ವಿಷಯಕ್ಕೆ ಹೋಗು

ಪುಟ:ಶೂರಸೇನ ಚರಿತ್ರೆ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

38 ಕೂರಸೇನಚರಿತ' [ಅಂಕ ೨. inwwwwwwwww m ೧ M ೨ ಇನ್ನೂ ಆ ಹರಟೆಗೆ ಪ್ರೀತಿಸಿರುವಳಂದು ವಿಚಾರಯುಕ್ತನಾದ ನಿನ್ನ ಮನ ಸ್ಪಿನಲ್ಲಿ ಎಂದಿಗೂ ನಂಬಬೇಡ. ಮುಖ್ಯವಾಗಿ ಆಕೆಗೆ ನೇತ್ರಾನಂದ ಬೇಕಾದದ್ದು, ಆ ಪಿಶಾಚಿಯನ್ನು ನೋಡುವದರಲ್ಲಿ ಅವಳಿಗೆ ಏನು ಸಂತೋಷವಾದೀತು ? ಕಾಮಾತುರತೆ ಶಾಂತವಾದ ಮೇಲೂ ಪ್ರೀತಿಯುಂ ಟಾಗಬೇಕಾದರೆ ರೂಪು, ವಯಸ್ಸು, ನಡತೆ, ಇವುಗಳು ಪರಸ್ಪರ ಸಮನಾ ಗಿರಬೇಕು. ಆ ವಿದೇತಿಯಲ್ಲಿ ಇದು ಯಾವದೂ ಇಲ್ಲ. ಆಕೆ ಬಹು ಸುಕು ವಾರಿಯು. ಸ್ತ್ರೀಯರ ಒಲುಮೆಗೆ ತಕ್ಕ ಗುಣಗಳು ಯಾವದೂ ಅವ ನಲ್ಲಿಲ್ಲದ್ದರಿಂದ, ಅವನನ್ನು ತಾನು ವರಿಸಿದ್ದು ಅಸಂಗತವೆಂದು ತಿಳಿದು ಅಸಹ್ಯಪಟ್ಟು, ತನಗೆ ಅನುರೂಪನಾದ ಇನ್ನೊಬ್ಬನನ್ನು ಹುಡುಕೇ ಹುಡು ಕುವಳು. ಸಾಮಾನ್ಯವಾಗಿ ಇದನ್ನು ಎಲ್ಲರೂ ಒಪ್ಪತಕ್ಕದ್ದೇ. ಇದು ಒಪ್ಪತಕ್ಕದ್ದಾದಲ್ಲಿ, ವಿಜಯಧ್ವಜನಂತೆ ಅಂತಪ್ಪ ಗುಣಗಳುಳ್ಳ ಮನುಷ್ಯನು ಇನ್ನೊಬ್ಬನಿಲ್ಲ. ವಿಜಯಧ್ವಜನು ಬಹಳ ಚಾಪಲ್ಯವುಳ್ಳವನು. ಮತ್ತು ಹೊರಗೆ ಸತ್ಯವುಳ್ಳವನಂತೆ ಕಾಣಿಸಿಕೊಳ್ಳುವನು. ಅಂತಃ ಇಲ್ಲ. ಈ ನಟ ನೆಯಿಂದ ಸುಲಭವಾಗಿ ತನ್ನ ಅಂತರಂಗದ ಪ್ರಯೋಜನವನ್ನು ಆಗಮಾಡಿ ಕೊಳ್ಳುವನು ಬೇರೆ ಯಾರೂ ಇಲ್ಲ. ನಿಜವಾಗಿ ಯಾರೂ ಇಲ್ಲ. ಬಹಳ ಚತುರನು. ಅಸಮಯದಲ್ಲಿ ಸಮಯವನ್ನು ಕಲ್ಪಿಸಿಕೊಳ್ಳುವನು. ದುರ್ವಿದ್ಯೆಯಲ್ಲಿ ಬಹು ನಿಪುಣನು, ಇದಲ್ಲದೆ ಯೌವನಸ್ಥನು; ಸುಂದರನು. ಮತ್ತು ಮುಗ್ಧಸಿಯರು ಎಣಿಸತಕ್ಕ ಗುಣಗಳೆಲ್ಲಾ ಅವನಲ್ಲಿದೆ. ನಿಜ ದುರ್ವಿದ್ಯೆಯಲ್ಲಿ ಕೇವಲ ನಿಪುಣನು. ಅವನನ್ನು ಅವಳು ಆಗಲೆ: ಸಂಗ್ರ ಹಿಸಿಕೊಂಡಿರುವಳು. ರಾಷ್ಟ್ರೀಯ-ನೀನು ಹೇಳಿದ್ದನ್ನು ಅವಳ ವಿಷಯದಲ್ಲಿ ನಾನೆಂದಿಗೂ ನಂಬಲಾರೆ. ಅವಳು ಒಳ್ಳೆ ಸ್ವಭಾವವುಳ್ಳವಳು. ದೇವದತ್ತ-ಸ್ವಭಾವ! ತಲೆಕಾಯಿ ! ಅವಳದು ಉಪ್ಪು ಹುಳಿಯನ್ನು ತಿನ್ನ ತಕ್ಕ ಶರೀರವಲ್ಲವೇನೋ ? ಹಾಗೆ ಸ್ವಭಾವ ಒಳ್ಳೇದಾಗಿದ್ದರೆ, ಅವ ನನ್ನು ಎದಿಂಗೂ ವರಿಸುತ್ತಲೇ ಇರಲಿಲ್ಲ. ಸ್ವಭಾವ ! ಹುಣಸೆಕಾಯಿ ! ಅವನ ಕೈಯನ್ನು ಅವಳು ಹಿಡಿದು ಅಮುಕಿದ್ದನ್ನು ನೀನು ನೋಡಲಿಲ್ಲವೆ ? ಅದನ್ನು ನೀನು ಜ್ಞಾಪಕದಲ್ಲಿಟ್ಟಲ್ಲವೆ ? M m