೇ ! ಈ ಸಿಂಹಳ ದ್ವೀಪದಲ್ಲಿ ನಾವು ಸೇರಿದ್ದು ಬಹು ಸಂತೋಷಕರ ವಾಯಿತು. (ಶೂರಸೇನನೂ, ಮೋಹನೆಯ, ಪರಿಜನರೂ ಹೋಗುವರು.) ದೇವದತ್ತ-ರಾಷ್ಟ್ರೀಯನೇ ! ನೀನು ಸ್ವಲ್ಪ ಹೊತ್ತಿನಮೇಲೆ ಸಮು ದ್ರದ ದಡದಲ್ಲಿರುವ ನನ್ನನ್ನು ಎಂದು ಕಾಣು. ಇಲ್ಲಿ ಬಾ, ನಿನಗೆ ಶರತ್ ವುಂಟಾಗಿದ್ದರೆ ಹೇಳುವುದನ್ನು ಕೇಳು. “ ಕಾಮಾತುರಾಣಾಂ ನಭಯಂ ನಲಜಾ” ಎಂಬದಾಗಿ ಹೇಳಿರುವರಲ್ಲವೆ ? ಈ ರಾತ್ರಿ ವಿಜಯಧ್ವಜನು ಕಾವಲುಗಾರರ ನೋಡಿಕೊಳ್ಳುವುದಕ್ಕೆ ಎಚ್ಚರದಿಂದಿರುವನು. ಮೊದಲು ಇದನ್ನು ನಿನಗೆ ಹೇಳಬೇಕಾಗಿದೆ ; ಮೋಹನೆಯು ಅವನಲ್ಲಿ ಪ್ರೀತಿಸಿರುವ ವಿಷಯದಲ್ಲೇನೂ ಸಂಶಯವಿಲ್ಲ. ರಾಷ್ಟ್ರ ಯ-ಅವನಲ್ಲಿ ! ಹಾಗೆಂದಿಗೂ ಇರಲಾರದು. ದೇವದತ್ತ-ಸ್ವಲ್ಪ ಬಾಯುಜ್ಜಿಕೊಂಡು ಹೇಳುವ ಬುದ್ದಿ ವಾದಗ ಳನ್ನು ಕೇಳು, ಅವಳು ಆ ವಿದೇತಿಯನ್ನು ಮೊದಲು ವರಿಸಿದ್ದು ಯಾತಕ್ಕೆ? ವಿಚಿತ್ರವಾದ ಸುಳ್ಳುಗಳನ್ನು ಹೇಳಿ, ಬಾಯಿಗೆ ಬಂದಹಾಗೆ ಹರಟಿದ್ದಕ್ಕೆ. ಜ ೬ ಒs
ಪುಟ:ಶೂರಸೇನ ಚರಿತ್ರೆ.djvu/೪೮
ಗೋಚರ